ಈರುಳ್ಳಿ ನಂತರ ಟೊಮೆಟೋ ಬೆಲೆ ಗಗನಮುಖಿ!
ಬೆಂಗಳೂರು,
ಡಿ. 24 : ಗಗನಮುಖಿಯಾಗಿದ್ದ ಈರುಳ್ಳಿ ನಿಧಾನವಾಗಿ ಕುಸಿತ ಕಾಣುತ್ತಿರುವ ಹಿಂದೆಯೇ ಟೊಮೆಟೋ ಬೆಲೆ ದಿಢೀರ್ ಹೆಚ್ಚಳವಾಗಿದೆ. ಗುರುವಾರ ಬೆಂಗಳೂರಿನಲ್ಲಿ ಟೊಮೆಟೋ ದರ ಕೆಜಿ 40 ರುಪಾಯಿ ಆಗಿತ್ತು. ಮುಂಬೈನ ಬಾಂದ್ರಾದಲ್ಲಿ ಕೆಜಿ 60 ರುಪಾಯಿ ತಲುಪಿದ್ದರೆ, ದೆಹಲಿಯಲ್ಲಿ ಕೆಜಿ ಟೊಮೆಟೋಗೆ 40 ಇದೆ. id="toptextpromo">ಮಧ್ಯಪ್ರದೇಶ,
ಗುಜರಾತ್ ಮುಂತಾದ ಕಡೆಗಳಲ್ಲಿ ಟೊಮೆಟೋ ಬೆಲೆ ಇದಕ್ಕಿಂತ ಭಿನ್ನವಾಗಿರಲಿಲ್ಲ. ಉತ್ಪಾದನಾ ಪ್ರಮಾಣ ಕಡಿಮೆಯಾಗಿರುವುದರ ಜೊತೆಗೆ ಪಾಕಿಸ್ತಾನಕ್ಕೆ ಟೊಮೆಟೋ ರಫ್ತಾಗುತ್ತಿರುವುದು ಇದಕ್ಕೆ ಕಾರಣವಾಗಿದೆ. ಕೆಲವು ದಿನಗಳ ಹಿಂದೆ ಕೆಜಿಗೆ 28 ರಿಂದ 30 ರುಪಾಯಿಗೆ ದೊರೆಯುತ್ತಿದ್ದ ಟೊಮೆಟೋ ಬೆಲೆ ಏಕಾಏಕಿ ಏರಿಕೆ ಕಂಡು ಗ್ರಾಹಕರಿಗೆ ಬಿಸಿ ಮುಟ್ಟಿಸತೊಡಗಿದೆ. id='are-slot-1' class='oiad oi-axt oiadv'> id='top-searched-articles'>ಅಕಾಲಿಕ
ಅತಿವೃಷ್ಟಿ ಈರುಳ್ಳಿ ಬೆಳೆ ನಾಶಗೊಳಿಸಿದಂತೆ ಟೊಮೆಟೋ ಬೆಳೆಗೂ ಮಾರಕವಾಗಿ ಪರಿಣಮಿಸಿತು. ಮುಂದಿನ ಫೆಬ್ರವರಿ ತನಕ ಟೊಮೆಟೋ ಬೆಲೆ ಏರಿಕೆಯಾಗುವ ನಿರೀಕ್ಷೆ ಇದೆ ಎನ್ನುತ್ತಾರೆ ಮಾರುಕಟ್ಟೆ ವಿಶ್ಲೇಷಕರು.(ಈರುಳ್ಳಿ)











Click it and Unblock the Notifications