• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಂತರಂಗ ಬಹಿರಂಗ ಖ್ಯಾತಿ ಗುಲ್ವಾಡಿ ಇನ್ನಿಲ್ಲ

By Mahesh
|
ಬೆಂಗಳೂರು, ಡಿ.8: ಹಿರಿಯ ಪತ್ರಕರ್ತ, ತರಂಗ ನಿಯತಕಾಲಿಕದ ಮಾಜಿ ಸಂಪಾದಕ ಸಂತೋಷ ಕುಮಾರ್ ಗುಲ್ವಾಡಿ (72) ಮಂಗಳವಾರ ಸಂಜೆ 7.30 ಗಂಟೆಗೆ ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಅವರು ಪತ್ನಿ ಸುದೇಷ್ಣಾ ಹಾಗೂ ಪುತ್ರಿ ಸಂಸ್ಕೃತಿ ಹಾಗೂ ಪುತ್ರ ಸಮರ್ಥ ಅವರನ್ನು ಅಗಲಿದ್ದಾರೆ.

ಮಂಗಳವಾರ ಸಂಜೆ 6.45 ಸುಮಾರಿಗೆ ಗುಲ್ವಾಡಿ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ಅವರನ್ನು ಕೂಡಲೇ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ನಂತರ ಅಲ್ಲಿಂದ ಎಂಎಸ್ ರಾಮಯ್ಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಗುಲ್ವಾಡಿ ಅವರು ಮೃತರಾಗಿದ್ದಾರೆ. ಕೆಲ ವರ್ಷಗಳ ಹಿಂದೆ ಅವರು ಹೃದಯದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಬೆಂಗಳೂರಿನ ಮಲ್ಲೇಶ್ವರದ ಎವೆರೆಸ್ಟ್ ಅಪಾರ್ಟ್ ಮೆಂಟ್ ನಲ್ಲಿ ಬಹುಕಾಲದಿಂದ ವಾಸವಾಗಿದ್ದರು.

ಗುಲ್ವಾಡಿ ಕಿರುಪರಿಚಯ: 1938 ರ ಅ.2 ರಂದು ಉಡುಪಿಯಲ್ಲಿ ಜನಿಸಿದರು. ಮೈಸೂರು ವಿವಿಯಿಂದ ಬಿಕಾಂ ಪದವಿ, ಮುಂಬೈ ವಿವಿಯಿಂದ ಎಲ್ ಎಲ್ ಬಿ, ಭಾರತೀಯ ವಿದ್ಯಾಭವನದಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಡಿಪ್ಲೋಮಾ ಪಡೆದರು. 1982 ರಿಂದ 1999ರ ವರೆಗೂ 'ತರಂಗ" ವಾರಪತ್ರಿಕೆ ಸಂಪಾದಕರಾಗಿ ಮಣಿಪಾಲದಲ್ಲಿ ದುಡಿದಿದ್ದರು. ಇವರ ಸಂಪಾದಕೀಯ ಅಂತರಂಗ ಬಹಿರಂಗ ಓದುಗರನ್ನು ಆಕರ್ಷಿಸಿತ್ತು. ಅದಕ್ಕೂ ಮುನ್ನ ಅವರು ವಿವಿಧ ಕ್ಷೇತ್ರಗಳಲ್ಲಿ ಮುಖ್ಯವಾಗಿ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದರು.

ಮುಂಬೈನಲ್ಲಿ ಪತ್ರಿಕೋದ್ಯಮ ಹಾಗೂ ಜಾಹೀರಾತು ಕ್ಷೇತ್ರದಲ್ಲಿ ಫ್ರಿಲ್ಯಾನ್ಸರ್ ಆಗಿಯೂ ದುಡಿದಿದ್ದರು. ಆ ಸಮಯದಲ್ಲಿ ಅವರು 'ಪ್ರಜಾವಾಣಿ" ಮತ್ತು 'ಸುಧಾ" ಪತ್ರಿಕೆಗಳಿಗೆ ಅರೆಕಾಲಿಕ ವರದಿಗಾರರಾಗಿ ಕೆಲಸ ಮಾಡಿದ್ದರು. ತರಂಗ ವಾರಪತ್ರಿಕೆಯಿಂದ ನಿರ್ಗಮಿಸಿದ ಬಳಿಕ 1999ರಲ್ಲಿ 'ನೂತನ" ವಾರಪತ್ರಿಕೆ ಸಂಪಾದಕರಾಗಿ ಕೆಲ ಕಾಲ ಕಾರ್ಯನಿರ್ವಹಿದ್ದರು. ಇವರ ಅಂಕಣ ಬರಹಗಳ ಸಂಗ್ರಹ ಅಂತರಂಗ ಬಹಿರಂಗ ಕೃತಿಗೆ 1993ರಲ್ಲಿ ಕರ್ನಾಟಕ ಸಾಹಿತ್ಯ ಕಾಡಿಮೆ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸಂದಿದೆ. ಇದಲ್ಲದೆ ವಿಶ್ವೇಶ್ವರಯ್ಯ, ವೀರ ಸಾವರ್ಕರ್, ಭಾರ್ಗವ, ಕೊಂಕಣಿ ಸಾಹಿತ್ಯ ಹಾಗೂ ಆಳ್ವಾಸ್ ನುಡಿಸಿರಿ ಪ್ರಶಸ್ತಿಗಳಿಗೆ ಗುಲ್ವಾಡಿ ಭಾಜನರಾಗಿದ್ದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Veteran Journalist Santosh Kumar Gulwadi(72) former editor of Taranga weekly passed away last night at MS Ramaiah Hospiral, Bengaluru. A Native Udupi, Gulwadi worked as freelancer to Prajavani and Sudha magazine from Mumbai. After leaving Taranga he joined "Nutuna" Magazine as editor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more