ಹೆಂಡತಿಯನ್ನು ಬರ್ಬರವಾಗಿ ಹತ್ಯೆಗೈದು ಫ್ರೀಜರಲ್ಲಿಟ್ಟ ಟೆಕ್ಕಿ

ಹೆಂಡತಿಯನ್ನು ಬರ್ಬರವಾಗಿ ಹತ್ಯೆಗೈದಿದ್ದ 37 ವರ್ಷದ ರಾಜೇಶ್, ಈ ಸಂಗತಿಯನ್ನು ತನ್ನ ಮಕ್ಕಳಿಂದಲೂ ಮುಚ್ಚಿಟ್ಟು, ಆಕೆ ಸಂಬಂಧಿಕರನ್ನು ನೋಡಲು ದೆಹಲಿಗೆ ಹೋಗಿದ್ದಾಳೆ ಎಂದು ಸುಳ್ಳು ಹೇಳಿದ್ದ. 33 ವರ್ಷದ ಹೆಂಡತಿ ಅನುಪಮಾ ಬಗ್ಗೆ ಆಕೆಯ ಸಂಬಂಧಿಗಳಿಗೂ ಸುಳ್ಳು ಹೇಳಿದ್ದ.
ಅನುಪರ್ಣಾಳ ಸಹೋದರ ಆಕೆಯನ್ನು ಭೇಟಿಯಾಗಲು ಡೆಹ್ರಾಡೂನಿಗೆ ಬಂದಾಗ ಅವನಿಗೆ ಸಂಶಯ ಬಂದು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ವಿಚಾರಿಸಲಾಗಿ ತನ್ನ ಹೆಂಡತಿಯನ್ನು ಬರ್ಬರವಾಗಿ ಹತ್ಯೆಗೈದಿದ್ದನ್ನು ರಾಜೇಶ್ ಒಪ್ಪಿಕೊಂಡಿದ್ದಾನೆ.
ಮರೆಯದೆ ಓದಿ : ಆಗದಿದ್ದರೆ ಬಿಟ್ಟುಬಿಡಿ ಅತ್ಲಾಗೆ, ಕೊಲ್ಲೋದು ಯಾಕೆ?
ಗಂಡ ಹೆಂಡಿರ ನಡುವೆ ಜಗಳವಾದ ನಂತರ ಕೋಪೋದ್ರಿಕ್ತನಾದ ಆತ ಅನುಪಮಾಳ ತಲೆಯನ್ನು ಗೋಡೆಗೆ ಘಟ್ಟಿಸಿ, ಆಕೆ ಸ್ಮೃತಿ ಕಳೆದುಕೊಂಡಾಗ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದ. ನಂತರ ಆಕೆಯನ್ನು ಕತ್ತರಿಸಿ ಡೀಪ್ ಫ್ರೀಜರ್ ನಲ್ಲಿ ಅಡಗಿಸಿಟ್ಟಿದ್ದ ಭಯಾನಕ ಕಥೆಯನ್ನು ಪೊಲೀಸರೆದಿರು ರಾಜೇಶ್ ಬಿಚ್ಚಿಟ್ಟಿದ್ದಾನೆ.
ಇದೇ ಬಗೆಯ ಘಟನೆ ಬೆಂಗಳೂರಿನಲ್ಲಿ ಕೂಡ ಜರುಗಿತ್ತು. ಇನ್ಫೋಸಿಸ್ ಉದ್ಯೋಗಿಯಾಗಿದ್ದ ಸತೀಶ್ ಕುಮಾರ್ ಗುಪ್ತಾ ತನ್ನ ಹೆಂಡತಿ ಪ್ರಿಯಾಂಕಾಳನ್ನು ಕುರ್ಚಿಗೆ ಕಟ್ಟಿ, ಕತ್ತು ಕೊಯ್ದು ಹತ್ಯೆಗೈದು, ನಂತರ ಏನೂ ಗೊತ್ತೇ ಇಲ್ಲವೆಂಬಂತೆ ಜಾಗಿಂಗ್ ಹೋಗಿದ್ದ. ನಂತರ ಪೊಲೀಸರೆದಿರು ಕೂಡ ನಾಟಕವಾಡಿದ್ದ ಸತೀಶ್, ಪತ್ನಿಯನ್ನು ಕೊಲೆಗೈದಿದ್ದನ್ನು ಒಪ್ಪಿಕೊಂಡಿದ್ದ.












Click it and Unblock the Notifications