ಮುಂಬೈ ರೂಪದರ್ಶಿ ನೇಣು ಬಿಗಿದು ಆತ್ಯಹತ್ಯೆ
ಮುಂಬೈ,ಅ
.30: ಗೋರೆಗಾಂವ್‌ನ ಅಪಾರ್ಟ್‌ಮೆಂಟ್‌ವೊಂದರಲ್ಲಿ ರೂಪದರ್ಶಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಟಿವಿ ನಿರೂಪಕಿ ಹಾಗೂ ರೂಪದರ್ಶಿಯಾಗಿದ್ದ ರಿಂಕಿ ಚೌಧರಿ ಶವ ಗುರುವಾರ ತಡರಾತ್ರಿ ಪತ್ತೆಯಾಗಿದೆ. id="toptextpromo">ರಿಂಕಿ
ಚೌಧರಿ ಮನೆಯ ಅಡುಗೆ ಕೋಣೆಯ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಆದರೆ, ಆತ್ಮಹತ್ಯೆ ಕಾರಣ ತಿಳಿಸುವ ಪತ್ರ ಯಾವುದು ಸಿಕ್ಕಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಚೌಧರಿ
ಅಡುಗೆ ಕೋಣೆಗೆ ಹೋಗುವ ಮೊದಲು ಆಕೆಯ ಗೆಳೆಯರಲ್ಲಿ ಒಬ್ಬ ಜೊತೆಗಿದ್ದ. ಆತ ಹಾಲ್ ನಲ್ಲಿ ಆಕೆಗಾಗಿ ಕಾಯುತ್ತಿದ್ದ. ಆದರೆ, ಅಡುಗೆ ಮನೆಗೆ ಹೋದ ರಿಂಕಿ ತುಂಬಾ ಸಮಯದ ಬಳಿಕವೂ ರಿಂಕಿ ಅಡುಗೆ ಕೋಣೆಯಿಂದ ಹಿಂದಿರುಗದೇ ಇದ್ದುದರಿಂದ ಆತ ಸಂಶಯಗೊಂಡಿದ್ದಾನೆ. ಬಾಗಿಲನ್ನು ಮುರಿದು ಒಳಗಡೆ ಹೋದಾಗ ಆಕೆಯ ಶವ ಫ್ಯಾನ್‌ನಲ್ಲಿ ನೇತಾಡುತ್ತಿದ್ದುದು ಕಂಡು ಬಂದಿದೆ' ಎಂದು ಪೊಲೀಸರು ಹೇಳಿದ್ದಾರೆ. ಪೊಲೀಸರು ತನಿಖೆ ಮುಂದುವರೆಸಿದ್ದು, ಆಕೆಯ ಸ್ನೇಹಿತರು ಹಾಗೂ ಕಚೇರಿಯ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.











Click it and Unblock the Notifications