ಏಷ್ಯನ್ ಗೇಮ್ಸ್ : ಭಾರತಕ್ಕೆ ಬಂಗಾರ ತಂದ ಪಂಕಜ್
ಗುವಾಂಗ್
ಜೋ, ನ. 14 : ಚೀನಾದ ಗುವಾಂಗ್ ಜೋ ನಲ್ಲಿ ನಡೆಯುತ್ತಿರುವ ಹದಿನಾರನೇ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ಮೊದಲ ಚಿನ್ನದ ಪದಕ ಬೇಟೆಯಾಡಿದೆ. ಬಿಲಿಯರ್ಡ್ಸ್ ಆಟಗಾರ ಬೆಂಗಳೂರು ಮೂಲದ ಪಂಕಜ್ ಅಡ್ವಾಣಿ ಅವರು ಏಷ್ಯನ್ ಗೇಮ್ಸ್ ನಲ್ಲಿ ಭಾರತಕ್ಕೆ ಮೊದಲ ಬಂಗಾರದ ಪದಕವನ್ನು ತಂದುಕೊಟ್ಟಿದ್ದಾರೆ. id="toptextpromo">ಇಂಗ್ಲಿಷ್
ಬಿಲಿಯರ್ಡ್ಸ್ ಸಿಂಗಲ್ಸ್ ನಲ್ಲಿ ಮೈನ್ಮಾರ್ ನ ಒ ನಯ್ ತ್ವೇಯ್ ಅವರನ್ನು 3-2 ಸೆಟ್ ಗಳಿಂದ ಸೋಲಿಸುವ ಮೂಲಕ ಪಂಕಜ್ ಅಡ್ವಾಣಿ ಅವರು ಚಿನ್ನದ ಪದಕವನ್ನು ಗಳಿಸಿದರು. 2006ರಲ್ಲಿ ದೋಹಾದಲ್ಲಿ ನಡೆದ ಏಷ್ಯನ್ ಗೇಮ್ಸ್ ನಲ್ಲಿ ಪಂಕಜ್ ಅಡ್ವಾಣಿ ಬಿಲಿಯರ್ಡ್ಸ್ ನಲ್ಲಿ ಚಿನ್ನದ ಪದಕ ಗಳಿಸಿದ್ದರು. id='are-slot-1' class='oiad oi-axt oiadv'> id='top-searched-articles'>ಎಷ್ಯನ್
ಗೇಮ್ಸ್ ನಲ್ಲಿ ಭಾರತ ಐದು ಪದಕಗಳನ್ನು ಗಳಿಸಿದ್ದು, ಚೀನಾ 45 ಮತ್ತು ದಕ್ಷಿಣ ಕೋರಿಯಾ 24 ಪದಕಗಳನ್ನು ಗಳಿಸುವ ಮೂಲಕ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದುಕೊಂಡಿವೆ. ಭಾರತದ ಮಹಿಳಾ ಮತ್ತು ಪುರುಷ ಶೂಟರ್ ಗಳು ಪದಕಗಳನ್ನು ಪಡೆದುಕೊಂಡಿದ್ದಾರೆ.











Click it and Unblock the Notifications