ಕುಗ್ಗಿದ ಬೇಡಿಕೆ, ಚಿನ್ನ, ಬೆಳ್ಳಿ ದರ ಕುಸಿತ

Gold falls to year's low on global cues, restricted buying
ಮುಂಬೈ, ಅ.20: ಚಿನಿವಾರ ಪೇಟೆಯಲ್ಲಿ ಶೇ. 25 ರಿಂದ 30 ರಷ್ಟು ಬೇಡಿಕೆ ಕುಗ್ಗಿದ ಪರಿಣಾಮ ಹಳದಿ ಲೋಹ ಚಿನ್ನದ ಬೆಲೆ 425 ರು ಕುಸಿತ ಕಂಡು 19,660ರು(ಪ್ರತಿ 10 ಗ್ರಾಂ)ಗೆ ಇಳಿದಿದೆ. ಬೆಳ್ಳಿ ಬೆಲೆ ಕೂಡಾ ಕೆಜಿಗೆ 900 ರು ಕುಸಿದು 36,100(ಪ್ರತಿ ಕೆಜಿಗೆ)ರುಗೆ ತಲುಪಿದೆ. ಸಾಗರೋತ್ತರ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿತ ಕಂಡ ಪರಿಣಾಮ ಈ ಗಣನೀಯ ಇಳಿಕೆಗೆ ಕಾರಣ ಎಂದು ಅರ್ಥೈಸಲಾಗಿದೆ.

ಬೇಡಿಕೆ ಕುಸಿತ: ದಸರಾ, ದೀಪಾವಳಿ ಹಬ್ಬದ ಸಾಲಿನಲ್ಲಿ ಚಿನ್ನದ ಬೇಡಿಕೆ ಹೆಚ್ಚಳವನ್ನು ನಿರೀಕ್ಷಿಸಲಾಗಿತ್ತು. ಆದರೆ, ಸಾಮಾನ್ಯವಾಗಿ ಈ ಋತುವಿನಲ್ಲಿ ಭರ್ಜರಿ ವಹಿವಾಟು ನಡೆಸುತ್ತಿದ್ದ ದಕ್ಷಿಣ ಭಾರತದ ಮಳಿಗೆಗಳು, ಗ್ರಾಹಕರ ಆಗಮನಕ್ಕಾಗಿ ಕಾದು ಕುಂತಿವೆ. ಜನ ಕೂಡಾ ದಿನ ನಿತ್ಯ ಚಿನ್ನದ ಬೆಲೆ ಏರಿಳಿತವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಕೈಗೆಟುಕದಂತೆ ಬೆಲೆ ಏರುವ ಮುನ್ನ ಖರೀದಿಸಲು ನಿರ್ಧರಿಸಿದ್ದಂತಿದೆ.

ಆದರೆ, ಕಳೆದ ವರ್ಷ ಇದೆ ಅವಧಿಗೆ ಹೋಲಿಸಿದರೆ ದಕ್ಷಿಣ ಭಾರತದಲ್ಲಿ ಮಾರಾಟ ಶೇ.30 ರಿಂದ 40 ರಷ್ಟು ಇಳಿಮುಖವಾಗಿದೆ. ಭಾರತದ ಪೂರ್ವ ಹಾಗೂ ಪಶ್ಚಿಮದಲ್ಲಿ ಉತ್ತಮ ವಹಿವಾಟು ಕಾಯ್ದುಕೊಂಡಿದೆ. ಚಿನ್ನದ ಬೆಲೆ 10 ಗ್ರಾಂಗೆ 20,000 ಗಡಿ ದಾಟುತ್ತಿದ್ದಂತೆ ಜನ ಗಾಬರಿಬಿದ್ದು, ಚಿನ್ನ ಬೆಳ್ಳಿ ಅಂಗಡಿ ತಲೆ ಹಾಕಿ ಮಲಗುವುದನ್ನೆ ಮರೆತಿದ್ದಾರೆ.

ಅಭರಣಗಳಿಗೂ ಕಾಲ ಕೂಡಿ ಬಂದಿಲ್ಲ: ಕಂಕಣ ಭಾಗ್ಯ ಕೂಡಿ ಬಂದರೂ ಆಭರಣ ಕೊಳ್ಳುವ ಕಾಲ ಮಹೂರ್ತ ಸಿಕ್ಕಿಲ್ಲ. ಈ ಕಾಲದಲ್ಲಿ ದಿನವೊಂದಕ್ಕೆ ಸುಮಾರು 175 ರಿಂದ 200 ಕೆಜಿ ಮಾರಾಟವಾಗುತ್ತಿದ್ದ ಆಭರಣಗಳು ಈಗ ರಾತ್ರಿ ಅಂಗಡಿ ಮುಚ್ಚುವ ವೇಳೆಗೆ 15 ರಿಂದ 20 ಕೆಜಿಯಷ್ಟು ಮಾರಾಟವಾಗಿದ್ದರೆ ಅದೇ ಹೆಚ್ಚು ಎನ್ನುವ ಕಾಲ ಬಂದಿದೆ ಎನ್ನುತ್ತಾರೆ ಚೆನ್ನೈನ ಆಮದುದಾರ ರಂಜೀತ್ ರಾಥೋಡ್.

ಒಂದು ಕಡೆ ಬೆಲೆ ಏರುತ್ತಿದೆ.(ವರ್ಷಾಂತ್ಯಕ್ಕೆ ಪ್ರತಿ 10 ಗ್ರಾಂಗೆ 21,000 ರು ದಾಟುವ ಅಂದಾಜಿದೆ) ಇನ್ನೊಂದು ಕಡೆ ಬೇಡಿಕೆ ಕುಸಿಯುತ್ತಿದೆ. ಪರಿಸ್ಥಿತಿ ಹೀಗಿರುವಾಗ, ಹಳದಿ ಲೋಹ ಧರಿಸಿ ಮೆರೆಯಬೇಕೆಂಬ ಬಡವರ ಕನಸು, ವರ್ಷಾಂತ್ಯದವರೆಗೂ ತಿರುಕನ ಕನಸಾಗೇ ಉಳಿಯುವ ಸಾಧ್ಯತೆಯಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+