ಬಿಬಿಎಂಪಿ ಸದಸ್ಯರ ವೇತನ ಹೆಚ್ಚಳ
ಬೆಂಗಳೂರು,
ಜ. 7 : ರಾಜ್ಯ ಬಿಜೆಪಿ ಸರಕಾರ ಬಿಬಿಎಂಪಿ ಮೇಯರ್, ಉಪಮೇಯರ್ ಹಾಗೂ ಸದಸ್ಯರಿಗೆ ಹೊಸವರ್ಷಕ್ಕೆ ನೂತನ ಉಡುಗೊರೆ ನೀಡಿದೆ. ಮೇಯರ್ ಗೆ 20 ಸಾವಿರ, ಉಪಮೇಯರ್ ಗೆ 15 ಸಾವಿರ ಮತ್ತು ಸದಸ್ಯರಿಗೆ 7,500 ರುಪಾಯಿ ವೇತನ ಹೆಚ್ಚಳ ಮಾಡಿ ಸರಕಾರ ಆದೇಶ ಹೊರಡಿಸಿದೆ. id="toptextpromo">ಈ
ಹಿಂದೆ ಮೇಯರ್ ಗೆ 7,500, ಉಪಮೇಯರ್ ಗೆ 5 ಹಾಗೂ ಸದಸ್ಯರಿಗೆ 2,500 ರುಪಾಯಿ ವೇತನವಿತ್ತು. 1997ರಲ್ಲಿ ವೇತನ ಪರಿಷ್ಕರಿಸಲಾಗಿತ್ತು. ಇದೀಗ 14 ವರ್ಷಗಳ ನಂತರ ವೇತನ ಹೆಚ್ಚಳ ಮಾಡಲಾಗಿದೆ. ಕಾರ್ಪೋರೇಟರ್ ಗಳ ಸಂಬಳ ಹೆಚ್ಚಳ ಹೆಚ್ಚಳ ಮಾಡಿರುವ ಸರಕಾರ ಕ್ರಮವನ್ನು ಆಡಳಿತ ಪಕ್ಷದ ನಾಯಕ ಸತ್ಯನಾರಾಯಣ ಸ್ವಾಗತಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಸ್ಥಾಯಿ
ಸಮಿತಿ ತಿಂಗಳಿಗೆ ಎರಡೇ ಸಭೆ ನಡೆಸಬೇಕು. ಸಭೆ ಹಾಜರು ವೆಚ್ಚದಲ್ಲಿ ಬದಲಾವಣೆ ಆಗದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಸತ್ಯಾನಾರಾಯಣ, ಸಭೆಗಳಲ್ಲಿ ಹಾಜರು ಭತ್ಯೆಯನ್ನು ಹಿಂದಿನಂತೆಯೇ ಮುಂದುವರಿಸಿಕೊಂಡು ಹೋಗುವ ನಿಬಂಧನೆ ಹಾಕಿರುವುದು ಸರಿಯಲ್ಲ. ಸಭೆಗಳಲ್ಲಿ ಹಾಜರಾಗುವ ಭತ್ಯೆಗಳನ್ನು ಹೆಚ್ಚಿಸಬೇಕು ಎಂದು ಅವರು ಹೇಳಿದ್ದಾರೆ.(ಬಿಬಿಎಂಪಿ)











Click it and Unblock the Notifications