ಡಿ.11 ರಂದು ಮಿಡ್ ನೈಟ್ ಮ್ಯಾರಥಾನ್

ಬೆಂಗಳೂರು, ಡಿ. 5 : ರೋಟರಿ ಬೆಂಗಳೂರು ಐಟಿ ಕಾರಿಡಾರ್ ಸಹಯೋಗದಲ್ಲಿ ಡಿಸೆಂಬರ್ 11 ರಂದು ವೈಟ್ ಫಿಲ್ಡ್ ನಲ್ಲಿ ರನ್ ಫಾರ್ ಗ್ರೀನ್ ಬೆಂಗಳೂರು ಮಿಡ್ ನೈಟ್ ಮ್ಯಾರಥಾನ್ 2010 ಹಮ್ಮಿಕೊಳ್ಳಲಾಗಿದೆ.

ಮ್ಯಾರಥಾನ್ ನಲ್ಲಿ ಸರಕಾರೇತರ ಸಂಸ್ಥೆಗಳು, ಕಾರ್ಪೋರೇಟ್ ಸಂಸ್ಥೆಗಳು ಸೇರಿದಂತೆ ಸಾವಿರಾರು ಮಂದಿ ಓಟಗಾರರು ಪಾಲ್ಗೊಳ್ಳಲಿದ್ದು, ಪರಿಸರ, ಆರೋಗ್ಯ, ಸಮುದಾಯ ಕಲ್ಯಾಣ ವೃತ್ತಿಪರ ಸೇವೆಗಳಿಗೆ ನಿಧಿ ಸಂಗ್ರಹಿಸಲು ಮಿಡ್ ನೈಟ್ ಮ್ಯಾರಥಾನ್ ಆಯೋಜಿಸಲಾಗಿದೆ ಎಂದು ಕಾರಿಡಾರ್ ಅಧ್ಯಕ್ಷ ಕಪಿಲ್ ಗುಪ್ತ ಮಾಧ್ಯಮ ಪ್ರತಿನಿಧಿಗಳಿಗೆ ವಿವರಿಸಿದ್ದಾರೆ.

ಜಾಗತಿಕ ತಾಪಮಾನ ಏರಿಕೆಯಿಂದ ಪರಿಸರ ದಿನದಿಂದ ದಿನಕ್ಕೆ ನಾಶದತ್ತ ಸಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ವೈಟ್ ಫಿಲ್ಡ್ ನಲ್ಲಿ 1 ಲಕ್ಷ ಸಸಿಗಳನ್ನು ನೆಡುವ ಯೋಜನೆ ಹಾಕಿಕೊಳ್ಳಲಾಗಿದೆ. ಸಂಗ್ರಹವಾಗುವ ನಿಧಿಯಲ್ಲಿ ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆ, ಸಾರ್ವಜನಿಕ ಶೌಚಾಲಯಗಳ ನಿರ್ಮಾಣ, ಶಾಲೆಗಳಲ್ಲಿ ಮಧ್ಯಾಹ್ನದ ಊಟ, ವಿದ್ಯಾರ್ಥಿ ವೇತನ, ವೃತ್ತಿಪರ ತರಬೇತಿ ಕಾರ್ಯಾಗಾರ ನಡೆಸಲಾಗುವುದು ಎಂದು ಕಪಿಲ್ ಹೇಳಿದ್ದಾರೆ.

42 ಕಿಮೀ ಮಧ್ಯರಾತ್ರಿ ಮ್ಯಾರಥಾನ್ ಓಟ, 21 ಕಿಮೀ ಅರ್ಧ ಮ್ಯಾರಥಾನ್ ಓಟ ನಡೆಯಲಿದೆ. ಇದರಲ್ಲಿ ಯಾರಾದರೂ ಪಾಲ್ಗೊಳ್ಳಬಹುದು. 300 ರುಪಾಯಿ ಶುಲ್ಕ ನೀಡಿ ಹೆಸರು ನೋಂದಾಯಿಸಬಹುದು. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+