ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫಲಿತಾಂಶ : ಮುಂದೆ ಬಿಜೆಪಿ, ಹಿಂದೆ ಕೈ, ಜೆಡಿಎಸ್

By Mrutyunjaya Kalmat
|
Google Oneindia Kannada News

BJP-Congress logo
ಬೆಂಗಳೂರು, ಜ. 4 : ಉತ್ತರ ಕರ್ನಾಟಕದ ಕೆಲ ಕಡೆಗಳಲ್ಲಿ ಬಿಜೆಪಿ ಸೋತರೂ ಲಿಂಗಾಯಿತ ಮತದಾರರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಬಿಜೆಪಿ ತಕ್ಕ ಮಟ್ಟಿಗೆ ಯಶಸ್ವಿಯಾಗಿದೆ. ಆದರೆ, ಈ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಸಮನಾಗಿ ಕ್ಷೇತ್ರಗಳನ್ನು ಹಂಚಿಕೊಂಡಿದ್ದು. ಮುಖ್ಯವಾಗಿ ದಕ್ಷಿಣ ಕರ್ನಾಟಕದಲ್ಲಿ ಬಹುತೇಕ ಕ್ಷೇತ್ರಗಳನ್ನು ಈ ಎರಡು ಪಕ್ಷಗಳು ಹಂಚಿಕೊಂಡಿವೆ.

ಇತ್ತೀಚೆಗೆ ವರದಿ ಬಂದಾಗ, 30 ಜಿಲ್ಲಾ ಪಂಚಾಯತಿ ಕ್ಷೇತ್ರಗಳಲ್ಲಿ ಬಿಜೆಪಿ 12 ರಲ್ಲಿ ಜಯಗಳಿಸಿದ್ದರೆ, ಜೆಡಿಎಸ್ 3 ರಲ್ಲಿ ಮತ್ತು ಕಾಂಗ್ರೆಸ್ ನಾಲ್ಕರಲ್ಲಿ ವಿಜಯದ ನಗೆ ಬೀರಿದೆ. ಕೊಪ್ಪಳ, ಕೋಲಾರ ಅತಂತ್ರ ಜಿಲ್ಲಾ ಪಂಚಾಯತಿ ನಿರ್ಮಾಣವಾಗಿದೆ. ಮಂಡ್ಯ, ತುಮಕೂರು ಮತ್ತು ಹಾಸನದಲ್ಲಿ ಜೆಡಿಎಸ್ ಭರ್ಜರಿ ಗೆಲುವು ಸಾಧಿಸುವ ಮೂಲಕ ಮಾಜಿ ಸಿಎಂ ಕುಮಾರಸ್ವಾಮಿ, ಮಾಜಿ ಪಿಎಂ ದೇವೇಗೌಡ ತಮ್ಮ ಶಕ್ತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

170 ತಾಪಂ ಕ್ಷೇತ್ರಗಳಲ್ಲಿ 110ರಲ್ಲಿ ಫಲಿತಾಂಶ ಹೊರಬಿದ್ದಿದ್ದು, 45 ಬಿಜೆಪಿ, 20 ಕಾಂಗ್ರೆಸ್ ಮತ್ತು 23 ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲುವು ಸಾಧಿಸಿದೆ. ಕಳೆದ ಜಿಪಂ ಚುನಾವಣೆಯಲ್ಲಿ ಕಾಂಗ್ರೆಸ್ 17 ಜಿಪಂ ಕ್ಷೇತ್ರಗಳನ್ನು ಹೊಂದಿತ್ತು. ಇದೀಗ ಅವರ ಸಂಖ್ಯೆ ಕುಸಿದಿದೆ. ಜೆಡಿಎಸ್ 2 ಜಿಪಂ ನಲ್ಲಿ ಜಯ ಸಾಧಿಸಿತ್ತು. ಇದೀಗ ಅದರ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದೆ.

English summary
Ruling BJP more and Congress and JDS getting equal lead in in Karataka ZP and TP poll. Out of 30 ZP seats BJP 11, JDS and Congress getting 4 Zilla panchayat seats so far at 12 noon. Congress has won 22 out of 35 ZP so far at 11 AM.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X