ಎಲ್ ಜಿ ಸ್ಮಾರ್ಟ್ ಫೋನ್ ಜಿಎಂ 730 @19K

ಐಜೆನ್ ಎಂದು ಸಹಾ ಕರೆಯಲ್ಪಡುವ LG GM730 ಮೊಬೈಲ್ ನಲ್ಲಿ 3 ಇಂಚಿನ WQVGA ಟಚ್ ಸ್ಕ್ರೀನ್ ಇದೆ. 5 ಮೆಗಾ ಪಿಕ್ಸಲ್ ಕೆಮೆರಾ ಇದ್ದು, ಸ್ವಯಂ ಫೋಕಸ್ ಸೌಲಭ್ಯದಿಂದ ಕೂಡಿದೆ. ವಿಡಿಯೋ ಕಾಲಿಂಗ್ ಕೂಡಾ ಸಾಧ್ಯವಿದೆ. 289 MB ಅಂತರಿಕ ಮೆಮೋರಿ ಇದ್ದು, ಮೈಕ್ರೊ ಎಸ್ ಡಿ ಕಾರ್ಡ್ ಬಳಸಿ 32 ಜಿಬಿ ತನಕ ವಿಸ್ತರಿಸಬಹುದಾಗಿದೆ. ಉಳಿದಂತೆ ಬ್ಲೂಟೂಥ್, ವೈಫೈ,3ಜಿ, ಎ ಜಿಪಿಎಸ್ ಅನುಕೂಲಗಳಿವೆ.
ಎಲ್ ಜಿ ಐಜೆನ್ ನಲ್ಲಿ ಈ ಕೆಲ ಸಾಫ್ಟ್ ವೇರ್ ಗಳಿದ್ದರೆ ಸ್ಮಾರ್ಟ್ ಫೋನ್ ನಿಜಕ್ಕೂ ಸ್ಮಾರ್ಟ್ ಎನಿಸುತ್ತದೆ. NET CF3.5 (MSN ತಾಣದಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು), ಒಪೆರಾ ಮೊಬೈಲ್ 10(ಯೂ ಟೂಬ್ ನೋಡಲು), ಫ್ಲಾಶ್ ಲೈಟ್ 2.1( ಫ್ಲಾಷ್ ಕಡತಗಳು, ಗೇಮ್ಸ್ ಆಡಲು), ನೈಟ್ರೋಜನ್ ಪ್ಲೇಯರ್, ಪಾಕೇಟ್ ಎಕ್ಸ್ ಪಿಡಿಫ್, ರೊಟೆಟ್ ಸ್ಕ್ರೀನ್, ಬ್ಯಾಟ್ ಕ್ಲಾಕ್(ಬ್ಯಾಟರಿ ಸ್ಥಿತಿಗತಿ ತೋರಿಸಲು) ಮುಂತಾದವುಗಳನ್ನು ನಿಮ್ಮ ಮೊಬೈಲ್ ನಲ್ಲಿ ಸ್ಥಾಪಿಸಿಕೊಳ್ಳಬಹುದು.
ಎಲ್ ಜಿ ಜಿಎಂ 730 ವಿಶೇಷತೆಗಳು :
* 5 ಎಂಪಿ ಕೆಮೆರಾ, (2592х1944 pixels) VGA ಕ್ಯಾಮ್ ಸಹಿತ
* 3ಜಿ HSDPA, 7.2 Mbps; HSUPA, 2.0 Mbps
* ವೈ-ಫೈ 802.11b/g
* ಬ್ಲೂಟೂಥ್
* ಮೈಕ್ರೋಸಾಫ್ಟ್ ವಿಂಡೋಸ್ ಮೊಬೈಲ್ 6.1
* ಕ್ವಾಲ್ ಕಾಮ್ MSM7201A 528 MHz ಪ್ರೊಸೆಸರ್
* ಪಾಕೆಟ್ ಆಫೀಸ್( ವರ್ಡ್, ಎಕ್ಸೆಲ್, ಪವರ್ ಪಾಯಿಂಟ್, ಒನ್ ನೋಟ್, ಪಿಡಿಫ್ ವ್ಯೂವರ್)
* 289 MB ಅಂತರಿಕ ಮೆಮೋರಿ, 32 GB ವಿಸ್ಟೃತ ಮೆಮೋರಿ
* ಜಿಪಿಎಸ್ A GPS
* MP4/H.263/H.264 player
* ಲಿಥಿಯಂ ಅಯಾನ್(Li-Ion) 1000 mAh ಬ್ಯಾಟರಿ
ನೋಕಿಯಾ ಎನ್ 8 ಗೆ ಪ್ರತಿಸ್ಪರ್ಧಿಯಾಗಿ ಜಿಎಂ 730 ಮೊಬೈಲ್ ಅನ್ನು ಎಲ್ ಜಿ ಇಳಿಸಿದೆ. 19 ಸಾವಿರ ಬೆಲೆ ತುಸು ಹೆಚ್ಚಾಗಿದೆ. ಅಲ್ಲದೆ ಮೊಬೈಲ್ ಪ್ರೊಸೆಸರ್ ಕೂಡಾ ಕಡಿಮೆ ಸ್ಪೀಡ್ ಹೊಂದಿದೆ. ಕೆಲವು ನ್ಯೂನತೆಗಳನ್ನು ಹೊರತುಪಡಿಸಿದರೆ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಎಲ್ ಜಿ ಸ್ಥಿರತೆ ಕಾಯ್ದುಕೊಂಡಿದೆ.











Click it and Unblock the Notifications