ಆನ್ ಲೈನ್ ಟಿಕೇಟ್ ಬುಕ್ ಮಾಡೋ ಹೈಟೆಕ್ ಕಳ್ಳ
ಭೋಪಾಲ್,
ಡಿ.30: ಅನ್ ಲೈನ್ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕಿ, ಅದರಿಂದ ರೈಲು ಮತ್ತು ವಿಮಾನ ಟಿಕೆಟ್‌ಗಳ ಬುಕ್ಕಿಂಗ್ ಮಾಡುತ್ತಿದ್ದ ಬಿಹಾರ ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬನನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ. ಬಹು ಬೇಡಿಕೆಯಲ್ಲಿರುವ ಮುಗಂಡ ಟಿಕೇಟ್ ಕಾಯ್ದಿರಿಸುವುದಕ್ಕೆ ಹ್ಯಾಕಿಂಗ್ ಮೂಲಕ ಬ್ಯಾಂಕ್ ಖಾತೆಗೆ ಕನ್ನ ಹಾಕುವ ಚತುರ ಕಳ್ಳನ ಹವ್ಯಾಸ ನಂತರ ಪ್ರವೃತ್ತಿಯಾಗಿ ಬೆಳೆದಿತ್ತು. id="toptextpromo">ಭೋಪಾಲ್
ನ ಖಾಸಗಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯಾದ ಸನ್ನಿ ಕುಮಾರ್ (20) ಬಂಧಿತ ಆರೋಪಿ. ಈತ ಹಲವಾರು ವ್ಯಕ್ತಿಗಳ ಬ್ಯಾಂಕ್ ಖಾತೆಗಳನ್ನು ಅವರ ಅರಿವಿಗೆ ಬಾರದಂತೆ ಹ್ಯಾಕ್ ಮಾಡಿ ಅದರ ಮೂಲಕ ತನ್ನ ಸ್ನೇಹಿತರಿಗೆ ಮತ್ತು ಪರಿಚಯಸ್ಥರಿಗೆ ಟಿಕೇಟ್ ಗಳನ್ನು ಕಾಯ್ದಿರಿಸುತ್ತಿದ್ದ. id='are-slot-1' class='oiad oi-axt oiadv'> id='top-searched-articles'>ಮೊದಮೊದಲು
ಹವ್ಯಾಸವಾಗಿದ್ದ ಈ ಕಲೆಯನ್ನು ಪ್ರವೃತ್ತಿಯಾಗಿಸಿಕೊಂಡು ಟಿಕೇಟ್ ಪಡೆದವರಿಂದ ರಿಯಾಯಿತಿ ರೂಪದಲ್ಲಿ ಕಡಿಮೆ ಹಣ ಪಡೆಯುತ್ತಿದ್ದ. ಬೇಡಿಕೆಯುಳ್ಳ ಟಿಕೇಟ್ ಗೆ ಹೆಚ್ಚು ಹಣವನ್ನು ಪಡೆಯುತ್ತಿದ್ದ ಎಂದು ಸ್ಥಳೀಯ ಸೈಬರ್ ಘಟಕದ ಪೊಲೀಸರು ತಿಳಿಸಿದ್ದಾರೆ.











Click it and Unblock the Notifications