ವಿಕಿಲೀಕ್ಸ್ ಸ್ಥಾಪಕ ಅಸ್ಸೇಂಜ್ ಗೆ ಜಾಮೀನು
ಮೆಲ್ಬೋರ್ನ್,
ಡಿ. 15 : ಅತ್ಯಾಚಾರ ಪ್ರಕರಣದ ಆರೋಪದ ಮೇಲೆ ಬಂಧಿತರಾಗಿರುವ ವಿಕಿಲೀಕ್ಸ್ ವೆಬ್ ಸೈಟ್ ಮುಖ್ಯಸ್ಥ ಜೂಲಿಯನ್ ಅಸ್ಸೇಂಜ್ ಅವರಿಗೆ ಮಂಗಳವಾರ ಲಂಡನ್ ನ ನ್ಯಾಯಾಲಯವು ಜಾಮೀನು ನೀಡಿದೆ. ಆದರೆ, ಸ್ವೀಡನ್ ವಕೀಲರು ಜಾಮೀನು ನೀಡಿರುವದನ್ನು ಪ್ರಶ್ನಿಸುವ ಸಾಧ್ಯತೆ ಇರುವುದರಿಂದ ಅವರನ್ನು ತಕ್ಷಣಕ್ಕೆ ಬಿಡುಗಡೆಗೊಳಿಸಲಾಗುತ್ತಿಲ್ಲ ಲಂಡನ್ ಪೊಲೀಸರು ಹೇಳಿದ್ದಾರೆ. id="toptextpromo">ಪ್ರಾಥಮಿಕ
ವರದಿಗಳ ಪ್ರಕಾರ, ಒಂದು ವೇಳೆ ಅಸ್ಸೇಂಜ್ ಅವರನ್ನು ಬಿಡುಗಡೆಗೊಳಿಸಿದ್ದೆ ಆದಲ್ಲಿ ಅವರು ಕೆಲವು ಕಟ್ಟು ನಿಟ್ಟಿನ ಕ್ರಮಗಳನ್ನು ಪಾಲಿಸಬೇಕಾಗುತ್ತದೆ. ಜಾಮೀನಿನ ಮೇಲೆ ಬಿಡುಗಡೆಯ ತೀರ್ಪು ಪ್ರಕಟಗೊಳ್ಳುತ್ತಿದ್ದಂತೆ ವೆಸ್ಟ್‌ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಹೊರಭಾಗದಲ್ಲಿ ಜಮಾಯಿಸಿದ್ದ ಅಸ್ಸೇಂಜ್ ರ ಅಭಿಮಾನಿಗಳು ವಿಜಯದ ಕೇಕೆ ಹಾಕಿದರು. id='are-slot-1' class='oiad oi-axt oiadv'> id='top-searched-articles'>ಅಮೆರಿಕದ
ರಾಜತಾಂತ್ರಿಕ ರಹಸ್ಯ ದಾಖಲೆಗಳನ್ನು ಬಯಲುಗೊಳಿಸಿರುವ ಅಸ್ಸೇಂಜ್ ತಮ್ಮನ್ನು ಬೆಂಬಲಿಸುವಂತೆ ಜನರಲ್ಲಿ ವಿನಂತಿಸಿಕೊಂಡಿದ್ದಾರೆ. ತಮ್ಮ ತಾಯಿಯ ಮೂಲಕ ಸಂದೇಶವೊಂದನ್ನು ನೀಡಿರುವ ಅಸ್ಸೇಂಜ್, ವಿಕಿಲೀಕ್ಸ್‌ನ ಭವಿಷ್ಯಕ್ಕಾಗಿ ತಾವು ಹೋರಾಟ ನಡೆಸಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ. ವೀಸಾ, ಮಾಸ್ಟರ್ ಕಾರ್ಡ್ ಹಾಗೂ ಪೇ ಪಾಲ್ ಅಮೆರಿಕದ ವಿದೇಶಾಂಗ ನೀತಿಯ ಅಸ್ತ್ರಗಳಾಗಿವೆ ಎಂದು ನಮಗೀಗ ತಿಳಿದಿದೆ. ಅದು ನಮಗೆ ಇದುವರೆಗೆ ತಿಳಿದಿರಲಿಲ್ಲ. ಅಮೆರಿಕದ ಅಕ್ರಮ ಹಾಗೂ ಕಾನೂನು ಬಾಹಿರ ಕ್ರಮಗಳನ್ನು ಹೊರಗೆಡಹುವ ನನ್ನ ಕಾರ್ಯಕ್ಕೆ ಬೆಂಬಲ ನೀಡಬೇಕು ಎಂದು ಅಸ್ಸೇಂಜ್ ತಿಳಿಸಿದ್ದಾರೆ.











Click it and Unblock the Notifications