ಬನ್ನೇರುಘಟ್ಟದಲ್ಲಿ ನೈಟ್ ಸಫಾರಿಗೆ ಗ್ರೀನ್ ಸಿಗ್ನಲ್

ರಾತ್ರಿ ಸಫಾರಿಗಾಗಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಗುರುತಿಸಿರುವ ಪ್ರದೇಶಗಳನ್ನು ಶುಚಿಯಾಗಿಡಬೇಕು. ವನ್ಯಪ್ರಾಣಿಗಳ ಜೀವಕ್ಕೆ ಹಾಗೂ ಪ್ರಾಕೃತಿಕ ಸಂಪನ್ಮೂಲಗಳಿಗೆ ಧಕ್ಕೆ ಮಾಡದ ರೀತಿಯಲ್ಲಿ ಯೋಜನೆಯನ್ನು ಪ್ರಾರಂಭಿಸಬೇಕು. ಸಾರ್ವಜನಿಕರ ಹಾಗೂ ವನ್ಯಜೀವಿಗಳ ಸಂರಕ್ಷಣೆಗೆ ಹೆಚ್ಚಿನ ಭದ್ರತೆಯನ್ನು ಒದಗಿಸಬೇಕು ಎಂದು ವಿಭಾಗೀಯ ಪೀಠ ಸರಕಾರಕ್ಕೆ ನಿರ್ದೇಶನ ನೀಡಿದೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅನ್ವಯ ರಾಷ್ಟ್ರೀಯ ಉದ್ಯಾನವನಗಳಲ್ಲಿ ರಾತ್ರಿ ಸಫಾರಿ ನಡೆಸುವಂತಿಲ್ಲ. ಇದರಿಂದ ವನ್ಯಪ್ರಾಣಿ ಹಾಗೂ ನೈಸರ್ಗಿಕ ಸಂಪನ್ಮೂಲಗಳಿಗೆ ತೊಂದರೆಯಾಗುವ ಹಿನ್ನೆಲೆಯಲ್ಲಿ ಯೋಜನೆಯನ್ನು ಪ್ರಾರಂಭಿಸಲು ಅನುಮತಿ ನೀಡಬಾರದು ಎಂದು ದೀಪಕ್ ಅವರು ಮನವಿ ಮಾಡಿದ್ದರು.
ವನ್ಯಜೀವಿಗಳ ಮತ್ತು ಉದ್ಯಾನವನಕ್ಕೆ ಯಾವುದೇ ರೀತಿ ಧಕ್ಕೆ ಬಾರದಂತೆ ಯೋಜನೆಯನ್ನು ಹಮ್ಮಿಕೊಳ್ಳುವುದಾಗಿ ಸರಕಾರ ತಿಳಿಸಿರುವ ಹಿನ್ನೆಲೆಯಲ್ಲಿ ರಾತ್ರಿ ಸಫಾರಿಯನ್ನು ಪ್ರಾರಂಭಿಸಬಹುದು. ಮುಂದಿನ ದಿನಗಳಲ್ಲಿ ಈ ಸಂಬಂಧ ಯಾವುದೆ ಸಮಸ್ಯೆ ಉದ್ಭವಿಸಿದಲ್ಲಿ ಮೇಲ್ಮನವಿ ಸಲ್ಲಿಸಬಹುದು ಎಂದು ಅರ್ಜಿದಾರರಿಗೆ ವಿಭಾಗೀಯ ಪೀಠ ಸೂಚಿಸಿದೆ. [ಬನ್ನೇರುಘಟ್ಟ]












Click it and Unblock the Notifications