ಸಿಮೆನ್ಸ್‌ನಿಂದ ಹೊಸ ಮಾಧ್ಯಮ ಸಾಫ್ಟ್‌ವೇರ್ ಬಿಡುಗಡೆ

ನಂತರ ಮಾತನಾಡಿದ ಅವರು, ಐನೀವ್‌ಎಂ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ್ದು ಅಲ್ಲದೆ, ಜಾಹಿರಾತು ನಿರ್ವಹಣೆಗೆ ಹೊಸ ಆಯಾಮವೇ ಇದರಿಂದ ಸಿಗಲಿದೆ. ಬ್ಯಾನರ್ ಜಾಹೀರಾತು ಕೂಡ ಇದರಿಂದ ಸುಲಭವಾಗಿ ನಿರ್ವಹಿಸಬಹುದು ಎಂದು ಅವರು ಹೇಳಿದರು. ಶಿಕ್ಷಣ, ಕ್ರೀಡೆ, ಸಾಮಾನ್ಯ ಮನರಂಜನೆ, ಆಟೋಮೊಬೈಲ್ ಹಾಗೂ ವಿವಿಧ ಬಗೆಯ ಸಂಸ್ಥೆಗಳ ವಿನೂತನ ಸೇವೆಗೆ ಈ ಹೊಸ ಸಾಪ್ಟ್‌ವೇರ್‌ನ್ನು ಬಳಸಿಕೊಳ್ಳಬಹುದು ಎಂದರು.
ಪ್ರಸಾರ ಮತ್ತು ಪ್ರಕಾಶನದ ವಲಯದಲ್ಲಿ ಸಾಮಾಜಿಕ ಮಾಧ್ಯಮದ ಪ್ರಯೋಜನ ಪಡೆಯಲು ಈ ಐನೀವ್‌ಎಂನ್ನು ಬಳಸಿಕೊಳ್ಳಬಹುದು. ಅಲ್ಲದೆ, ಸ್ಥಳೀಯ, ದೂರದ ಸ್ವಯಂ ಚಾಲಿತ ಟ್ರಾನ್ಸ್‌ಕೋಡಿಂಗ್, ಕಡತಗಳ ಅಧ್ಯಯನ ಪ್ರತಿಕ್ರಿಯೆ, ಬಳಕೆದಾರರ ಸೃಷ್ಟಿಸುವ ವಿಷಯಗಳ ನಿರ್ವಹಣೆಗೆ ಈ ಸಾಪ್ಟ್‌ವೇರ್ ಅತ್ಯಂತ ಪ್ರಯೋಜನಕಾರಿ ಎಂದರು.
ಈ ವೇದಿಕೆಯ ಮೂಲಕ ಡಿಜಿಟಲ್ ಮಾಹಿತಿಯನ್ನು ಮಾಹಿತಿ ವೆಬ್ ತಾಣಗಳ ಮೂಲಕ ಲೈವ್ ಆಗಿ ಬಿತ್ತರಿಸಬಹುದು. ಆನ್ ಲೈನ್ ವಿಡಿಯೋ ಸ್ಟ್ರೀಮಿಂಗ್, ಸಭೆ, ಸಮಾರಂಭಗಳ ಲೈವ್ ಕವರೇಜ್ ಗೂ ಅನುಕೂಲವಿದೆ. ಒಟ್ಟಾರೆ ಸಂಸ್ಥೆಯ ಕಾರ್ಯಕ್ಷಮತೆ, ನಿರ್ವಹಣೆ ಹಾಗೂ ಉತ್ಪನ್ನಗಳ ಅಭಿವೃದ್ಧಿಗೆ ಐನೀವ್ ಎಂ ಸಹಕಾರಿ ಎಂದು ಸಂಸ್ಥೆಯ ಉಪಾಧ್ಯಕ್ಷ ಸೀತಾರಾಮನ್ ಕೃಷ್ಣಮೂರ್ತಿ ಹೇಳಿದರು.












Click it and Unblock the Notifications