ಮೂರು ಮಕ್ಕಳ ತಂದೆ ನರ್ಸ್ ಜೊತೆ ನಾಪತ್ತೆ
ಕಾರ್ಕಳ,
ನ. 15 : ಇಲ್ಲಿನ ಮಾಳ ಹುಕ್ರಟ್ಟೆಯಲ್ಲಿ ಶಿಲ್ಪಿಯಾಗಿದ್ದ ವ್ಯಕ್ತಿಯೊಬ್ಬ ವಿವಾಹಿತೆಯೊಬ್ಬಳ ಜೊತೆ ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ. ಮಾಳ ಹುಕ್ರಟ್ಟೆ ನಿವಾಸಿ ರಮೇಶ್ ಪೂಜಾರಿ(30) ನಾಪತ್ತೆಯಾದವರು. ಈ ಸಂಬಂಧ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. id="toptextpromo">ಮನೆಯಲ್ಲಿ
ವಿಗ್ರಹ ಕೆತ್ತನೆ ಕೆಲಸ ಮಾಡುತ್ತಿದ್ದ ಇವರಿಗೆ ಮೂವರು ಮಕ್ಕಳೂ ಇದ್ದಾರೆ. ಹೀಗಿದ್ದರೂ ಮಾಳ ಚೌಕಿ ವಾಸಿ ವಿವಾಹಿತೆಯೊಬ್ಬಳೊಂದಿಗೆ ರಮೇಶ್ ಪೂಜಾರಿ ಪ್ರೇಮ ಸಂಬಂಧವನ್ನಿರಿಸಿಕೊಂಡಿದ್ದರು. ಈ ಆನೈತಿಕ ಪ್ರೇಮ ಪ್ರಕರಣದ ಬಗ್ಗೆ ರಮೇಶ್ ಅವರ ಪತ್ನಿಗೆ ಸಂಶಯ ಬಂದು ಒಂದೆರಡು ಬಾರಿ ಪ್ರಶ್ನಿಸಿದ್ದರು. ಆದರೆ, ಹಾರಿಕೆ ಉತ್ತರ ನೀಡಿ, ಹೆಂಡತಿ ಬಾಯಿ ಮುಚ್ಚಿಸಿಬಿಟ್ಟಿದ್ದ. id='are-slot-1' class='oiad oi-axt oiadv'> id='top-searched-articles'>ಬೆಳ್ತಂಗಡಿಯಲ್ಲಿ
ನರ್ಸ್ ಆಗಿದ್ದ ಮಹಿಳೆ ವರ್ಷದ ಹಿಂದೆಯಷ್ಟೆ ವಿವಾಹವಾಗಿ ಮಾಳದಲ್ಲಿಯೇ ವಾಸವಾಗಿದ್ದಳು. ಆ ನಂತರ ನರ್ಸ್ ಮಹಿಳೆಗೂ ರಮೇಶ್ ಪೂಜಾರಿಗೂ ಪರಿಚಯವಾಗಿತ್ತು. ರಮೇಶ್ ಪೂಜಾರಿ ಪದೇ ಪದೇ ಇದೇ ಹೆಂಗಸಿನ ಜೊತೆ ಫೋನ್ ಮಾಡಿ ಮಾತನಾಡುತ್ತಿದ್ದ. ಒಂದು ದಿನ ಬೆಳಿಗ್ಗೆ ಹೇಳದೇ ಕೇಳದೇ ರಮೇಶ್ ಪೂಜಾರಿ ಮನೆಯಿಂದ ತೆರಳಿದ್ದಾನೆ. ಇದೇ ದಿನ ನರ್ಸ್ ಕೂಡ ನಾಪತ್ತೆಯಾಗಿದ್ದಾಳೆ. ಗಂಡ ಮನೆಬಿಟ್ಟು ತಿಂಗಳುಗಳಾದರೂ, ಹಿಂತಿರುಗದಿದ್ದಾಗ ವಿಧಿಯಿಲ್ಲದೆ ರಮೇಶ್ ಹೆಂಡತಿ ಪೊಲೀಸರ ನೆರವು ಕೋರಿದ್ದಾರೆ.











Click it and Unblock the Notifications