ಫೇಸ್‌ಬುಕ್‌ನಲ್ಲಿ ಗಂಗೂಲಿ ಪರ ಬೃಹತ್ ಜಾಥಾ

Facebook's Ganguly fans plan protest march
ಕೋಲ್ಕತ್ತಾ, ಜ.15: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿಯನ್ನು ಐಪಿಎಲ್ 4ರಲ್ಲಿ ಕಡೆಗಣಿಸಿರುವ ಬಗ್ಗೆ ಅವರ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಜನಪ್ರಿಯ ಸಾಮಾಜಿಕ ತಾಣ ಫೇಸ್‌ಬುಕ್‌ನ ಗಂಗೂಲಿ ಅಭಿಮಾನಿಗಳ ಬಳಗ ಪ್ರತಿಭಟನೆಗೆ ಮುಂದಾಗಿದೆ. ಗಂಗೂಲಿಯನ್ನು ತಂಡಕ್ಕೆ ಸೇರಿಸಿಕೊಳ್ಳುವಂತೆ ಆಗ್ರಹಿಸಿ ಅವರೆಲ್ಲಾ ಮೌನ ಪ್ರತಿಭಟನೆಗೆ ಇಳಿದಿದ್ದಾರೆ.

''No Dada No KKR'' ಎಂಬ ಘೋಷವಾಕ್ಯಗಳೊಂದಿಗೆ ಫೇಸ್‌ಬುಕ್‌ನಲ್ಲಿ ಈಗಾಗಲೆ ಪ್ರತಿಭಟನೆಯ ಕಾವು ಜೋರಾಗಿದೆ. ಫೇಸ್‌ಬುಕ್ ಬಳಗದ 2200ಕ್ಕೂ ಹೆಚ್ಚು ಅಭಿಮಾನಿಗಳು ಭಾನುವಾರ (ಜ.16) ಕೋಲ್ಕತ್ತಾದ ವಿಕ್ಟೋರಿಯಾ ಸ್ಮಾರಕದಿಂದ ಈಡನ್ ಗಾರ್ಡನ್ಸ್ ತನಕ ಮೌನ ಮೆರವಣಿಗೆಯ ಮೂಲಕ ಪ್ರತಿಭಟಿಸಲಿದ್ದಾರೆ.

ಭಾರತೀಯ ಕ್ರಿಕೆಟ್ ಇತಿಹಾಸಲ್ಲಿ ಗಂಗೂಲಿ ಯಶಸ್ವಿ ನಾಯಕ ಎನ್ನಿಸಿಕೊಂಡಿದ್ದರು. ಕೋಲ್ಕತ್ತಾ ನೈಟ್ ರೈಡರ್ ತಂಡ ಗಂಗೂಲಿಯನ್ನು ಕಡೆಗಣಿಸಿರುವುದು ನಮಗೆ ತೀವ್ರ ನಿರಾಸೆ ಉಂಟು ಮಾಡಿದೆ. ಹಾಗಾಗಿ ಈ ಮೌನ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೇವೆ ಎಂದು ಫೇಸ್‌ಬುಕ್ ಬಳಗದ ಸದಸ್ಯರೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಮತ್ತೊಂದು ಜನಪ್ರಿಯ ಸಾಮಾಜಿಕ ಸಂಪರ್ಕ ತಾಣ ಆರ್ಕುಟ್‌ನ 'No Ganguly... No Eden' ಬಳಗವೂ ಫೇಸ್‌ಬುಕ್ ಬಳಗದ ಜೊತೆ ಕೈಜೋಡಿಸಿ ಬೆಂಬಲ ವ್ಯಕ್ತಪಡಿಸಿದೆ. ಈ ಬಳಗದ 500 ಮಂದಿ ಸದಸ್ಯರು ಮೌನ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಒಟ್ಟಿನಲ್ಲಿ ಗಂಗೂಲಿ ಪರ ಅಂತರ್ಜಾಲದಲ್ಲಿ ಎದ್ದಿರುವ ಅಲೆ ಐಪಿಎಲ್ 4 ತಂಡಗಳ ಪಾಲಿಗೆ ಎಷ್ಟರ ಮಟ್ಟಿಗೆ ಬಿಸಿ ತಟ್ಟುತ್ತದೆ ಎಂಬುದು ಕಾದು ನೋಡಬೇಕು. [ಐಪಿಎಲ್]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+