ಯುಎಸ್ ನಲ್ಲಿ ಡೈವೋರ್ಸ್ ಹೆಚ್ಚಲು ಫೇಸ್ ಬುಕ್ ಕಾರಣ?

ಸೋಷಿಯಲ್ ನೆಟ್‌ವರ್ಕಿಂಗ್ ನಿಂದ ಸ್ನೇಹ ಸಾಮ್ರಾಜ್ಯ ದಿನದಿಂದ ದಿನಕ್ಕೆ ವಿಸ್ತಾರವಾಗುತ್ತಲೇ ಇದೆ. ಜಗತ್ತಿನಾದ್ಯಂತ ಲಕ್ಷಾಂತರ ಜನರು ಫೇಸ್ ಬುಕ್, ಟ್ವಿಟ್ಟರ್, ಮೈಸ್ಪೇಸ್, ಆರ್ಕುಟ್ ಮುಂತಾದ ತಾಣಗಳಿಂದ ಸನಿಹಕ್ಕೆ ಬಂದಿರುವುದು ನಿಜ. ಹಳೆ ಸ್ನೇಹಿತರನ್ನು ಹುಡುಕುವವರ ಸಂಖ್ಯೆ ಬೆಳೆಯುತ್ತಲೇ ಇದೆ. ಆದರೆ ಆಧುನಿಕ ತಂತ್ರಜ್ಞಾನದಿಂದ ಅನುಕೂಲಗಳಷ್ಟೆ ಅನನುನುಕೂಲಗಳು ಇರುತ್ತವೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಸಮೀಕ್ಷೆ ತನ್ನ ವರದಿಯಲ್ಲಿ ಹೇಳಿದೆ.
ಅಮೆರಿಕನ್ ಅಕಾಡೆಮಿ ಆಫ್ ಮೆಟ್ರೋಮೊನಿಯಲ್ ಲಾಯರ್ಸ್ ಈ ಸಮೀಕ್ಷೆ ನಡೆಸಿದ್ದು, ಶೇ.80ರಷ್ಟು ವಕೀಲರು ವಿವಾಹ ವಿಚ್ಛೇದನಕ್ಕೆ ಸೋಷಿಯಲ್ ನೆಟ್‌ವರ್ಕಿಂಗ್ ಕಾರಣವಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಫೇಸ್‌ಬುಕ್‌ನಲ್ಲಿ ಸಂಗಾತಿಗಳ ಮಧ್ಯೆ ನಡೆಯುವ ವಾದ, ವಿವಾದ ಹಾಗೂ ಜಗಳಗಳು ವಿಚ್ಛೇದನದವರೆಗೂ ತಲುಪುತ್ತಿವೆ. ಅಲ್ಲದೆ ಅಪರಿಚಿತರ ಜೊತೆ ಅಶ್ಲೀಲ ರೀತಿ ಚಾಟಿಂಗ್ ನಡೆಸುವುದು ನಡೆಯುತ್ತಿದೆ ಎಂದು ಸಮೀಕ್ಷೆಯ ವರದಿಯನ್ನು ಪ್ರಕಟಿಸಿರುವ ಇಲ್ಲಿನ ಡೇಲಿ ಮೇಲ್ ಹೇಳಿದೆ.
ಸಾಮಾಜಿಕ ಜಾಲ ತಾಣಗಳು ತನ್ನ ಕಬಂಧ ಬಾಹುವನ್ನು ಚರ್ಚ್ ಗೂ ಚಾಚಿದೆ. ಚರ್ಚ್ ವಾತಾವರಣದಲ್ಲಿ ಲೈಂಗಿಕ ಸ್ವೇಚ್ಛಾಚಾರಕ್ಕೆ ಫೇಸ್ ಬುಕ್ ಕಾರಣ ಎನ್ನಲಾಗಿದ್ದು, ಚರ್ಚ್ ಸಿಬ್ಬಂದಿಗಳಿಗೆ ಫೇಸ್ ಬುಕ್ ಬಳಸುವುದನ್ನು ನಿಷೇಧಿಸಲಾಗಿದೆ.












Click it and Unblock the Notifications