ಲೈಂಗಿಕ ಕಿರುಕುಳ ಅಲ್ಲಗೆಳೆದ ಎನ್ನಾರೈ ಡೀನ್

Indian Cambridge dean condemns report about 'harassment'
ಲಂಡನ್, ನ.11: ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಪ್ರತಿಷ್ಠಿತ ಕಾಲೇಜೊಂದರ ಡೀನ್ ಆಗಿರುವ ಭಾರತೀಯ ಮೂಲದ ಮಹಿಳೆಯೊಬ್ಬರಿಗೆ ಕಿಡಿಗೇಡಿ ವಿದ್ಯಾರ್ಥಿಗಳು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಬ್ರಿಟಿಷ್ ಹಾಗೂ ಭಾರತೀಯ ಮಾಧ್ಯಮಗಳು ವರದಿ ಮಾಡಿದೆ. ಆದರೆ, ಇದು ಸತ್ಯಕ್ಕೆ ದೂರವಾದ ವರದಿ, ಮೂರು ವರ್ಷದ ಹಿಂದೆ ನಡೆದ ಸಣ್ಣ ಘಟನೆಗೆ ಬಣ್ಣ ಹಚ್ಚಿ, ರೋಚಕ ವರದಿ ತಯಾರಿಸಲಾಗಿದೆ. ಇದರಿಂದ ತುಂಬಾ ಖೇದವಾಗಿದೆ ಎಂದು ಡೀನ್ ಪ್ರಿಯಂವದಾ ಪ್ರತಿಕ್ರಿಯಿಸಿದ್ದಾರೆ.

2007ರ ಮಾರ್ಚ್‌ನಲ್ಲಿ ಕಾಲೇಜಿನ ಆವರಣದಲ್ಲಿ ಮಧ್ಯರಾತ್ರಿ ನಗ್ನವಾಗಿ ನರ್ತಿಸುತ್ತಿದ್ದ ಗುಂಪೊಂದರಲ್ಲಿ ಸಿಕ್ಕಿ ಬಿದ್ದ ಬಳಿಕ, ಪಾನಮತ್ತ ವಿದ್ಯಾರ್ಥಿಯು ತನ್ನೆದುರಿಗೆ ಅಶ್ಲೀಲ ವರ್ತನೆ ತೋರಿ, ಕಿರುಕುಳ ನೀಡಿದ್ದನೆಂದು ಚರ್ಚಿಲ್ ಕಾಲೇಜಿನ ಡೀನ್ ಆಗಿರುವ ಡಾ. ಪ್ರಿಯಂವದಾ ಗೋಪಾಲ್ ತನ್ನ ದೂರಿನಲ್ಲಿ ತಿಳಿಸಿರುವುದಾಗಿ "ಡೈಲಿ ಮೈಲ್" ವರದಿ ಮಾಡಿತ್ತು.

ಭೋಜನ ಕೂಟದ ಬಳಿಕ ಅನೇಕ ವಿದ್ಯಾರ್ಥಿಗಳು ಮದ್ಯಸೇವನೆ ಮಾಡಿದ್ದು, ಅವರಲ್ಲಿ ಕೆಲವರು ಕಾಲೇಜಿನ ಸುತ್ತಲೂ ನಗ್ನವಾಗಿ ಓಡಾಡುತ್ತಿದ್ದರು. ಅವರಲ್ಲೊಬ್ಬನು ತನ್ನ ಮೇಲೆ ಆಕ್ರಮಣ ನಡೆಸಲು ಮುಂದಾಗಿದ್ದನು ಎಂದು ದೂರು ನೀಡಿದ್ದೀನಿ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಆದರೆ ನಾನು ಯಾವುದೇ ದೂರು ನೀಡಿಲ್ಲ. ಬದಲಿಗೆ ನನ್ನ ಕರ್ತವ್ಯದಂತೆ ವಾರ್ಷಿಕ ವರದಿಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದೆ. ರಾತ್ರಿವೇಳೆ ವಿದ್ಯಾರ್ಥಿಗಳ ಗುಂಪಿನ ಬಳಿ ಹೋದಾಗ ಅವರು ನನ್ನನ್ನು ಗುರುತಿಸುವ ಸ್ಥಿತಿಯಲ್ಲಿರಲಿಲ್ಲ. ಆದರೆ, ಯಾವುದೇ ರೀತಿಯ ಕಿರುಕುಳ ನೀಡಿದ ಘಟನೆ ನಡೆದಿಲ್ಲ. ಇದೆಲ್ಲಾ ಮಾಧ್ಯಮಗಳ ಕಲ್ಪಿತ ಕಥೆ ಎಂದು ಪ್ರಿಯಂವದಾ ಹೇಳಿದ್ದಾರೆ.

ವಿದ್ಯಾರ್ಥಿಗಳ ಅಸಭ್ಯ ವರ್ತನೆ ಮಾಮೂಲಿ: ವಾಸ್ತವಿಕವಾಗಿ ಅಸಭ್ಯ ಪ್ರದರ್ಶನ, ವಿಧ್ವಂಸಕ ಕೃತ್ಯ,ಮದ್ಯ, ಮಾದಕ ದ್ರವ್ಯ ಸೇವನೆ ಇಂಗ್ಲೆಂಡ್ ನ ಕಾಲೇಜುಗಳಲ್ಲಿ ಕಂಡುಬರುವ ಸಾಮಾನ್ಯ ದೃಶ್ಯಗಳಾಗುತ್ತಿವೆ ಎಂದು ಮಾಹಿತಿ ಸ್ವಾತಂತ್ರದ ಹಕ್ಕಿನ ಪ್ರಕಾರ ದೊರೆತ ವಿವರಗಳು ಹೇಳುತ್ತವೆ. ಚರ್ಚಿಲ್ ಕಾಲೇಜಿನಲ್ಲಿ 2005ರ ಬಳಿಕ ಸುಮಾರು 91ಕ್ಕೂ ಅಧಿಕ ಇಂತಹ ಪ್ರಕರಣಗಳಲ್ಲಿ 100ಕ್ಕೂ ಮಿಕ್ಕಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆಂಬ ವಿಷಯ ಬೆಳಕಿಗೆ ಬಂದಿದೆ.

2006ರ ಅಕ್ಟೋಬರ್‌ನಲ್ಲಿ ಇಬ್ಬರು ವಿದ್ಯಾರ್ಥಿಗಳು ಗ್ರಂಥಾಲಯದಲ್ಲಿ ಪ್ರಣಯ ಚೇಷ್ಟೆಯಲ್ಲಿ ತೊಡಗಿದ್ದಾಗ ಸಿಕ್ಕಿ ಬಿದ್ದಿದ್ದರು. ಕಳೆದ ವರ್ಷದ ಫೆಬ್ರವರಿಯಲ್ಲಿ ಓರ್ವ ವಿದ್ಯಾರ್ಥಿಯು ಇನ್ನೋರ್ವ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿ ತೀವ್ರ ರಕ್ತಸ್ರಾವದ ಗಾಯಗಳನ್ನುಂಟು ಮಾಡಿರುವ ಘಟನೆಯೂ ಇದೇ ಶಿಕ್ಷಣ ಸಂಸ್ಥೆಯಲ್ಲಿ ಸಂಭವಿಸಿದೆ ಎಂದು ವರದಿಯಿಂದ ತಿಳಿದು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+