ಹೀರೋಗೆ ಕೈ ಕೊಟ್ಟ ಹೋಂಡಾ ಮೋಟರ್ಸ್

Hero Honda Splits
ನವದೆಹಲಿ, ಡಿ.17: ಭಾರತದ ಹೀರೋ ಸಮೂಹ ಹಾಗೂ ಜಪಾನ್ನಿನ ಹೋಂಡಾ ಮೋಟರ್ಸ್ ಸುಮಾರು 26 ವರ್ಷಗಳ ವಾಣಿಜ್ಯ ಸಂಬಂಧದ ಕೊಂಡಿಯನ್ನು ಪರಸ್ಪರ ಕಳಚಿಕೊಂಡಿದೆ. ಭಾರತದ ಮೋಟರ್ ಸೈಕಲ್ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಹೀರೋ-ಹೊಂಡಾ ಬೇರ್ಪಡುತ್ತಿರುವುದು ಬಂಡವಾಳ ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ. ಆದರೆ, ಷೇರುಪೇಟೆಯಲ್ಲಿ ಗುರುವಾರದ ಅಂತ್ಯಕ್ಕೆ ಹೀರೋಹೋಂಡಾ ಷೇರುಗಳು ಮೇಲ್ಮುಖದಲ್ಲೇ ಇದ್ದದ್ದು ಅಚ್ಚರಿಯ ವಿಷಯವಾಗಿತ್ತು.

ಮಾರುಕಟ್ಟೆ ವಿಸ್ತರಣೆ ಹಾಗೂ ಹೂಡಿಕೆಯಲ್ಲಿ ಭಾರಿ ಬದಲಾವಣೆ ಕಾಣತೊಡಗಿದ ಕಾರಣ ಎರಡೂ ಕಂಪೆನಿಗಳಲ್ಲಿ ವಿರಸ ಹೆಚ್ಚಾಗಿತ್ತು. ಭಾರತದಲ್ಲಿ ನಾಲ್ಕನೇ ಅತಿದೊಡ್ಡ ಬೈಕು ಉತ್ಪಾದಕ ಹಾಗೂ ಮಾರಾಟ ಸಂಸ್ಥೆಯಾದ ಹೋಂಡಾ ಮೋಟರ್ ಸೈಕಲ್ ಹಾಗೂ ಸ್ಕೂಟರ್ ಇಂಡಿಯಾದ ನಿರ್ಧಾರದಿಂದ ಹೂಡಿಕೆದಾರರ ಜೊತೆಗೆ ಗ್ರಾಹಕರನ್ನು ಕಳೆದುಕೊಳ್ಳುವ ಭೀತಿ ಆವರಿಸಿದೆ.

ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ದೀರ್ಘಕಾಲದವರೆಗೂ ಏಕಸ್ವಾಮ್ಯತೆ ಮೆರೆಯುತ್ತಿದ್ದ ಹೋಂಡಾ ಡೀಲರ್ ಗಳು ಈ ಬೇರ್ಪಡೆಯಿಂದ ಕೊಂಚ ಮಂಕಾಗುವುದು ಖಂಡಿತ ಎಂದು ಸುಜುಕಿ ಮೋಟರ್ ಸೈಕಲ್ ಇಂಡಿಯಾದ ಉಪಾಧ್ಯಕ್ಷ(ಮಾರ್ಕೆಟಿಂಗ್ ಹಾಗೂ ಮಾರಾಟ ವಿಭಾಗ) ಅತುಲ್ ಗುಪ್ತಾ ಅಭಿಪ್ರಾಯಪಟ್ಟಿದ್ದಾರೆ.

ಹೀರೋ ಸಮೂಹ ಹೋಂಡಾದ ಶೇ.26ರಷ್ಟು ಷೇರುಗಳನ್ನು ಖರೀದಿಸಲಿದೆ. ಹೀರೋ ಜೊತೆಗಿನ ಹೋಂಡಾ ಷೇರುಗಳ ಬೆಲೆ ಸುಮಾರು 2 ಬಿಲಿಯನ್ ಡಾಲರ್ ಎಂದು ಅಂದಾಜು ಮಾಡಲಾಗಿದೆ. ಆದರೂ, 2014ರ ವರೆಗೂ ಹೋಂಡಾ ಬ್ರಾಂಡ್ ನೇಮ್ ಅನ್ನು ಹೀರೋ ಮೋಟರ್ಸ್ ಬಳಸಲಿದೆ. ಮಾರುಕಟ್ಟೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಎರಡೂ ಕಂಪೆನಿಗಳು ಈ ರೀತಿ ಒಪ್ಪಂದ ಮಾಡಿಕೊಂದಿವೆ. ಎಂದು ಹೀರೋಹೋಂಡಾ ಮೋಟರ್ಸ್ ಲಿ(HHML)ನ ಸಿಇಒ ಪವನ್ ಮುಂಜಾಲ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+