1,000 ಮೆ.ವ್ಯಾ ವಿದ್ಯುತ್ ಖರೀದಿ: ಶೋಭಾ

1,200 ಮೆಗಾವ್ಯಾಟ್ ವಿದ್ಯುತ್ ಖರೀದಿಗೆ ತಿಂಗಳಿಗೆ 350 ಕೋಟಿ ರೂ.ವೆಚ್ಚವಾಗುತ್ತಿದೆ. ಪ್ರಸಕ್ತ ವಿದ್ಯುತ್ ಯೂನಿಟ್ ಒಂದಕ್ಕೆ 4.80 ರೂ.ದರ ನೀಡಲಾಗುತ್ತಿದೆ. ಮುಂದಿನ ಎಪ್ರಿಲ್, ಮೇ ತಿಂಗಳಲ್ಲಿ ಇದಕ್ಕೆ ದುಪ್ಪಟ್ಟು ದರ ನೀಡಬೇಕಾಗುತ್ತದೆ ಎಂದು ಶೋಭಾ ತಿಳಿಸಿದರು.
ವಿದ್ಯುತ್ ಉತ್ಪಾದಿಸುವ ಹೆಚ್ಚಿನ ಜಲಾಶಯಗಳಲ್ಲಿ ವಿದ್ಯುತ್ ಅನ್ನು ಉತ್ಪಾದಿಸಲಾಗುತ್ತಿಲ್ಲ. ನೀರಿನ ಸಂಗ್ರಹದ ಪ್ರಮಾಣ ಉತ್ತಮವಾಗಿರುವ ಕಾರಣ ಅಲ್ಲಿ ನೀರನ್ನು ಸಂಗ್ರಹಿಸಿಡಲಾಗುವುದು. ಮುಂದಿನ ಬೇಸಿಗೆ ಸಮಯದಲ್ಲಿ ಈ ಜಲಾಶಯಗಳಿಂದ ವಿದ್ಯುತನ್ನು ಉತ್ಪಾದಿಸುವುದರಿಂದ ವಿದ್ಯುತ್ ಸಮಸ್ಯೆಯನ್ನು ಬಹಳಷ್ಟು ಕಡಿಮೆ ಮಾಡಿದಂತಾಗುತ್ತದೆ ಎಂದು ಶೋಭಾ ಸ್ಪಷ್ಟಪಡಿಸಿದರು.
ರಾಯಚೂರು ಘಟಕ ಸುಸ್ಥಿತಿ: ರಾಯಚೂರು ಉಷ್ಣ ವಿದ್ಯುತ್ ಸ್ಥಾವರದ ಐದು ಘಟಕಗಳಲ್ಲಿ ಹಲವು ಬಾರಿ ತೊಂದರೆಗಳು ಕಾಣಿಸಿಕೊಂಡು, ರಾಜ್ಯವೇ ಕತ್ತಲಲ್ಲಿ ಮುಳುಗುವಂತಾಗುತ್ತಿತ್ತು. ಆದರೆ, ಈಗ ಘಟಕಗಳಲ್ಲಿ ಉಂಟಾಗಿರುವ ಲೋಪದ ಪತ್ತೆಗೆ ಸಮಿತಿಯೊಂದನ್ನು ರಚಿಸಲಾಗಿದ್ದು ಅದಕ್ಕೆ ಒಂದು ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಉಡುಪಿ ಉಷ್ಣ ವಿದ್ಯುತ್ ಸ್ಥಾವರದಲ್ಲಿ 1,500 ಮೆಗಾವ್ಯಾಟ್ ಪ್ರಮಾಣದ ವಿದ್ಯುತ್‌ನ್ನು ಉತ್ಪಾದಿಸಲು ಒಪ್ಪಿಗೆ ನೀಡಲಾಗಿದೆ ಎಂದು ಶೋಭಾ ಹೇಳಿದರು.
ಟ್ವಿಟ್ಟರಲ್ಲಿ ನಮ್ಮನ್ನು ಹಿಂಬಾಲಿಸಿ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS












Click it and Unblock the Notifications