ಮಂಗಳೂರಿನಲ್ಲೂ ಕೆಎಂಎಫ್ ಕ್ಯಾಂಪ್ಕೊ ಚಾಕಲೇಟ್
ಮಂಗಳೂರು,
ಡಿ.6: ಕರ್ನಾಟಕ ರಾಜ್ಯ ಸಹಕಾರಿ ಹಾಲು ಮಾರಾಟ ಮಹಾ ಮಂಡಳಿಯ (ಕೆಎಂಎಫ್) ಎಲ್ಲ ಮಳಿಗೆಗಳಲ್ಲಿ ಇನ್ನು ಮುಂದೆ ಮಂಗಳೂರಿನ ಸಹಕಾರಿ ಸಂಸ್ಥೆ ಉತ್ಪಾದಿಸುತ್ತಿರುವ 'ಕ್ಯಾಂಪ್ಕೊ" ಚಾಕಲೇಟ್‌ಗಳು ಗ್ರಾಹಕರಿಗೆ ಲಭ್ಯವಾಗಲಿದೆ. ಪ್ರಸಿದ್ಧ ಅಡಿಕೆ ಬೆಳೆಗಾರರ ಸಂಸ್ಥೆ ಕ್ಯಾಂಪ್ಕೊ(ಕೇಂದ್ರಿಯ ಅಡಿಕೆ, ಕೊಕೊ ಮಾರಾಟ ಹಾಗೂ ಸಂಸ್ಕರಣ ಸಹಕಾರಿ ಸಂಸ್ಥೆ) ಅಡಿಕೆ ಮಾರಾಟದೊಂದಿಗೆ ಹಲವು ಸ್ವಾದಗಳ ಚಾಕಲೇಟ್ ಉತ್ಪಾದನೆಯಲ್ಲೂ ಕೈಯಾಡಿಸಿ ಐಎಸ್‌ಒ 22000 ಪ್ರಮಾಣಿತ ಕಂಪೆನಿ ಎಂಬ ಹೆಗ್ಗಳಿಕೆ ಗಳಿಸಿದೆ.ನಂದಿನಿ
ಮಳಿಗೆಗಳಲ್ಲಿ
ಚಾಕಲೇಟ್
:
ಸುಮಾರು
24
ಬಗೆಯ
ಚಾಕಲೇಟ್
ಉತ್ಪಾದಿಸುತ್ತಿರುವ
'ಕ್ಯಾಂಪ್ಕೊ"
ಗುಣಮಟ್ಟದ
ವಿಷಯದಲ್ಲಿ
ಬಹುರಾಷ್ಟ್ರೀಯ
ಚಾಕಲೇಟ್
ಕಂಪೆನಿಗಳು
ಅನುಸರಿಸುತ್ತಿರುವ
ಮಾನದಂಡಗಳನ್ನೇ
ಅನುಸರಿಸಿ
ಉತ್ಪಾದನಾ
ಕಾರ್ಯ
ಕೈಗೊಳ್ಳುತ್ತಿದೆ.
ರಾಜ್ಯದಲ್ಲಿ
ಈಗ
ಸುಮಾರು
450
ನಂದಿನಿ
ಉತ್ಪನ್ನಗಳ
ಮಾರಾಟ
ಮಳಿಗೆಗಳಿದ್ದು,
ಇವುಗಳಿಗೆ
ಅಗತ್ಯವಿರುವಷ್ಟು
ಚಾಕಲೇಟ್
ಉತ್ಪಾದಿಸಿ
ವಿತರಿಸಲು
ಇತ್ತೀಚೆಗೆ
ಒಪ್ಪಂದವೊಂದಕ್ಕೆ
ಸಹಿ
ಹಾಕಲಾಗಿದೆ
ಎಂದು
ಸಂಸ್ಥೆಯ
ಅಧ್ಯಕ್ಷ
ಕೊಂಕೊಡಿ
ಪದ್ಮನಾಭ
ತಿಳಿಸಿದರು.
id="toptextpromo">
ದಕ್ಷಿಣ
ಕನ್ನಡದ ಪುತ್ತೂರಿನಲ್ಲಿರುವ ಕ್ಯಾಂಪ್ಕೊದ ಚಾಕಲೇಟ್ ಉತ್ಪಾದನಾ ಘಟಕ ಸಂಪೂರ್ಣ ಸ್ವಯಂಚಾಲಿತವಾಗಿದ್ದು ವಾರ್ಷಿಕ 16 ಸಾವಿರ ಟನ್ ಉತ್ಪಾದನಾ ಸಾಮರ್ಥ್ಯ ಹೊಂದಿದೆ. ಇತ್ತೀಚೆಗೆ ಕಾಫಿ ಹಾಗೂ ಮಾಲ್ಟ್ ಸ್ವಾದವಿರುವ ಹೊಸ 'ಟ್ರೀಟ್" ಚಾಕಲೇಟ್ ಬಿಡುಗಡೆ ಮಾಡಲಾಗಿದ್ದು ಗ್ರಾಹಕರಿಂದ ಉತ್ತಮ ಬೇಡಿಕೆ ಬರುತ್ತಿದೆ. ಚಾಕಲೇಟ್ ಜತೆಗೆ ವಿವಿಧ ಸ್ವಾದಗಳ ಆರೋಗ್ಯ ಪೇಯಗಳನ್ನೂ ಉತ್ಪಾದಿಸಲಾಗುತ್ತಿದ್ದು, ರಾಜ್ಯದಲ್ಲಿ ಮಾರಾಟ ಜಾಲ ವಿಸ್ತರಿಸಲು ಆದ್ಯತೆ ನೀಡಲಾಗಿದೆ ಎಂದು ಪದ್ಮನಾಭ ತಿಳಿಸಿದರು. id='are-slot-1' class='oiad oi-axt oiadv'> id='top-searched-articles'>DKMUL
ಕೂಡಾ 100 ಗ್ರಾಂ ಪ್ಯಾಕ್ ನಲ್ಲಿ ಮೈಸೂರುಪಾಕ್ ನೀಡುತ್ತಿದ್ದು, ಸ್ಪರ್ಧಾತ್ಮಕ ಬೆಲೆ ರು.31 ನಿಗದಿ ಮಾಡಿದೆ. ಉಳಿದಂತೆ ಕೆಎಂಎಫ್ ನ ಮೈಸೂರುಪಾಕ್ 500ಗ್ರಾಂ ಪ್ಯಾಕ್ ಬೆಲೆ ರು. 135 ಹಾಗೂ 250 ಗ್ರಾಂ ಪ್ಯಾಕ್ ಬೆಲೆ ರು. 70ಗೆ ಸಿಗುತ್ತಿದೆ ಎಂದು ದಕ್ಷಿಣ ಕನ್ನಡ ಹಾಲು ಉತ್ಪಾದಕರ ಸಂಘ(DKMUL)ದ ಅಧ್ಯಕ್ಷ ರವಿರಾಜ್ ಹೆಗ್ಡೆ ಹೇಳಿದ್ದಾರೆ.











Click it and Unblock the Notifications