ಕ್ಯಾಚ್ ನಲ್ಲಿ ದ್ವಿಶತಕ ಬಾರಿಸಿ ದ್ರಾವಿಡ್
ಡರ್ಬಾನ್,
ಡಿ.28 : ಕರ್ನಾಟಕದ ಕಲಿ, ಭಾರತೀಯ ಟೆಸ್ಟ್ ತಂಡದ ಕಲಾತ್ಮಕ ದಾಂಡಿಗ ರಾಹುಲ್ ದ್ರಾವಿಡ್ ಇಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಹರ್ಭಜನ್ ಸಿಂಗ್ ಬೌಲಿಂಗ್‌ನಲ್ಲಿ ಡೇಲ್ ಸ್ಟೇಯ್ನ್ ಬಾರಿಸಿದ ಚೆಂಡನ್ನು ಕ್ಯಾಚ್ ಆಗಿ ಪರಿವರ್ತಿಸುವುದರೊಂದಿಗೆ ಟೆಸ್ಟ್ ಕ್ರಿಕೆಟ್ ನಲ್ಲಿ 200 ಕ್ಯಾಚ್ ಪಡೆದ ಹೊಸ ದಾಖಲೆ ನಿರ್ಮಿಸಿದ್ದಾರೆ. id="toptextpromo">149ನೇ
ಟೆಸ್ಟ್ ನಲ್ಲಿ ದ್ರಾವಿಡ್ ಕ್ಯಾಚ್ ನಲ್ಲಿ ದ್ವಿಶತಕ ತಲುಪಿದ ಮೊದಲ ಕ್ರಿಕೆಟ್ ಗ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. 128 ಟೆಸ್ಟ್‌ಗಳಲ್ಲಿ ಆಸ್ಟ್ರೇಲಿಯದ ಆರಂಭಿಕ ಬ್ಯಾಟ್ಸ್‌ಮನ್ ಮಾರ್ಕ್ ವಾ 181 ಕ್ಯಾಚ್, ಆಸ್ಟ್ರೇಲಿಯದ ನಾಯಕ ರಿಕಿ ಪಾಂಟಿಂಗ್ 174, ನ್ಯೂಜಿಲ್ಯಾಂಡ್ ನ ಮಾಜಿ ನಾಯಕ ಸ್ಟೀಫನ್ ಫ್ಲೆಮಿಂಗ್ 171, ವೆಸ್ಟ್ ಇಂಡೀಸ್ ನ ಬ್ರಿಯಾನ್ ಲಾರಾ 164 ಕ್ಯಾಚ್ ಪಡೆದ ಸಾಧನೆ ಮಾಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಗರಿಷ್ಠ
ರನ್ ದಾಖಲಿಸಿರುವ ವಿಶ್ವ ಕ್ರಿಕೆಟಿಗರ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿರುವ ದ್ರಾವಿಡ್ 149 ಟೆಸ್ಟ್‌ಗಳಲ್ಲಿ 12,025 ರನ್ ದಾಖಲಿಸಿದ್ದಾರೆ. ಕಳೆದ ಟೆಸ್ಟ್‌ನಲ್ಲಿ 12,000 ರನ್ ಪೂರೈಸಿದ ಸಾಧನೆ ಮಾಡಿದ್ದರು.(ರಾಹುಲ್ ದ್ರಾವಿಡ್)












Click it and Unblock the Notifications