ಪಾಕ್ ಭೂಕಂಪ: ಉತ್ತರ ಭಾರತದಲ್ಲಿ ನಡುಕ

Earthquake in Pakistan shudders chilly Delhi
ನವದೆಹಲಿ, ಜ.19: ಪಾಕಿಸ್ತಾನದ ನೈರುತ್ಯ ಭಾಗದಲ್ಲಿ ಇಂದು ಮುಂಜಾನೆ 2 ಗಂಟೆ(IST) ಸುಮಾರಿಗೆ ಶಕ್ತಿಯುತ ಭೂಕಂಪನವಾಗಿದ್ದು ರಿಕ್ಟರ್ ಮಾಪಕದಲ್ಲಿ 7.4 ದಾಖಲಾಗಿದೆ. ಈ ಭೂಕಂಪದ ಪರಿಣಾಮವಾಗಿ ಉತ್ತರ ಭಾರತದ ದೆಹಲಿ, ರಾಜಸ್ಥಾನ, ಹರ್ಯಾಣ, ನೋಯ್ಡಾ ಹಾಗೂ ಗುರ್ ಗಾಂವ್ ನ ಕೆಲ ಭಾಗಗಳಲ್ಲಿ ಭೂ ನಡುಕದ ಅನುಭವ ಉಂಟಾಗಿದೆ.

ಭಾರತದಲ್ಲಿ ಈ ಕಂಪನದ ಪರಿಣಾಮವಾಗಿ ಯಾವುದೇ ಸಾವು, ನೋವು ಸಂಭವಿಸಿದ ವರದಿ ಬಂದಿಲ್ಲ. ಪಾಕಿಸ್ತಾನದಲ್ಲಿ ಗೋಡೆ ಕುಸಿತದಿಂದ ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ.

ಚಳಿ ತಡೆಯಲಾರದೆ ಬೆಚ್ಚಗೆ ಹೊದ್ದು ಮಲಗಿದ್ದ ದೆಹಲಿಯ ನಿವಾಸಿಗಳಿಗೆ ಕಂಪನದ ಅನುಭವವಾದ ನಂತರ ನಿದ್ರೆ ಮರೆತು ರಾತ್ರಿಯೆಲ್ಲಾ ಜಾಗರಣೆ ಮಾಡಿದ್ದಾರೆ. ದೆಹಲಿ ಸುತ್ತಮುತ್ತಲಿನ ಪ್ರದೇಶವಲ್ಲದೆ ಜೈಪುರ, ಬರ್ಮಾರ್, ಗಂಗಾನಗರ ಹಾಗೂ ಜೈಸ್ಮಲೇರ್ ಭಾಗದಲ್ಲೂ ಕಂಪನದ ಅನುಭವವಾದ ವರದಿಗಳು ಬಂದಿವೆ.

ಇರಾನ್ ಹಾಗೂ ಆಫ್ಘಾನಿಸ್ತಾನಾದ ಗಡಿ ಭಾಗದ ಮರಭೂಮಿಯಲ್ಲಿ ಪಾಕಿಸ್ತಾನದಲ್ಲಿ ಈ ಕಂಪನ ಸಂಭವಿಸಿದೆ ಹಾಗಾಗಿ ಕಂಪನದ ತೀವ್ರತೆಯ ಪರಿಣಾಮ ನಗರಗಳಿಗೆ ತಟ್ಟಿಲ್ಲ. ಯಾವುದೇ ಸೋವು ನೋವಿನ ವರದಿ ಸಿಕ್ಕಿಲ್ಲ ಎಂದು ಭಾರತದ ಹವಾಮಾನ ಇಲಾಖೆ(IMD) ತಿಳಿಸಿದೆ. [ಪಾಕಿಸ್ತಾನ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+