ಮಹಿಳೆಯರಿಂದ ಮಹಿಳೆಯರಿಗಾಗಿ ರಂಗ ಸಮಾವೇಶ

ಸುಮಾರು 150 ವರ್ಷಗಳ ಇತಿಹಾಸವಿರುವ ಕನ್ನಡ ರಂಗಭೂಮಿಯಲ್ಲಿ ಗಂಡಸರ ಪ್ರಾತಿನಿಧ್ಯ ಹೆಚ್ಚಾಗಿದ್ದರೂ, ಇತ್ತೀಚಿನ ದಶಕಗಳಲ್ಲಿ ಮಹಿಳಾ ಪ್ರಾತಿನಿಧ್ಯವೂ ಪ್ರಾರಂಭವಾಗಿ, ನಟನೆ, ನಿರ್ದೇಶನ, ಸಂಘಟನೆ, ನೇಪಥ್ಯ, ನಾಟಕ ರಚನೆ, ವಿಮರ್ಶೆ ಮುಂತಾದ ಎಲ್ಲಾ ಪ್ರಕಾರಗಳಲ್ಲಿಯೂ ಮಹಿಳೆಯರೂ ರಂಗಭೂಮಿಯ ಸರ್ವತೋಮುಖ ಏಳಿಗೆಗಾಗಿ ದುಡಿಯುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಬಿಜಾಪುರದ ಮಹಿಳಾ ವಿಶ್ವವಿದ್ಯಾಲಯ ಹಾಗೂ ಬೆಂಗಳೂರಿನ ಕರ್ನಾಟಕ ಲೇಖಕಿಯರ ಸಂಘದವರ ಸಂಯುಕ್ತ ಆಶ್ರಯದಲ್ಲಿ ನವೆಂಬರ್ 19 ಮತ್ತು 20ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ರಾಜ್ಯಮಟ್ಟದ ಮಹಿಳಾ ರಂಗ ಸಮಾವೇಶವನ್ನು ಏರ್ಪಡಿಸಲಾಗಿದೆ.
ಈ ಎರಡೂ ದಿನದ ಸಮಾವೇಶದಲ್ಲಿ ರಂಗಭೂಮಿಗೆ ಕಾಣಿಕೆ ಸಲ್ಲಿಸಿರುವ ರಾಜ್ಯದ ಮಹಿಳೆಯರು ಒಂದುಗೂಡಿ ಚಿಂತನ ಮಂಥನ, ವಿಚಾರ ಸಂಕಿರಣ ಹಾಗೂ ರಂಗಾಸಕ್ತರ ಗೋಷ್ಠಿಗಳಲ್ಲಿ ಭಾಗವಹಿಸಲಿದ್ದಾರೆ.
ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7












Click it and Unblock the Notifications