ಮೋಟೊರೊಲಾದಿಂದ ಹೊಸ 4ಜಿ ಸ್ಮಾರ್ಟ್ ಫೋನ್

ಸ್ಮಾರ್ಟ್ ಫೋನ್ ಜಗತ್ತಿನಲ್ಲಿ ಅತ್ಯಂತ ಶಕ್ತಿಯುತ ಮೊಬೈಲ್ ಎಂಬ ಟ್ಯಾಕ್ ನೊಂದಿಗೆ ಬಂದಿರುವ ಮೋಟೊರೊಲಾದ ಏಟ್ರಿಕ್ಸ್ ನಲ್ಲಿ ಉತ್ತಮ ಸೌಲಭ್ಯಗಳಿವೆ. 4 ಇಂಚಿನ qHD ದರ್ಶಕವಿದ್ದು, ಟಚ್ ಸ್ಕ್ರೀನ್ ನ ನಿಜ ಅನುಭವ ಸಿಗುತ್ತದೆ. ಡುಯಲ್ ಕೋರ್ 1GHz Nvidia ಟೆಗ್ರಾ SoC ಪ್ರೊಸೆಸರ್ ಹೊಂದಿದ್ದು, 1ಜಿಬಿ RAM ಇದೆ.
16 GB ಆಂತರಿಕ ಮೆಮೋರಿ ಜೊತೆಗೆ ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 32 ಜಿಬಿ ವರೆಗೂ ಮೆಮೋರಿ ವಿಸ್ತರಣೆ ಸಾಧ್ಯವಿದೆ. ಫ್ರಾಯೋ OS ಸದ್ಯದಲ್ಲೇ ಜಿಂಜರ್ ಬ್ರೆಡ್ ಗೆ ಸುಧಾರಣೆಗೊಳ್ಳಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಏಟಿಕ್ಸ್ ನಲ್ಲಿ 5 ಮೆಗಾ ಪಿಕ್ಸಲ್ ಕೆಮೆರಾ, LED ಫ್ಲಾಶ್, ಮುಂಬದಿಯಲ್ಲಿ ವೀಡಿಯೋ ಕಾಲಿಂಗ್ ಗಾಗಿ ಪ್ರತ್ಯೇಕ VGA ಕೆಮೆರಾ ಸೌಲಭ್ಯವಿದೆ.
ಸೌಲಭ್ಯಗಳ ಖಜಾನೆ : ಮೋಟೊರೊಲಾ ಏಟ್ರಿಕ್ಸ್ ಸೌಲಭ್ಯಗಳ ಖಜಾನೆ ಎನ್ನಬಹುದು. HD ಮಲ್ಟಿಮೀಡಿಯಾ ಡಾಕ್ ಹಾಗೂ ಲ್ಯಾಪ್ ಟಾಪ್ ಡಾಕ್ ಇರುವುದರಿಂದ ಸ್ಮಾರ್ಟ್ ಫೋನ್ ನಿಜವಾಗಿಯೂ ಸ್ಮಾರ್ಟ್ ಆಗಿ ನೆಟ್ ಬುಕ್ ರೀತಿ ಉಪಯೋಗಕ್ಕೆ ಬರುತ್ತದೆ. ಪವರ್ ಕನೆಕ್ಟರ್, 3 USB ಕನೆಕ್ಟ್ ಪೋರ್ಟ್ ಗಳು ಹಾಗೂ HDMI ಔಟ್ ಪುಟ್ ಅಲ್ಲದೆ ಇನ್ಪ್ರಾ ರೆಡ್ ರಿಮೋಟ್ ಸೌಲಭ್ಯವಿದೆ. ಲ್ಯಾಪ್ ಟಾಪ್ ಡಾಕ್ ಬಳಸಲು 2 USB ಪೋರ್ಟ್ ಗಳು, ಕೀ ಬೋರ್ಡ್ ಹಾಗೂ ಟ್ರಾಕ್ ಪಾಡ್ ,11.6 ಇಂಚಿನ ವಿಸ್ತೃತ ಡಿಸ್ ಪ್ಲೇ ಸಹಾ ಇದೆ.
ಮೋಟೊರೊಲಾ ಏಟ್ರಿಕ್ಸ್ ನ ವಿಶೇಷತೆಗಳು:
* ಆಡ್ರ್ಯಾಂಡ್ 2.2 ಫ್ರಾಯೋ ಆಪರೇಟಿಂಗ್ ಸಿಸ್ಟಮ್
* ಡುಯಲ್ ಕೋರ್ 1GHz Nvidia ಟೆಗ್ರಾ SoC ಪ್ರೊಸೆಸರ್
* 5 ಮೆಗಾ ಪಿಕ್ಸಲ್ ಕೆಮೆರಾ LED ಫ್ಲಾಶ್ ಸಹಿತ ಹಾಗೂ VGA ಕೆಮೆರಾ
* 16 GB ಆಂತರಿಕ ಮೆಮೋರಿ, 1GB RAM
* ಫಿಂಗರ್ ಪ್ರಿಂಟ್ ರೆಕಗ್ನಿಷನ್
* ಅಡೋಬ್ ಫ್ಲಾಶ್ 10.1 ಬೆಂಬಲಿತ
* ವೈ-ಫೈ802.11 b/g/n
*ಬ್ಲೂ ಟೂಥ್ 2.1+EDR
* ಮೊಬೈಲ್ ಟಿವಿ ಲೈವ್
* 1930 mAh lithium ಸೆಲ್ ಬ್ಯಾಟರಿ
* 4ಜಿ, ಆಡ್ರ್ಯಾಂಡ್ ಅಪ್ಲಿಕೇಷನ್ ಗಳು
* ಲ್ಯಾಪ್ ಟ್ಯಾಪ್ ಡಾಕ್, ಮಲ್ಟಿಮೀಡಿಯಾ ಡಾಕ್ ಹಾಗೂ ನ್ಯಾವಿಕೇಷನ್ ಗೆ ವೆಹಿಕಲ್ ಡಾಕ್
2011 ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ 136ಗ್ರಾಂ ತೂಕದ ಮೋಟೊರೊಲಾಮೋಟೊರೊಲಾ ಏಟ್ರಿಕ್ಸ್ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಯಿದ್ದು, ಈ ಮೊಬೈಲ್ ನ ಬೆಲೆ ಇನ್ನೂ ನಿರ್ಧಾರವಾಗಿಲ್ಲ ಎಂದು ಸಂಸ್ಥೆ ಪ್ರಕಟಿಸಿದೆ. [ಆಂಡ್ರ್ಯಾಡ್]












Click it and Unblock the Notifications