ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀ ಸುಟ್ಟ ಸಿಗರೇಟುಗಳ ಲೆಕ್ಕ ಪಕ್ಕದವನ ನೋಡಿ ಯಮ ನಕ್ಕ!

By Rajendra
|
Google Oneindia Kannada News

Passive smoking equally harmful
ನವದೆಹಲಿ, ಅ.20: ಧೂಮಪಾನ ಆರೋಗ್ಯಕ್ಕೆ ಎಷ್ಟು ಮಾರಕವೋ ಅವರು ಬಿಟ್ಟ ಹೊಗೆ ಸಹ ಅಷ್ಟೇ ಹಾನಿಕರ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಲಾಗಿದೆ. ಆದರೂ ಶೇ.29ರಷ್ಟು ಭಾರತೀಯರು ಧೂಮಪಾನಿಗಳು ಬಿಟ್ಟ ಹೊಗೆಯಿಂದ ಹಾನಿಗೊಳಗಾಗುತ್ತಿದ್ದಾರೆ ಎಂಬ ಸತ್ಯ ಅಧ್ಯಯನಗಳಿಂದ ಬಹಿರಂಗವಾಗಿದೆ.

ಧೂಮಪಾನಿಗಳು ಬಿಟ್ಟ ಹೊಗೆ ಸೇವಿಸಿದ ಹತ್ತರಲ್ಲಿ ಐದು ಮಂದಿ ವಯಸ್ಕರು(ಶೇ.52.3) ಮಾರಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಮುಖ್ಯವಾಗಿ ಸಾರ್ವಜನಿಕ ಸಾರಿಗೆ, ಹೋಟೇಲ್ ಗಳಲ್ಲಿ ಧೂಮಪಾನಿಗಳ ಹೊಗೆಗೆ ಹೆಚ್ಚು ಮಂದಿ ಬಲಿಯಾಗುತ್ತಿದ್ದಾರೆ ಎನ್ನುತ್ತದೆ ಅಧ್ಯಯನ.

ತಂಬಾಕನ್ನು ಶೇ.34.6ರಷ್ಟು ಮಂದಿ ವಿವಿಧ ಬಗೆಗಳಲ್ಲಿ ಬಳಸುತ್ತಿದ್ದಾರೆ. ತಂಬಾಕು ಬಳಸುವವರಲ್ಲಿ ಶೇ.47.9 ಮಂದಿ ಪುರುಷರು ಹಾಗೂ ಶೇ.20.3 ರಷ್ಟು ಮಂದಿ ಮಹಿಳೆಯರು. "ನಾ ಸುಟ್ಟ ಸಿಗರೇಟುಗಳ ಲೆಕ್ಕ ಯಮ ನೋಡಿ ನಕ್ಕ" ಎಂಬುದು ಕವಿವಾಣಿ. ಈಗ ಇದನ್ನು ಕೊಂಚ ಬದಲಾಯಿಸಿಕೊಳ್ಳಬೇಕಾಗಿದೆ, ನೀ ಸುಟ್ಟ ಸಿಗರೇಟುಗಳ ಲೆಕ್ಕ , ಪಕ್ಕದವನ ನೋಡಿ ಯಮ ಮುಸಿ ಮುಸಿ ನಕ್ಕ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X