ವಿಧಾನಸಭೆಯಲ್ಲಿ ರೌಡಿಸಂ : 15 ಶಾಸಕರಿಗೆ ನೋಟಿಸ್

ಅ.11ರಂದು ಯಡಿಯೂರಪ್ಪ ನೇತೃತ್ವ ಬಿಜೆಪಿ ಸರಕಾರ ವಿಶ್ವಾಸಮತ ಯಾಚನೆ ವೇಳೆಯಲ್ಲಿ ಶಾಸಕರು ಕೈಕೈ ಮಿಲಾಯಿಸಿದ್ದರಿಂದ ತೀವ್ರ ಗದ್ದಲ ಉಂಟಾಗಿತ್ತು. ಬಿಹಾರ ಶಾಸಕರು ವಿಧಾನಸಭೆಯಲ್ಲಿ ರೌಡಿಗಳಂತೆ ವರ್ತಿಸುವುದು ಮಾಮೂಲಿ. ಅಂತಹ ಕೆಟ್ಟ ಘಟನೆ ಕರ್ನಾಟಕದಲ್ಲಿ ನಡೆದಿದ್ದು, ರಾಜಕೀಯ ಇತಿಹಾಸ ಕರಾಳ ದಿನವಾಗಿತ್ತು. ಸಚಿವನೊಬ್ಬ ಅಂಗಿ ಹರಿದುಕೊಂಡು ಮಂಗನಂತೆ ಕುಣಿದಾಡಿದ್ದು ನಾಚಿಕೆ ತರಿಸುವಂತಿತ್ತು.
ಶಾಸಕರ ವರ್ತನೆಯಿಂದ ಸಾರ್ವಜನಿಕ ವಲಯದಿಂದ ವ್ಯಾಪಕ ಟೀಕೆ ಟಿಪ್ಪಣಿಗಳು ವ್ಯಕ್ತವಾಗಿದ್ದರಿಂದ ಘಟನೆಯ ತನಿಖೆಗೆ ಸ್ಪೀಕರ್ ಅವರು ಅಪ್ಪಚ್ಚು ರಂಜನ್ ನೇತೃತ್ವದ ಸಮಿತಿ ರಚಿಸಿದ್ದರು. ಇದೀಗ ಆದೇಶ ನೀಡಿರುವ ಸ್ಪೀಕರ್ ಕೆ ಜಿ ಬೋಪಯ್ಯ ಅಕ್ಟೋಬರ್ 28ರಿಂದ ವಿಚಾರಣೆ ಆರಂಭಿಸಿ, 15 ದಿನದೊಳಗೆ ವರದಿ ನೀಡುವಂತೆ ಹೇಳಿದ್ದಾರೆ.
ಈ ಘಟನೆಯಲ್ಲಿ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಒಟ್ಟು 15 ಶಾಸಕರು ಪಾಲ್ಗೊಂಡಿರುವುದು ಸಿಸಿಟಿವಿ ಮೂಲಕ ಗೊತ್ತಾಗಿತ್ತು. ಅವರೆಲ್ಲರಿಗೂ ಸ್ಪೀಕರ್ ನೋಟಿಸ್ ಜಾರಿಗೊಳಿಸಿದ್ದಾರೆ.
ನೋಟಿಸ್ ಪಡೆದುಕೊಂಡವರ ಪಟ್ಟಿ
ಎಂ ಎ ಹ್ಯಾರಿಸ್(ಕಾಂಗ್ರೆಸ್)
ಬಿ ಕೆ ಸಂಗಮೇಶ್ (ಕಾಂಗ್ರೆಸ್)
ಕಾಕಾಸಾಹೇಬ್ ಪಾಟೀಲ್(ಕಾಂಗ್ರೆಸ್)
ಎಚ್ ಪಿ ಮಂಜುನಾಥ್(ಕಾಂಗ್ರೆಸ್)
ಜಮೀರ್ ಅಹ್ಮದ್ ಖಾನ್(ಜೆಡಿಎಸ್)
ಬಂಡೆಪ್ಪ ಕಾಶೆಂಪೂರ್(ಜೆಡಿಎಸ್)
ಪುಟ್ಟೇಗೌಡ(ಜೆಡಿಎಸ್)
ಬಾಲಕೃಷ್ಠ(ಜೆಡಿಎಸ್)
ಸುರೇಶ್ ಗೌಡ(ಕಾಂಗ್ರೆಸ್)
ಕೆ ರಾಜು(ಜೆಡಿಎಸ್)
ಪಿ ಎಂ ಅಶೋಕ(ಕಾಂಗ್ರೆಸ್)
ಕೆಪಿ ಬಚ್ಚೇಗೌಡ(ಕಾಂಗ್ರೆಸ್)
ರಹೀಂಖಾನ್ (ಕಾಂಗ್ರೆಸ್)
ಯುಟಿ ಖಾದರ್(ಕಾಂಗ್ರೆಸ್)
ಎಂಟಿ ಕೃಷ್ಣಪ್ಪ(ಜೆಡಿಎಸ್)











Click it and Unblock the Notifications