ಇಸಿಟಿಯ ಜಾರ್ಖಂಡ್ ಯುವತಿ ಗ್ಯಾಂಗ್ ರೇಪ್ ?

Electronics city Jharkhand Girl rape case
ಬೆಂಗಳೂರು, ಡಿ. 17: ಕಳೆದ ನಾಲ್ಕು ದಿನದಿಂದ ಎಲೆಕ್ಟ್ರಾನಿಕ್ ಟೆಕ್ಕಿಗಳ ಸಮೂಹದಲ್ಲಿ ಚರ್ಚೆಗೆ ಗ್ರಾಸವಾಗಿರುವ ಜಾರ್ಖಂಡ್ ಮೂಲದ ಎಂಬಿಎ ಪದವೀಧರೆ ಕಿಡ್ನಾಪ್ ಕೇಸ್ ಬಗ್ಗೆ ರಾಜ್ಯ ಗೃಹ ಸಚಿವರು ಕೊನೆಗೂ ಪ್ರತಿಕ್ರಿಯಿಸಿದ್ದಾರೆ. ಯುವತಿಯ ಕಿಡ್ನಾಪ್ ಜೊತೆಗೆ ಆಕೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಶಂಕೆ ವ್ಯಕ್ತಪಡಿಸಿರುವ ಸಚಿವ ಅಶೋಕ್, ಈ ದುಷ್ಕೃತ್ಯಗೈದವರು ಸ್ಥಳೀಯ ಪುಡಿ ರೌಡಿಗಳು ಅವರನ್ನು ಮಟ್ಟ ಹಾಕಲಾಗುವುದು ಎಂದು ಹೇಳಿದ್ದಾರೆ.

ಆದರೆ, ನಗರ ಪೊಲೀಸ್ ಆಯುಕ್ತ ಶಂಕರ್ ಬಿದರಿ ಅವರು ಇದಕ್ಕೆ ವ್ಯತಿರಿಕ್ತವಾಗಿ ಹೇಳಿಕೆ ನೀಡಿದ್ದಾರೆ. ಈ ಕೇಸ್ ನಲ್ಲಿರುವ ಹುಡುಗಿ ಇನ್ನೂ ಅವಿವಾಹಿತೆ ಆಕೆಗೆ ಇನ್ನೂ ಒಬ್ಬ ತಂಗಿಯಿರುವುದು ತಿಳಿದುಅಬಂದಿದೆ. ನಾವು ತುಂಬಾ ಸೂಕ್ಷ್ಮವಾಗಿ ಕೇಸ್ ಹ್ಯಾಂಡಲ್ ಮಾಡ್ತಾ ಇದ್ದೀವಿ. ಗೌಪ್ಯತೆಗೆ ಮಹತ್ವ ನೀಡಿ ಅವರ ಗೌರವ ಕಾಪಾಡಬೇಕು. ಹೆಚ್ಚಿನ ಆಧಾರ ಸಿಗದ ಹೊರತೂ ಗ್ಯಾಂಗ್ ರೇಪ್ ಎಂದು ಹೇಳಲಾಗದು, ವರದಿಗಳನ್ನು ತರಿಸಿಕೊಂಡು ಪರಿಶೀಲನೆ ನಡೆಸುತ್ತೇನೆ. ಆರೋಪಿಗಳ ವಿಚಾರಣೆ ಜಾರಿಯಲ್ಲಿದೆ ಎಂದರು.

ನಡೆದಿದ್ದು ಇಷ್ಟು: 26 ವರ್ಷದ ಎಂಬಿಎ ಪದವಿಧರೆಯಾದ ಜಾರ್ಖಂಡ್ ಮೂಲದ ಯುವತಿ ಭಾನುವಾರದಂದು ತನ್ನ ಗೆಳೆಯನೊಂದಿಗೆ ಫೋರಮ್ ಮಾಲ್ ಗೆ ಹೋಗಿದ್ದಳು. ರಾತ್ರಿ ಸುಮಾರು 10 ಗಂಟೆ ವೇಳೆಗೆ ಕೋರಮಂಗಲ ಚೆಕ್ ಪೋಸ್ಟ್ ಕಡೆಯಿಂದ ಕ್ಯಾಬ್ ಹಿಡಿದು ಎಲೆಕ್ಟ್ರಾನಿಕ್ ಸಿಟಿ ತಲುಪಿದ್ದಾರೆ. ಅಲ್ಲಿಂದ ಪ್ರಗತಿನಗರದಲ್ಲಿರುವ ಆಕೆಯ ಮನೆ ಕಡೆಗೆ ಹೋಗುತ್ತಿದ್ದಾಗ, ಕಾರಿನಲ್ಲಿ ಬಂದ ಇಬ್ಬರು, ಆಕೆಯ ಗೆಳೆಯನನ್ನು ದೂಡಿ ಯುವತಿಯನ್ನು ಕಿಡ್ನಾಪ್ ಮಾಡಿದ್ದಾರೆ.

ಯುವತಿ ನೀಡಿದ ಪೊಲೀಸ್ ಹೇಳಿಕೆ ಪ್ರಕಾರ, ಆಕೆಯನ್ನು ಹೊಸೂರಿನ ಸಮೀಪ ಕರೆದುಕೊಂಡು ಐದು ಜನ ರೇಪ್ ಮಾಡಿದರಂತೆ. ಸೋಮವಾರ ಮಧ್ಯಾಹ್ನದ ಹೊತ್ತಿಗೆ ಕೂಡ್ಲು ಗೇಟ್ ಬಳಿ ತಂದು ಬಿಟ್ಟರು ಅಲ್ಲಿಂದ ಆಟೋ ಹಿಡಿದುಕೊಂಡು ಮನೆ ತಲುಪಿದೆ. ಎಂದಿದ್ದಾಳೆ. ಆಕೆಯ ಹೇಳಿಕೆ ಆಧಾರಿಸಿ ಕಿಡ್ನಾಪ್(ಸೆಕ್ಷನ್ 363) ಹಾಗೂ ರೇಪ್ (ಸೆಕ್ಷನ್ 376) ಎಂದು ಪರಿಗಣಿಸಿ ಎಫ್ ಐಆರ್ (ಸಂಖ್ಯೆ 294/10)ದಾಖಲಿಸಿಕೊಳ್ಳಲಾಗಿದೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ತನಿಖೆ ನಡೆಸಿದ್ದಾರೆ. ಈ ಕೇಸ್ ಸಂಬಂಧ ಐವರನ್ನು ಬಂಧಿಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+