ಶೀಘ್ರ ಶಿಕ್ಷಕರ ಹುದ್ದೆ ಭರ್ತಿ : ಬಿಬಿಎಂಪಿ

ನಗರದ ಶಿಕ್ಷಕರ ಸದನದಲ್ಲಿ ವಿದ್ಯಾ ಇಲಾಖೆ ಹಾಗೂ ಶಾಲಾ ಮತ್ತು ಕಾಲೇಜುಗಳ ಶಿಕ್ಷಕರ ಸಂಘದ ಆಶ್ರಯದಲ್ಲಿ ನಡೆದ ಗುರು ನಮನ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಶಾಲಾ ಶಿಕ್ಷಕರ ಸಂಘ ಮಾಡಿದ ಮನವಿಗೆ ಪ್ರತಿಕ್ರಿಯಿಸಿದ ಅವರು, ಮೂರ್ನಾಲ್ಕು ತಿಂಗಳೊಳಗೆ ಕೊರತೆಯಿರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದರು.
ಪಾಲಿಕೆಯಲ್ಲಿ ಖಾಲಿ ಇರುವ 5,074 ಹುದ್ದೆಗಳನ್ನು ಭರ್ತಿ ಮಾಡಲು ರಾಜ್ಯ ಸರಕಾರ ಒಪ್ಪಿಗೆ ನೀಡಿದೆ. ಹೀಗಾಗಿ ಮೇಯರ್, ಉಪಮೇಯರ್ ಅವರೊಂದಿಗೆ ಚರ್ಚಿಸಿ ಶಿಕ್ಷಕರ ನೇಮಕಾತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಲಕ್ಷ್ಮಿಕಾಂತ ರೆಡ್ಡಿ ಭರವಸೆ ನೀಡಿದರು.
ಸುಮಾರು 78 ಶಿಶುವಿಹಾರ, 12 ಪ್ರಾಥಮಿಕ ಶಾಲೆಗಳು, 33 ಪ್ರೌಢಶಾಲೆಗಳು, 13 ಸಂಯುಕ್ತ ಪದವಿ ಪೂರ್ವ ಕಾಲೇಜುಗಳಿವೆ. ಇವುಗಳಲ್ಲಿ ಒಟ್ಟಾರೆಯಾಗಿ 301 ಶಿಕ್ಷಕರ ಕೊರತೆ ಇದೆ ಎಂದು ಬಿಬಿಎಂಪಿ ನೌಕರರ ಕೇಂದ್ರೀಯ ಅಧ್ಯಕ್ಷ ಆರ್ ಸುಬ್ರಮಣ್ಯ ಹೇಳಿದರು.











Click it and Unblock the Notifications