ಲೋಕಾಯುಕ್ತಕ್ಕೇ ನೋಟೀಸ್ ನೀಡಿದ ಜೂ.ಕಟ್ಟಾ !!
ಬೆಂಗಳೂರು,
ಡಿ. 7 : ಲೋಕಾಯುಕ್ತ ಡಿವೈಎಸ್ಪಿ ಮತ್ತು ಲೋಕಾಯುಕ್ತ ಕಚೇರಿಗೆ ನೋಟೀಸ್ ನೀಡುವ ಮೂಲಕ ಬಿಬಿಎಂಪಿ ಸದಸ್ಯ ಕಟ್ಟಾ ಜಗದೀಶ್ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ. ತಮ್ಮ ವಿರುದ್ದ ದಾಖಲಾಗಿರುವ ಪ್ರಕರಣಗಳಿಗೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರೂ, ತನಿಖೆ ಮುಂದುವರಿಸಲು ಕಾರಣವೇನೆಂದು ನೋಟೀಸ್ ನಲ್ಲಿ ವಿವರ ಕೇಳಿದ್ದಾರೆ. id="toptextpromo">ಜೂನಿಯರ್
ಕಟ್ಟಾ ತಮ್ಮ ವಕೀಲರ ಮೂಲಕ ಲೋಕಾಯುಕ್ತ ಕಚೇರಿ ಮತ್ತು ಸಹಾಯಕ ಎಸ್ಪಿ ರಾಧಾಮಣಿ ಅವರಿಗೆ ನೋಟೀಸ್ ನೀಡಿದ್ದಾರೆ. ಈಗ ಕಟ್ಟಾ ನೀಡಿರುವ ನೋಟೀಸ್ ಗೆ ಲೋಕಾಯುಕ್ತ ಕಚೇರಿ ಏಳು ದಿನದೊಳಗೆ ಉತ್ತರ ನೀಡಬೇಕಿದೆ. ಡಿವೈಎಸ್ಪಿ ರಾಧಾಮಣಿ ರಜೆಯಲ್ಲಿರುವುದರಿಂದ ಲೋಕಾಯುಕ್ತ ಕಚೇರಿ ನೋಟೀಸ್ ಪಡೆದುಕೊಂಡಿದೆ. ಈ ಮೂಲಕ ಕೆಐಎಡಿಬಿ ಹಗರಣದಲ್ಲಿ ಸಿಲುಕಿ ಒದ್ದಾಡುತ್ತಿರುವ ಕಟ್ಟಾ ಸುಬ್ರಮಣ್ಯ ನಾಯ್ಡು ಪುತ್ರ ಕಟ್ಟಾ ಜಗದೀಶ್ ಮತ್ತೂಂದು ವಿವಾದವನ್ನು ಮೈಗೆಳೆದುಕೊಂಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಸಂತೋಷ್
ಹೆಗ್ಡೆ ಪ್ರತಿಕ್ರಿಯೆ : ಕಟ್ಟಾ ಜಗದೀಶ್ ನೀಡಿದ ನೋಟೀಸ್ ಗೆ ಕೋರ್ಟ್ ನಲ್ಲೇ ಉತ್ತರ ನೀಡುತ್ತೇವೆ. ಅವರಿಗೆ ಉತ್ತರ ನೀಡಬೇಕೆನ್ನುವ ಅಗತ್ಯ ನಮಗಿಲ್ಲ. ನೋಟೀಸ್ ಗೆ ಯಾವ ಉತ್ತರ ನೀಡಬೇಕೋ ಅದನ್ನು ನ್ಯಾಯಲಯಕ್ಕೆ ನೀಡುತ್ತೇವೆ. ಕಟ್ಟಾ ಜಗದೀಶ್ ವಿರುದ್ದದ ಎರಡು ಹಳೆಯ ಪ್ರಕರಣಗಳ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿತ್ತು. ಇದಕ್ಕೆ ಅವರು ತಡೆಯಾಜ್ಞೆ ಪಡೆದಿದ್ದಾರೆ ಎಂದು ನ್ಯಾ. ಸಂತೋಷ್ ಹೆಗ್ಡೆ ಪ್ರತಿಕ್ರಿಯೆ ನೀಡಿದ್ದಾರೆ.











Click it and Unblock the Notifications