ಲಕ್ಷ ಉದ್ಯೋಗಿಗಳ ಕೂಟಕ್ಕೆ ಸೇರಿದ ಕಾಗ್ನಿಜೆಂಟ್

ಸಿಟಿಎಸ್ ನ ಒಂದು ಲಕ್ಷ ಉದ್ಯೋಗಿಗಳಲ್ಲಿ ಶೇ.70ರಷ್ಟು ಜನ ಭಾರತೀಯ ಉದ್ಯೋಗಿಗಳಿದ್ದಾರೆ. ಪ್ರಸ್ತುತ ಭಾರತದಲ್ಲಿ ಸಿಟಿಎಸ್ ನಾಲ್ಕನೇ ಅತಿದೊಡ್ಡ ಕಂಪೆನಿಯಾಗಿದ್ದು, ಟಿಸಿಎಸ್, ಇನ್ಫೋಸಿಸ್ ಹಾಗೂ ವಿಪ್ರೋ ನಂತರದ ಸ್ಥಾನದಲ್ಲಿದೆ. ಟಿಸಿಎಸ್ ನಲ್ಲಿ ಸುಮಾರು 1.74ಲಕ್ಷ ಉದ್ಯೋಗಿಗಳು, ಇನ್ಫೋಸಿಸ್ ನಲ್ಲಿ 1.22 ಲಕ್ಷ ಹಾಗೂ ವಿಪ್ರೋದಲ್ಲಿ 1.15 ಲಕ್ಷ ಉದ್ಯೋಗಿಗಳಿದ್ದಾರೆ.
1994 ರಲ್ಲಿ 175 ಉದ್ಯೋಗಿಗಳನ್ನು ಹೊಂದಿದ್ದ ಸಿಟಿಎಸ್ 16 ವರ್ಷಗಳಲ್ಲಿ ಲಕ್ಷ ಉದ್ಯೋಗಿಗಳನ್ನು ನೇಮಕ ಮಾಡಿಕೊಂಡ ಸಾಧನೆ ಮಾಡಿರುವುದು ಹರ್ಷ ತಂದಿದೆ ಎಂದು ಕಾಗ್ನಿಜೆಂಟ್ ನ ಸಿಇಒ ಫ್ರಾನ್ಸಿಸ್ಕೋ ಡಿ" ಸೋಜಾ ಹೇಳಿದ್ದಾರೆ.
ಕಂಪೆನಿಯ ಸಾಧನೆಯನ್ನು ಅರ್ಥಪೂರ್ಣವಾಗಿ ಆಚರಿಸಲು ವಿಶ್ವದಾದ್ಯಂತೆ 100,000 ಮರಗಳನ್ನು ನೆಟ್ಟು, ಪ್ರತಿಯೊಬ್ಬ ಉದ್ಯೋಗಿಗೆ ಗೌರವ ಸಲ್ಲಿಸಲಾಗುವುದು ಹಾಗೂ ಪರಿಸರ ಕಾಳಜಿ ಮೆರೆಯಲಾಗುವುದು ಎಂದು ಸಿಟಿಎಸ್ ಸಂಸ್ಥೆ ಘೋಷಿಸಿದೆ.












Click it and Unblock the Notifications