ಸೈನಾ ಸೋಲು, ಭಾರತಕ್ಕೆ ನಿರಾಸೆ

ಗುರುವಾರ ನಡೆದ ಎಂಟರಘಟ್ಟದ ಸೆಣಸಾಟದಲ್ಲಿ ಎರಡನೇ ಶ್ರೇಯಾಂಕಿತೆ ಸೈನಾ 8-21, 21-8, 19-18 ಸೆಟ್ ಗಳಿಂದ ಹಾಂಕಾಂಗ್‌ನ ಯಿಪ್ ಪು ಯಿನ್ ವಿರುದ್ಧ ಸೋಲುಂಡರು. ಸುಮಾರ 46 ನಿಮಿಷಗಳ ಕಾಲ ನಡೆದ ಪಂದ್ಯ ಜಿದ್ದಾಜಿದ್ದಿನಿಂದ ಕೂಡಿತ್ತಾದರೂ ಗೆಲುವು ಮಾತ್ರ ಹಾಂಕಾಂಗ್ ಸ್ಪರ್ಧಿಯದ್ದಾಗಿತ್ತು. ಪ್ರಸಕ್ತ ಸಾಲಿನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದರಿಂದ ಸೈನಾ ಮೇಲೆ ಸಾಕಷ್ಟು ನಿರೀಕ್ಷೆ ಹೊಂದಲಾಗಿತ್ತು. ಆದರೆ ಕ್ವಾರ್ಟರ್‌ಫೈನಲ್‌ನಲ್ಲಿಯೇ ಸೈನಾ ನಿರ್ಗಮಿಸುವುದರೊಂದಿಗೆ ಭಾರತೀಯೆರ ಆಸೆ ನುಚ್ಚು ನೂರಾಯಿತು.












Click it and Unblock the Notifications