ಚಂಡೀಗಡದಲ್ಲಿ ವೃದ್ದೆಯ ಅತ್ಯಾಚಾರ, ಕೊಲೆ?
ಚಂಡೀಗಡ,
ಜ. 7: ಮಾನವ ಕುಲವೇ ತಲೆತಗ್ಗಿಸುವಂತ ಘಟನೆ ಚಂಡೀಗಡದಲ್ಲಿ ನಡೆದಿದೆ. 75 ವರ್ಷದ ವಯೋವೃದ್ದೆಯ ಮೇಲೆ ಅತ್ಯಾಚಾರ ಎಸಗಿ ನಂತರ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ವಾರದ ನಂತರ ಬೆಳಕಿಗೆ ನಡೆದಿದೆ. id="toptextpromo">ಮೃತಪಟ್ಟ
ವೃದ್ದೆ ಪಂಜಾಬ್ ಹಂಗಾಮಿ ಅಡ್ವಕೇಟ್ ಜನರಲ್ ಅವರ ಅತ್ತೆ. ಪ್ರತಿಷ್ಟಿತ ಸೆಕ್ಟರ್ 21ರಲ್ಲಿ ಈ ಘಟನೆ ನಡೆದಿದೆ. ಮೃತಪಟ್ಟ ವೃದ್ದೆ ಮನೆಯಲ್ಲಿ ಒಬ್ಬರೇ ವಾಸವಾಗಿದ್ದರು. ಶವ ಕೊಳೆತು ನಾರುತ್ತಿದ್ದು, ಒಂದು ವಾರದ ಕೆಳಗೆ ಈ ಘಟನೆ ನಡೆದಿರಬಹುದೆಂದು ಮತ್ತು ಅತ್ಯಾಚಾರವೆಸಗಿ ಪಾತಕಿಗಳು ಹತ್ಯೆ ಮಾಡಿರಬಹುದೆಂದು ಪೊಲೀಸರು ಶಂಕೆ ವ್ಯಕ್ತ ಪಡಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾಗುವುದೆಂದು ಪೋಲಿಸ್ ಆಯುಕ್ತ ನಾನಿಹಾಲ್ ಸಿಂಗ್ ಹೇಳಿಕೆ ನೀಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>15
ದಿನಗಳ ಕೆಳಗೆ 5 ವರ್ಷದ ಬಾಲಕನನ್ನು ಅಪಹರಿಸಿ ಕೊಲೆಗೈಯಲಾಗಿತ್ತು. ಇದರ ಬಗ್ಗೆಯೂ ಪೊಲೀಸರಿಗೆ ಯಾವುದೇ ಸುಳಿವು ಇದುವರೆಗೆ ಲಭ್ಯವಾಗಿಲ್ಲ. ಈ ಎರಡು ಘಟನೆಯ ನಂತರ ಚಂಡೀಗಡ ಪೋಲಿಸ್ ಇಲಾಖೆ ಜನತೆಯ ತೀವ್ರ ಟೀಕೆಗೆ ಒಳಗಾಗಿದೆ.(ಕ್ರೈಂ)











Click it and Unblock the Notifications