ವಿಕಿಲೀಕ್ಸ್ ಅಸ್ಸೇಂಜ್ ರೇಪ್ ಮಾಡಿದ್ದು ಯಾರನ್ನ!

ವಿಶ್ವದ ಮಹತ್ವದ ಮೂಲಸೌಕರ್ಯ ಯೋಜನೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ವಿಕಿಲೀಕ್ಸ್ ಬಹಿರಂಗ ಪಡಿಸಿದೆ. ಈ ದಾಖಲೆಗಳ ಬಹಿರಂಗದಿಂದ ಉಗ್ರರ ದಾಳಿಯನ್ನು ಆಹ್ವಾನಿಸಿದಂತಾಗಿದೆ. ಅಲ್ಲದೇ ಅಮೆರಿಕದ ಮಿತ್ರದೇಶಗಳು ಮತ್ತು ಸಹಭಾಗಿತ್ವದ ದೇಶಗಳಿಗೆ ದೊಡ್ಡ ಪ್ರಮಾಣದಲ್ಲಿ ತೊಂದರೆಯಾಗಿದೆ ಎಂದು ಅಮೆರಿಕದ ವಿದೇಶ ವ್ಯವಹಾರ ಸಚಿವೆ ಹಿಲರಿ ಕ್ಲಿಂಟನ್ ಅಭಿಪ್ರಾಯಪಟ್ಟಿದ್ದಾರೆ.
ನಾನು ಸ್ಪಷ್ಟವಾಗಿ ಯಾವುದೋ ಒಂದು ದಾಖಲೆ ಬಗ್ಗೆ ಪ್ರತಿಕ್ರಿಯಿಸಲಾರೆ. ಅಪಾಯಗಳನ್ನು ಯೋಚಿಸದೇ, ಅಮೆರಿಕ ಸರಕಾರದ ಮಾಹಿತಿಗಳನ್ನು ಕಳವು ಮಾಡಿ ವಿಕಿಲೀಕ್ಸ್ ಬಿಡುಗಡೆ ಮಾಡಿದೆ. ಇದರಿಂದ ಆತಂಕ ಉಂಟಾಗಿದೆ ಎಂದು ಹಿಲರಿ ಹೇಳಿದ್ದಾರೆ. ವಿಕಿಲೀಕ್ಸ್ ಸ್ಥಾಪಕ ಜೂಲಿಯನ್ ಅಸ್ಸೇಂಜ್ ಅವರನ್ನು ಮಂಗಳವಾರ ಲಂಡನ್ ಪೊಲೀಸರು ಬಂಧಿಸಿದ್ದಾರೆ.
ವಿಕಿಲೀಕ್ಸ್ ಹೊಡೆತಕ್ಕೆ ಸೊರಗಿ ಸುಣ್ಣವಾಗಿರುವ ಜಗತ್ತಿನ ದೊಡ್ಡಣ್ಣ ಅಮೆರಿಕದ ಕುರಿತು ಜೋಕ್ ಒಂದು ಅಂತರ್ಜಾಲದಲ್ಲಿ ಹರಿದಾಡತೊಡಗಿದೆ. ವಿಕಿಲೀಕ್ಸ್ ಸ್ಥಾಪಕ ಜೂಲಿಯನ್ ಅಸ್ಸೇಂಜ್ ಅವರು ಅತ್ಯಾಚಾರ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ. ಆದರೆ, ಅವರು ಯಾರನ್ನು ಅತ್ಯಾಚಾರ ಮಾಡಿದ್ದಾರೆ ಎಂಬುದು ಈವರೆಗೊ ಸ್ಪಷ್ಟಗೊಂಡಿಲ್ಲ. ಹೀಗಾಗಿ "ಅಸ್ಸೇಂಜ್ ರೇಪ್ ಮಾಡಿದ್ದು ಯಾರನ್ನು ಗೊತ್ತಾ, ಅಮೆರಿಕವನ್ನು" ಎಂಬ ಜೋಕ್ ನ್ನು ದೊಡ್ಡಣ್ಣ ವಿರೋಧಿಗಳು ಸೃಷ್ಟಿಸಿ ಕುಣಿದಾಡುತ್ತಿದ್ದಾರೆ.












Click it and Unblock the Notifications