ವಾಯುಮಾಲಿನ್ಯದ ಬಗ್ಗೆ ನಿಮಗೆ ಕಾಳಜಿಯಿದ್ದರೆ...

ಈ ವ್ಯಂಗ್ಯ ಚಿತ್ರ ಪ್ರದರ್ಶನಕ್ಕೆ ಕರ್ನಾಟಕದ ವ್ಯಂಗ್ಯ ಚಿತ್ರಕಾರರು ಎ4/ಎ3 ಅಳತೆಯಲ್ಲಿ ಮೋಟಾರು ವಾಹನಗಳಿಂದ ಮನುಷ್ಯನ ಆರೋಗ್ಯ, ಪ್ರಕೃತಿ, ಪ್ರಾಣಿ ಮತ್ತು ಪಕ್ಷಿಗಳ ಮೇಲೆ ಆಗುವ ವಾಯುಮಾಲಿನ್ಯದ ದುಷ್ಪರಿಣಾಮಗಳ ಬಗ್ಗೆ ಎಂಬ ಶೀರ್ಷಿಕೆ ಅಡಿಯಲ್ಲಿ ಮೂರು ವ್ಯಂಗ್ಯ ಚಿತ್ರಗಳನ್ನು ನವೆಂಬರ್ 22ರೊಳಗಾಗಿ ವಿ. ಆರ್.ಸಿ. ಶೇಖರ್, ಉಪಾಧ್ಯಕ್ಷರು, ಕರ್ನಾಟಕ ವ್ಯಂಗ್ಯ ಚಿತ್ರಕಾರರ ಸಂಘ (ರಿ) ನಂ. 13/ ಬಿ ಶೃಂಗಗಿರಿ, 5ನೇ ಅಡ್ಡರಸ್ತೆ, ಸುಪ್ರಜಾನಗರ, ಕೋಣನಕುಂಟೆ, ಬೆಂಗಳೂರು -560 062 (ದೂರವಾಣಿ 99454 34748) ಇವರಿಗೆ ಕಳುಹಿಸಬಹುದಾಗಿದೆ.
* ವ್ಯಂಗ್ಯ ಚಿತ್ರಗಳ ಶೀರ್ಷಿಕೆಗಳು ಕಡ್ಡಾಯವಾಗಿ ಕನ್ನಡದಲ್ಲೇ ಇರಬೇಕು.
* ಸ್ವಂತ ಸೃಜನಾತ್ಮಕ ಕೃತಿಗಳಿಗೆ ಪ್ರಾಮುಖ್ಯತೆ ನೀಡಲಾಗುವುದು.
ಆಯ್ಕೆಯಾದ ವ್ಯಂಗ್ಯ ಚಿತ್ರಗಳಿಗೆ ಸೂಕ್ತ ಬಹುಮಾನ ಹಾಗೂ ಸಂಭಾವನೆ ನೀಡಲಾಗುವುದೆಂದು ಪ್ರಾದೇಶಿಕ ಸಾರಿಗೆ ಅಧಿಕಾರಿ, ಬೆಂಗಳೂರು ಉತ್ತರ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7












Click it and Unblock the Notifications