ಬೆಸ್ಕಾಂ ಸಹಾಯವಾಣಿ ಬಳಸಿ : ಸಚಿವೆ ಶೋಭಾ

Use BESCOM Helpline, Shobha
ಬೆಂಗಳೂರು, ಜ.20: ಬೇಸಿಗೆಯಲ್ಲೂ ಗ್ರಾಮೀಣ ಪ್ರದೇಶಕ್ಕೆ 12 ಗಂಟೆಗಳ ಕಾಲ ಸಿಂಗಲ್ ಫೇಸ್ ವಿದ್ಯುತ್ ಪೂರೈಕೆ ಮಾಡಲಾಗುವುದು. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ವಿದ್ಯುತ್ ಸಂಬಂಧಿ ಸಮಸ್ಯೆಗಳನ್ನು ಪರಿಹರಿಸಲು ಸೇವಾ ವಾಹನ ಹಾಗೂ ಸಹಾಯವಾಣಿಯನ್ನು ಆರಂಭಿಸಲಾಗಿದೆ. ಸಾರ್ವಜನಿಕರು ಬೆಸ್ಕಾಂ ವಿಭಾಗದ ಸಹಾಯವಾಣಿಯ ಪ್ರಯೋಜನ ಪಡೆಯಲಿ ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ. ಆದರೆ, ವಿದ್ಯುತ್ ದರ ಏರಿಕೆ ಬಗ್ಗೆ ಸಚಿವೆ ಯಾವುದೇ ಸುಳಿವು ನೀಡಲಿಲ್ಲ.

ರೈತರ ಅನುಕೂಲಕ್ಕಾಗಿ ಬೇಸಿಗೆಯಲ್ಲೂ 6 ಗಂಟೆಗಳ ಕಾಲ ಮೂರು ಫೇಸ್ ಹಾಗೂ ಗ್ರಾಮೀಣ ಪ್ರದೇಶದ ಮಕ್ಕಳ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ಸಂಜೆ 6 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೂ ಸಿಂಗಲ್ ಫೇಸ್ ವಿದ್ಯುತ್ ಪೂರೈಕೆ ಮಾಡಲಾಗುವುದು ಎಂದು ಹೇಳಿದರು.

ಬೆಸ್ಕಾಂನಲ್ಲಿ ವಿದ್ಯುತ್ ಸಾಗಿಸುವಾಗ ಉಂಟಾಗುವ ಸೋರಿಕೆಯ ಪ್ರಮಾಣ ಶೇ.15 ರಿಂದ 13ಕ್ಕೆ ಇಳಿಕೆಯಾಗಿದೆ. ಉಳಿದಂತೆ ಮೆಸ್ಕಾಂ, ಹೆಸ್ಕಾಂ, ಜೆಸ್ಕಾಂಗಳಲ್ಲಿ ಈ ಪ್ರಮಾಣ ಶೇ.22ಕ್ಕೆ ಏರಿಕೆಯಾಗಿದೆ. ವಿದ್ಯುತ್ ಸೋರಿಕೆಯನ್ನೂ ಪೂರ್ಣಪ್ರಮಾಣದಲ್ಲಿ ತಡೆಗಟ್ಟಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸಹಾಯವಾಣಿ : ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ವಿದ್ಯುತ್ ಸಂಬಂಧಿ ಸಮಸ್ಯೆಗಳ ಪರಿಹರಿಸುವ ಹಿನ್ನೆಲೆಯಲ್ಲಿ ನೂತನ ಸೇವಾ ವಾಹನಗಳಿಗೆ ಸಚಿವೆ ಶೋಭಾ ಚಾಲನೆ ನೀಡಿದರು. ಬೆಸ್ಕಾಂನ ವ್ಯಾಪ್ತಿಯ ಗ್ರಾಹಕರ ಅನುಕೂಲಕ್ಕಾಗಿ 58 ವಾಹನಗಳನ್ನು ಸೇವೆಗೆ ನಿಯೋಜಿಸಲಾಗಿದೆ. ಸದ್ಯಕ್ಕೆ 12 ವಾಹನಗಳು ಕಾರ್ಯಾರಂಭ ಮಾಡಿದ್ದು, ಈ ತಿಂಗಳ ಅಂತ್ಯದೊಳಗಾಗಿ ಉಳಿದ ವಾಹನಗಳು ಸೇವೆ ಆರಂಭಿಸಲಿವೆ.

ದಿನದ 24 ಗಂಟೆಯೂ ಸಾರ್ವಜನಿಕರು ಟೋಲ್ ಫ್ರೀ ದೂರವಾಣಿ- (080) 2287 3333 ಸಂಖ್ಯೆಗೆ ಕರೆಮಾಡಿ ಸಹಾಯ ಪಡೆಯಬಹುದಾಗಿದೆ. ಕರೆ ಮಾಡಿದ ಕೂಡಲೇ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಸೇವೆ ನೀಡಲಿದ್ದು, ಪ್ರತಿ ವಾಹನದಲ್ಲಿ ಐದು ಮಂದಿ ಸಿಬ್ಬಂದಿ ಇದ್ದು, ಯಾವುದೇ ವಿದ್ಯುತ್ ಸಂಬಂಧಿ ಸಮಸ್ಯೆಗಳಿದ್ದರೂ ಸೇವೆ ನೀಡಲಿದ್ದಾರೆ. [ಶೋಭಾ ಕರಂದ್ಲಾಜೆ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+