ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಕ್ರೋ ಮ್ಯಾಕ್ಸ್ ಮೊಬೈಲ್ ಗಿನ್ನೆಸ್ ದಾಖಲೆ

By Mahesh
|
Google Oneindia Kannada News

Micromax unveils World's lightest Touch-Screen Phone
ನವದೆಹಲಿ, ಅ.21:ಭಾರತದ ಮೈಕ್ರೋ ಮ್ಯಾಕ್ಸ್ ಮೊಬೈಲ್ ಫೋನ್ ಸಂಸ್ಥೆ ಇಸ್ರೇಲ್ ನ ಮೋಡು ಟಿ ಲಿ. ಜಎತ್ ಸೇರಿ ಹೊರ ತಂದಿರುವ ಸ್ಮಾರ್ಟ್ ಫೋನ್ 'modu T' ಗೆ ವಿಶ್ವದ ಅತ್ಯಂತ ಹಗುರಾದ ಮೊಬೈಲ್ ಫೋನ್ ಎಂಬ ಹೆಗ್ಗಳಿಕೆಯೊಂದಿಗೆ ಗಿನ್ನೆಸ್ ವಿಶ್ವ ದಾಖಲೆ ಸ್ಥಾಪಿಸಿದೆ.

'ಮೊಡು ಟಿ' ಮೊಬೈಲ್ ನಲ್ಲಿ 2.2 ಇಂಚು ಟಚ್ ಸ್ಕ್ರೀನ್ ಹಾಗೂ 2 ಜಿಬಿ ಮೆಮೋರಿ ಕಾರ್ಡ್ ಇದ್ದು 32ಜಿಬಿ ತನಕ ವಿಸ್ತರಿಸಬಹುದಾಗಿದೆ. 5 ಮೆಗಾ ಪಿಕ್ಸಲ್ ಕೆಮೆರಾ ಹೊಂದಿದ್ದು, LED ಫ್ಲಾಶ್ ಸೌಲಭ್ಯ ಕೂಡಾ ಇದೆ. ಬೇಕಾದ ಮೋಡ್ ಗೆ ಮೊಬೈಲ್ ಅನ್ನು ತಿರುಗಿಸಿಕೊಳ್ಳಲು ಆಡ್ ಆನ್ ಜಾಕೆಟ್ ಗಳಿವೆ.

ಕ್ವಲ್ ಕಾಂನ ಬ್ರೂ ಆಪರೇಟಿಂಗ್ ಸಿಸ್ಟಮ್(Q BOS) ಹೊಂದಿದ್ದು, ವೈವಿಧ್ಯಮಯ ಅಪ್ಲಿಕೇಷನ್ ಗಳ ಆಗರವಾಗಿದೆ. ಯೂಟ್ಯೂಬ್, ಗೂಗಲ್ ಸರ್ಚ್, ಟ್ವಿಟ್ಟರ್, ಫೇಸ್ ಬುಕ್, ಫ್ಲಿಕ್ ಆರ್, ಟ್ಯೂನ್ ವೀಕಿ, eಬಡ್ಡಿ, ಸ್ನಾಪ್ಟು..ಇತ್ಯಾದಿ ಅಪ್ಲಿಕೇಷನ್ ಗಳು ಬೆರಳ ತುದಿಯಲ್ಲಿ ಲಭ್ಯವಾಗಲಿದೆ.

3.5G ಸೌಲಭ್ಯವಿದ್ದು, QWERTY ಕೀ ಪ್ಯಾಡ್, ಶೀಘ್ರ ವೆಬ್ ಆಕ್ಸೆಸ್, ಜಿಪಿಎಸ್, ತ್ವರಿತವಾಗಿ ಸಂದೇಶ ರವಾನೆ(IM), ಎಫ್ ಎಂ ರೇಡಿಯೋ, ಮ್ಯೂಸಿಕ್ ಪ್ಲೇಯರ್ ಹೊಂದಿರುವ ಈ ಸ್ಮಾರ್ಟ್ ಫೋನ್ ನ ಬೆಲೆ 12, 000ರು ಆಗಿದೆ. ಅ.22 ರಿಂದ ಮಾರುಕಟ್ಟೆಗೆ ಪ್ರವೇಶಿಸುವ ಈ ಮೊಬೈಲ್ ಭಾರತದ ಯುವ ಗ್ರಾಹಕರನ್ನು ಆಕರ್ಷಿಸಲಿದೆ ಎಂದು ಸಂಸ್ಥೆಯ ವಾಣಿಜ್ಯ ವಿಭಾಗದ ಮುಖ್ಯಸ್ಥ ವಿಕಾಸ್ ಜೈನ್ ಹೇಳುತ್ತಾರೆ.

ಟ್ವಿಟ್ಟರಲ್ಲಿ ನಮ್ಮನ್ನು ಹಿಂಬಾಲಿಸಿ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X