ರೈಲನ್ನು ಗುರಿಮುಟ್ಟಿಸಿ ಚಿರನಿದ್ರೆಗೆ ಜಾರಿದ ಚಾಲಕ

ಡಿ ಎನ್ ಮೈತ್ರ (56) ಮೃತಪಟ್ಟ ದುರ್ದೈವಿ ಚಾಲಕ. ಪನಸ್ಕುರ ನಿಲ್ದಾಣದಿಂದ ಹೌರಾ ಪನಸ್ಕುರ ರೈಲು ಶನಿವಾರ (ನ.27) ಬೆಳಗ್ಗೆ 7.30ಕ್ಕೆ ಸರಿಯಾಗಿ ಹೊರಟಿತು. ಆದರೆ ಚಾಲಕನ ಆರೋಗ್ಯ ಪರಿಸ್ಥಿತಿ ಸರಿಯಿರಲಿಲ್ಲ ಎಂದು ಆಗ್ನೇಯ ರೈಲ್ವೆಯ ಗಾರ್ಡ್ ಒಬ್ಬರು ತಿಳಿಸಿದ್ದಾರೆ.
ತೀವ್ರ ಜ್ವರದಿಂದ ಬಳಲುತ್ತಿದ್ದ ಚಾಲಕ ಬೆವರಿನಿಂದ ಬೆವತುಹೋಗಿದ್ದ. ಕೂಡಲೆ ಆತನಿಗೆ ವೈದ್ಯಕೀಯ ಚಿಕಿತ್ಸೆ ಕೊಡಿಸಲು ಮುಂದಾಗಿದ್ದಾಗಿ ಗಾರ್ಡ್ ತಿಳಿಸಿದ್ದಾನೆ. ಆದರೆ ಆತನನ್ನು ಆಸ್ಪತ್ರೆಗೆ ಸೇರಿಸುವ ಹೊತ್ತಿಗೆ ಕೊನೆಯುಸಿರೆಳೆದಿದ್ದ. ಅಷ್ಟರಲ್ಲಿ ರೈಲು ತಲುಪಬೇಕಾದ ಸ್ಥಳಕ್ಕೆ ತಲುಪಿತ್ತು.
ಚಾಲನಕನನ್ನು ಆಸ್ಪತ್ರೆಗೆ ಕರೆದೊಯ್ಯುವ ಹೊತ್ತಿಗೆ ಆತನ ಪ್ರಾಣಪಕ್ಷಿ ಹಾರಿಹೋಗಿತ್ತು. ಚಾಲಕ ಮೈತ್ರ ಸಾವಿಗೆ ಸ್ಪಷ್ಟವಾದ ಕಾರಣ ತಿಳಿದುಬಂದಿಲ್ಲ. ಚಾಲನಕನ ಪರಿಸ್ಥಿತಿ ಗಂಭೀರವಾಗಿದೆ ಎಂದು ಮೊದಲೇ ಗೊತ್ತಿದ್ದರೆ ಪ್ರಯಾಣಿಕರು ಗತಿಯೇನಾಗುತ್ತಿತ್ತು ಎಂಬ ಚರ್ಚೆ ನಡೆದಿದೆ.











Click it and Unblock the Notifications