ಆಯತಪ್ಪಿ ಬಿದ್ದು ಸಿಸ್ಕೋ ಉದ್ಯೋಗಿ ಸಾವು
ಬೆಂಗಳೂರು,
ಜ. 7 : ಸಿಸ್ಕೋ ಸಾಫ್ಟ್ ವೇರ್ ಕಂಪನಿ ಉದ್ಯೋಗಿಯೊಬ್ಬರು ಅಪಾರ್ಟ್ ಮೆಂಟ್ ನ ಏಳನೇ ಮಹಡಿಯಿಂದ ಆಯತಪ್ಪಿ ಕೆಳಗೆ ಬಿದ್ದು ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ವೈಟ್ ಫೀಲ್ಡ್ ನ ಮುಖ್ಯರಸ್ತೆಯಲ್ಲಿರುವ ಬ್ರಿಗೇಡ್ ಹಾರ್ಮೋನಿ ಅಪಾರ್ಟ್ ಮೆಂಟ್ ನಲ್ಲಿ ಗುರುವಾರ ಸಂಜೆ ನಡೆದಿದೆ. id="toptextpromo">ಕೊಲ್ಕತ್ತಾ
ಮೂಲದ ಪಾರಿಜಾತ ಬ್ಯಾನರ್ಜಿ(35) ಮೃತಪಟ್ಟ ದುರ್ದೈವಿ. ಬನ್ನೇರುಘಟ್ಟ ರಸ್ತೆಯಲ್ಲಿರುವ ಮಂತ್ರಿ ಅಪಾರ್ಟ್ ಮೆಂಟ್ ನಲ್ಲಿ ಅವರು ವಾಸವಾಗಿದ್ದರು. ಸಿಸ್ಕೋ ಕಂಪನಿಯ ಟ್ರವಲ್ ಡೆಸ್ಕ್ ನಲ್ಲಿ ಮೂರು ವರ್ಷಗಳಿಂದ ಮ್ಯಾನೇಜರ್ ಆಗಿ ಪಾರಿಜಾತ ಕೆಲಸ ಮಾಡುತ್ತಿದ್ದರು. ರೂಪಾ ಬ್ಯಾನರ್ಜಿ ಎಂಬುವವರನ್ನು ವಿವಾಹವಾಗಿದ್ದ ಪಾರಿಜಾತ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಕಳೆದ ಕೆಲ ತಿಂಗಳ ಹಿಂದೆಯಷ್ಟೇ ಬ್ರಿಗೇಡ್ ಹಾರ್ಮೋನಿ ಅಪಾರ್ಟ್ ಮೆಂಟ್ ನಿಂದ ಬನ್ನೇರುಘಟ್ಟ ರಸ್ತೆಯಲ್ಲಿರುವ ಮಂತ್ರಿ ಅಪಾರ್ಟ್ ಮೆಂಟ್ ಅವರು ಶಿಫ್ಟ್ ಆಗಿದ್ದರು. id='are-slot-1' class='oiad oi-axt oiadv'> id='top-searched-articles'>ಬ್ರಿಗೇಡ್
ಹಾರ್ಮೋನಿ ಅಪಾರ್ಟ್ ಮೆಂಟ್ ನಲ್ಲಿರುವ ಫ್ಲಾಟ್ ನ್ನು ಮಾರಾಟ ಮಾಡಲು ಪಾರಿಜಾತ ಉದ್ದೇಶಿಸಿದ್ದರು. ಹೀಗಾಗಿ ವ್ಯಕ್ತಿಯೊಬ್ಬರಿಗೆ ಫ್ಲಾಟ್ ತೋರಿಸಲು ಬ್ರಿಗೇಡ್ ಹಾರ್ಮೋನಿ ಅಪಾರ್ಟ್ ಮೆಂಟ್ ಗೆ ಬಂದಿದ್ದಾಗ ಈ ಅವಘಡ ಸಂಭವಿಸಿದೆ.(ಕ್ರೈಂ)











Click it and Unblock the Notifications