ವಿಕಿಲೀಕ್ಸ್‌ನಿಂದ ಭಾರತದ ಗೌಪ್ಯ ಮಾಹಿತಿ ಸೋರಿಕೆ?

ವಿಕಿಲೀಕ್ಸ್‌ನ ಈ ಮಾಹಿತಿ ಸೋರಿಕೆಯಿಂದಾಗಿ ತನ್ನ ಹಿತಾಸಕ್ತಿ ಗಳಿಗೆ ಅಪಾಯವುಂಟಾಗಲಿದೆ ಮತ್ತು ತನ್ನ ಮಿತ್ರ ರಾಷ್ಟ್ರಗಳ ಜೊತೆಗಿನ ಬಾಂಧವ್ಯಗಳಲ್ಲಿ ಉದ್ವಿಗ್ನತೆಯನ್ನು ಸೃಷ್ಟಿಸಲಿದೆಯೆಂಬ ಆತಂಕವನ್ನು ಅದು ವ್ಯಕ್ತಪಡಿಸಿದೆ. ಭಾರತದ ಇರಿಸುಮುರಿಸಿಗೆ ಕಾರ ಣವಾಗುವ ಕೆಲವು ಮಹತ್ವದ ರಹಸ್ಯ ದಾಖಲೆಗಳನ್ನು ವಿಕಿಲೀಕ್ಸ್ ಬಿಡುಗಡೆ ಗೊಳಿಸುವ ಸಾಧ್ಯತೆಯ ಬಗ್ಗೆ ನಾವು ಹೊಸದಿಲ್ಲಿಗೆ ಎಚ್ಚರಿಕೆ ನೀಡಿದ್ದೇವೆ ಯೆಂದು ಅಮೆರಿಕದ ವಿದೇಶಾಂಗ ವಕ್ತಾರ ಪಿ.ಜೆ. ಕ್ರೌಲಿ ತಿಳಿಸಿದ್ದಾರೆ.
ಆದರೆ ವಿಕಿಲೀಕ್ಸ್ ಬಿಡುಗಡೆ ಗೊಳಿಸಲಿರುವ ಭಾರತಕ್ಕೆ ಸಂಬಂಧಿಸಿದ ಗೌಪ್ಯದಾಖಲೆಗಳು ಯಾವ ವಿಷಯಗಳನ್ನು ಒಳಗೊಂಡಿವೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಈ ಮಾಹಿತಿಗಳು ಕಳೆದ ತಿಂಗಳು ವಿಕಿಲೀಕ್ಸ್ ಬಿಡುಗಡೆಗೊಳಿಸಿದ್ದ ಇರಾಕ್ ಯುದ್ಧಕ್ಕೆ ಸಂಬಂಧಿಸಿದ ಸಂಕ್ಷಿಪ್ತ ದಾಖಲೆಗಳಿಗಿಂತ ಏಳು ಪಟ್ಟು ಅಧಿಕವಾಗಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ಅಮೆರಿಕ ವಿದೇಶಾಂಗ ಇಲಾಖೆಯ ಅಧಿಕಾರಿಗಳು ಜರ್ಮನಿ, ಸೌದಿ ಅರೇಬಿಯ, ಯುಎಇ, ಬ್ರಿಟನ್, ಫ್ರಾನ್ಸ್ ಹಾಗೂ ಅಫ್ಘಾನಿಸ್ತಾನದ ಅಧಿಕಾರಿಗಳನ್ನು ಸಂಪರ್ಕಿಸಿರುವುದಾಗಿ ತಿಳಿದುಬಂದಿದೆ.
ವಿಕಿಲೀಕ್ಸ್ ಅಮೆರಿಕದ ಪ್ರಮುಖ ಜೊತೆಗಾರ ರಾಷ್ಟ್ರಗಳಾದ ಆಸ್ಟ್ರೇಲಿಯ, ಬ್ರಿಟನ್, ಇಸ್ರೇಲ್, ರಶ್ಯ, ಟರ್ಕಿ ಹಾಗೂ ಭಾರತ ಸೇರಿದಂತೆ ಹಲವು ದೇಶಗಳಿಗೆ ಸಂಬಂಧಿಸಿದ ಸಂಕ್ಷಿಪ್ತ ದಾಖಲೆಗಳನ್ನು ಸೋರಿಕೆ ಮಾಡಲಿ ರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರು ಚೀನದ ವಿದೇಶಾಂಗ ಸಚಿವ ಯಾಂಗ್ ಜೀಚಿಯವರನ್ನು ಸಂಪರ್ಕಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಅಮೆರಿಕದ ಸೇನಾ ಸಿಬ್ಬಂದಿ ದಂಡನಾಯಕರ ಜಂಟಿ ವರಿಷ್ಠ ಆಡ್ಮಿರಲ್ ಮೈಕ್ ಮುಲ್ಲೆನ್, ವಿಕಿಲೀಕ್ಸ್ ಅಪಾಯಕಾರಿ ರಹಸ್ಯಗಳನ್ನು ಸೋರಿಕೆ ಮಾಡುವುದನ್ನು ನಿಲ್ಲಿಸುವಂತೆ ಆಗ್ರಹಿಸಿದ್ದಾರೆ. ಇದರಿಂದ ಅಮೆರಿಕದ ಹಿತಾಸಕ್ತಿಗೆ ಧಕ್ಕೆಯಾಗಲಿದೆಯೆಂಬ ಕಳವಳವನ್ನು ಅವರು ವ್ಯಕ್ತಪಡಿಸಿದ್ದಾರೆ.












Click it and Unblock the Notifications