ಈರುಳ್ಳಿ ಕೆಜಿಗೆ 85 ರಿಂದ 90 ರುಪಾಯಿ!
ಬೆಂಗಳೂರು,
ಡಿ. 30 : ಹೊಸ ವರ್ಷದ ಆಗಮನವನ್ನು ಸಂಭ್ರಮದಿಂದ ಸ್ವಾಗತಿಸಬೇಕೆಂಬ ನಿರೀಕ್ಷೆಯಲ್ಲಿರುವಾಗಲೇ ಈರುಳ್ಳಿ ಬೆಲೆ ಮತ್ತೆ ಗಗನಮುಖಿಯಾಗಿದೆ. ಸಗಟು ಮಾರುಕಟ್ಟೆಯಲ್ಲಿ ಕೆಜಿಗೆ 40ರಿಂದ 45 ರುಪಾಯಿಗೆ ಲಭ್ಯವಿದ್ದ ಈರುಳ್ಳಿ ಬೆಲೆ ಗುರುವಾರದ ಸಂಜೆ ವೇಳೆಗೆ ಏಕಾಏಕಿ 65 ರಿಂದ 75 ರುಪಾಯಿಗೆ ಏರಿಕೆಯಾಗಿದೆ. id="toptextpromo">ಚಿಲ್ಲರೆ
ಅಂಗಡಿಗಳಲ್ಲಿ ಈ ಬೆಲೆ ಕೆಜಿಗೆ ಕನಿಷ್ಠವೆಂದರೂ 85 ರಿಂದ 90 ರುಪಾಯಿ ಆಗುವ ಎಲ್ಲ ಲಕ್ಷಣಗಳೂ ಇವೆ. ದೆಹಲಿಯಿಂದ ಬೆಂಗಳೂರು ಮಾರುಕಟ್ಟೆಗೆ ಬರಬೇಕಿದ್ದ ಈರುಳ್ಳಿ ಬಾರದಿರುವ ಕಾರಣ ಈ ಸಮಸ್ಯೆ ಉಂಟಾಗಿದೆ. ಹೀಗಾಗಿ 50 ಕೆಜಿ ಈರುಳ್ಳಿ ಬ್ಯಾಗ್ ನ ಬೆಲೆ 2,750 ರುಪಾಯಿಗಳಿಂದ 3,500 ರುಪಾಯಿಗೆ ಏರಿಕೆಯಾಗಿದೆ. id='are-slot-1' class='oiad oi-axt oiadv'> id='top-searched-articles'>ತಿಂಗಳ
ಹಿಂದೆ ಕೆಜಿಗೆ ಕೇವಲ 15 ರಿಂದ 18 ರುಪಾಯಿಗೆ ದೊರೆಯುತ್ತಿದ್ದ ಈರುಳ್ಳಿ ಏಕಾಏಕಿ ಕೆಜಿಗೆ 60 ಏರಿಕೆಯಾಗಿತ್ತು. ಚಿಲ್ಲರೆ ಅಂಗಡಿಗಳಲ್ಲಿ ಮತ್ತು ಮಾಲ್ ಗಳಲ್ಲಿ ಈರುಳ್ಳಿ ಬೆಲೆ ಕಣ್ಣೀರು ತರಿಸುವಂತಿದೆ. ಸಗಟು ಬೆಲೆಯಲ್ಲಿ ಕೆಜಿಗೆ 45 ರುಪಾಯಿವರೆಗೆ ಏರಿಕೆಯಾಗಿದ್ದ ಟೊಮೆಟೋ ಬೆಲೆ ಬುಧವಾರ 30-32 ರುಪಾಯಿಗೆ ಇಳಿದಿದೆ.











Click it and Unblock the Notifications