ನನ್ನದು ಶುದ್ಧ ಹಸ್ತ, ನಾನೇನು ತಪ್ಪು ಮಾಡಿಲ್ಲ: ಶೋಭಾ

Shobha Karandlaje
ಬೆಂಗಳೂರು, ನ.18:ನಾನು ಸಾರ್ವಜನಿಕ ಜೀವನದಲ್ಲಿ ಯಾರಿಗೂ ಮೋಸ ಮಾಡಿಲ್ಲ, ಒಬ್ಬರಿಂದಲೂ ಲಂಚ ಸ್ವೀಕರಿಸಿಲ್ಲ. ಇನ್ನೂ ನಾನು ಬಾಡಿಗೆ ಮನೆಯಲ್ಲೇ ಇದ್ದೇನೆ. ಶುದ್ಧ ಜೀವನ ನಡೆಸುತ್ತಿರುವ ನನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಉದ್ದೇಶದಿಂದ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಇಂಧನ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಕೊಡಗಿನಲ್ಲಿ ಸುಮಾರು 166 ಎಕರೆ ಜಮೀನನ್ನು ಅನಾಮಧೇಯ ಕಂಪೆನಿ ಹೆಸರಿನಲ್ಲಿ ಖರೀದಿ ಮಾಡಿರುವ ವಿವಾದಕ್ಕೆ ಸಂಬಂಧಿಸಿದಂತೆ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ಈ ಜಮೀನು ಖರೀದಿಗೆ ರಿಯಲ್ ಎಸ್ಟೇಟ್ ಉದ್ಯಮ ಕಂಪೆನಿಯೊಂದರಿಂದ 3.5 ಕೋಟಿ ರೂಪಾಯಿಗಳನ್ನು ಅವರು ಪಡೆದುಕೊಂಡಿದ್ದಾರೆ ಎಂಬ ಆರೋಪವನ್ನು ಶೋಭಾ ಅವರ ಮೇಲೆ ಹೊರೆಸಲಾಗಿದೆ. .'ಕಪಿಲಾ ಮಂಜುಶ್ರಿ ಅಪಾರೆಲ್ಸ್" ಹೆಸರಿನ ಅಸ್ತಿತ್ವದಲ್ಲಿ ಇಲ್ಲದೇ ಇರುವ ಕಂಪೆನಿ ಇದಾಗಿದೆ. ತಾವು ಇದರ ವ್ಯವಸ್ಥಾಪಕ ನಿರ್ದೇಶಕರು ಎಂದು ಗುರುತಿಸಿಕೊಂಡಿರುವ ಶೋಭಾ, ತಮ್ಮ ಸಹೋದರ ಲಕ್ಷ್ಮಣ ಗೌಡ ಅವರನ್ನು ಪಾಲುದಾರರನ್ನಾಗಿ ಮಾಡಿಕೊಂಡಿದ್ದಾರೆ.

ನಗರದಲ್ಲಿನ 'ಆದರ್ಶ ಡೆವಲಪರ್ಸ್‌" ಕಂಪೆನಿಯಿಂದ 3.5 ಕೋಟಿ ರೂಪಾಯಿ ಸಾಲ ಪಡೆದುಕೊಳ್ಳಲಾಗಿದೆ. ಆದರೆ ಯಾವುದೇ ದಾಖಲೆಗಳಾಗಲೀ, ಜಾಮೀನುದಾರರಾಗಲೀ ಇಲ್ಲದೆಯೇ ಕಂಪೆನಿ ಇಷ್ಟು ಬೃಹತ್ ಪ್ರಮಾಣದ ಸಾಲ ನೀಡಿದೆ ಎಂಬ ಆರೋಪ ಕೂಡ ಇದೆ. ಆದರೆ, ಈ ಬಗ್ಗೆ ಲೋಕಾಯುಕ್ತರಿಗೆ ನೀಡಿರುವ ಆಸ್ತಿ ವಿವರದಲ್ಲಿ ಸೂಚಿಸಿದ್ದೇನೆ ಎಂದು ಶೋಭಾ ಹೇಳಿದ್ದಾರೆ.

ಶೋಭಾ ಕಪಿಲಾ ಕಂಪೆನಿಯ ವಿಳಾಸವನ್ನು ನಂ.18, ಕ್ರೆಸೆಂಟ್ ರಸ್ತೆ, ಬೆಂಗಳೂರು ಎಂದು ನೀಡಿದ್ದಾರೆ. ಆದರೆ ಈ ವಿಳಾಸದಲ್ಲಿ ಆ ಕಂಪೆನಿ ಕಾರ್ಯ ನಿರ್ವಹಿಸುತ್ತಿಲ್ಲ ಎನ್ನಲಾಗಿದೆ. ಈ ಬಗ್ಗೆ ಸಮಜಾಯಿಷಿ ನೀಡಿರುವ ಶೋಭಾ, ಫೆಡರಲ್ ಬ್ಯಾಂಕ್‌ನಲ್ಲಿ ತಮ್ಮ ಬಿಡಿಎ ನಿವೇಶನ ಅಡ ಇಟ್ಟು ರೂ 3.5 ಕೋಟಿ ಸಾಲ ಹಾಗೂ 'ಆದರ್ಶ ಡೆವಲಪರ್ಸ್‌"ನಿಂದ ಶೇ 7.2 ಬಡ್ಡಿ ದರದಲ್ಲಿ ಉಳಿದ ಹಣ ಪಡೆದುಕೊಂಡಿರುವುದಾಗಿ ತಿಳಿಸಿದರು. ಕ್ರೆಸೆಂಟ್ ರಸ್ತೆಯಲ್ಲಿ ತಮ್ಮ ಮನೆ ಇದ್ದು ಅಲ್ಲಿಯೇ ಕಂಪೆನಿಯ ಕಚೇರಿಯೂ ಇರುವುದಾಗಿ ಸ್ಪಷ್ಟಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+