ಪ್ರತಿ ಗ್ರಾಮಕ್ಕೂ ಬ್ರಾಡ್ ಬ್ಯಾಂಡ್ ಸಂಪರ್ಕ

2012ರ ಮಧ್ಯಂತರದ ವೇಳೆಗೆ ಸುಮಾರು 2,50,000 ಗ್ರಾಮ ಪಂಚಾಯತಿಗಳು ಬ್ರಾಡ್ ಬ್ಯಾಂಡ್ ಇಂಟರ್ ನೆಟ್ ಸಂಪರ್ಕ ಹೊಂದಲಿವೆ. ಸುಮಾರು 4 ಬಿಲಿಯನ್ ಮೌಲ್ಯದ ಯೋಜನೆ ಇದಾಗಿದ್ದು, ಬಡವರ್ಗಕ್ಕೆ ತಂತ್ರಜ್ಞಾನದ ಪ್ರಯೋಜನವನ್ನು ತಲುಪುವಂತೆ ಮಾಡುವುದು ಮೂಲ ಉದ್ದೇಶ ಎಂದು ಪಿತ್ರೋಡಾ ಹೇಳಿದರು.
ಮುಂದಿನ 18 ತಿಂಗಳೊಳಗೆ ಇಂಟರ್ ನೆಟ್ ಸಂಪರ್ಕ ಕಲ್ಪಿಸಲಾಗುವುದು. ನೆಟ್ ವರ್ಕ್ ನಿರ್ವಹಣೆ ಹೊಣೆಯನ್ನು ಆಯಾ ಗ್ರಾಮ ಪಂಚಾಯತಿಗಳಿಗೆ ವಹಿಸಿಕೊಡಲಾಗುತ್ತದೆ. ಈಗಾಗಲೇ ಸುಮಾರು 100,000 ಗ್ರಾಮ ಪಂಚಾಯತಿಗಳಿಗೆ ಹೈ ಸ್ಪೀಡ್ ಇಂಟರ್ ನೆಟ್ ಸಂಪರ್ಕ ನೀಡಲಾಗಿದೆ. ಗ್ರಾಮೀಣ ಭಾಗಗಳಿಗೆ ಬ್ರಾಡ್ ಬ್ಯಾಂಡ್ ಇಂಟರ್ ನೆಟ್ ಸೌಲಭ್ಯ ಸಿಗುವುದರಿಂದ ಟೆಲಿ ಮೆಡಿಸಿನ್, ವಾತಾವರಣ ಮುನ್ಸೂಚನೆ, ರೈತರಿಗೆ ಬೆಳೆ, ಮಾರುಕಟ್ಟೆ ಹಾಗೂ ಕೃಷಿ ನಿರ್ವಹಣೆ ಬಗ್ಗೆ ದೂರ ಸಂವೇದಿ ಸಂಪರ್ಕ ಸಲಹೆಗಳನ್ನು ನೀಡಲು ಸಾಧ್ಯವಾಗುತ್ತದೆ ಎಂದು ಪಿತ್ರೋಡಾ ವಿವರಿಸಿದರು.
ಇದಲ್ಲದೆ ದೂರ ಸಂಪರ್ಕ ಇಲಾಖೆಯ Universal Service Obligation Fund(USOF) ನ ಆರ್ಥಿಕ ಸೌಲಭ್ಯ ಯೋಜನೆಗೆ ಅನುಗುಣವಾಗಿ ಗ್ರಾಮೀಣ ಭಾಗದಲ್ಲಿ ಬ್ರಾಡ್ ಬ್ಯಾಂಡ್ ಸೌಲಭ್ಯ ನೀಡಲಾಗುತ್ತದೆ. ಈ ಸೌಲಭ್ಯ ಪಡೆಯುವ ಗ್ರಾಮೀಣ ಜನರಿಗೆ ನೋಂದಣಿ, ಮೋಡೆಮ್, ಸುರಕ್ಷಿತ ಠೇವಣಿ, ಅಳವಡಿಕೆ ವೆಚ್ಚ ಮುಂತಾದ ಹೊರೆಯನ್ನು ಹೊರೆಸಿಲ್ಲ. [ಬ್ರಾಡ್ ಬ್ಯಾಂಡ್]












Click it and Unblock the Notifications