ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಪ್ರಪ್ರಥಮ ಎಸಿ ಡಬ್ಬಲ್ ಡೆಕ್ಕರ್ ರೈಲು

By Mahesh
|
Google Oneindia Kannada News

Indian Railways get first double-decker AC train
ಜಲಂಧರ್, ಅ. 18: ಇಲ್ಲಿನ ರೈಲ್ವೆ ಕೋಚ್ ಫ್ಯಾಕ್ಟರಿ(RCF)ಯಲ್ಲಿ ಭಾರತದ ಪ್ರಪ್ರಥಮ ಹವಾನಿಯಂತ್ರಿತ ಡಬಲ್ ಡೆಕ್ಕರ್ ರೈಲು ನಿರ್ಮಾಣಗೊಂಡಿದೆ. ಜಲಂಧರ್‌ನ ಕಪುರ್ತಲದಲ್ಲಿ ಎಂಟು ಬೋಗಿಗಳುಳ್ಳ ಡಬಲ್ ಡೆಕ್ಕರ್ ರೈಲನ್ನು ಶನಿವಾರ ಬಿಡುಗಡೆಗೊಳಿಸಲಾಗಿದೆ. ಈ ರೈಲು ಹೌರಾ-ಧನ್‌ಬಾದ್ ನಡುವೆ ಸಂಚರಿಸಲಿದೆ ಎಂದು ಕಪುರ್ತಲ ರೈಲ್ವೆ ಕೋಚ್ ಫ್ಯಾಕ್ಟರಿಯ ಜನರಲ್ ಮ್ಯಾನೇಜರ್ ಪ್ರದೀಪ್ ಕುಮಾರ್ ಹೇಳಿದ್ದಾರೆ.

ನೂತನ ವಿನ್ಯಾಸವುಳ್ಳ ರೈಲಿನ ಎತ್ತರವನ್ನು ರೈಲ್ವೆ ಹಳಿಯಲ್ಲಿ ಬರುವ ಮೇಲ್ಸೇತುವೆ, ವಿದ್ಯುತ್ ಸಂಚಾರ ಲೈನ್‌ಗಳು ಮತ್ತಿತರ ಹಳಿ ಮೇಲೆ ನಿರ್ಮಿಸಲಾಗುವ ನಿರ್ಮಾಣಗಳನ್ನು ಗಮನದಲ್ಲಿಟ್ಟುಕೊಂಡು ಮಾಡಲಾಗಿದೆ ಎಂದು ಅವರು ವಿವರಿಸಿದರು.

ದೇಶದ ಪ್ರಪಥಮ ಡಬ್ಬಲ್ ಡೆಕ್ಕರ್ ರೈಲಿನ ವಿಶೇಷತೆಗಳು:

* ನೂತನ ವಿನ್ಯಾಸ ಒಳಗೊಂಡಿದ್ದು, ಸ್ಟೆನ್ ಲೆಸ್ ಲೆಸ್ ಸ್ಟೀಲ್‌ನಿಂದ ತಯಾರಿಸಲಾಗಿದೆ.
* ಪ್ರತಿ ಬೋಗಿಯಲ್ಲಿ 128 ಮಂದಿ ಪ್ರಯಾಣಿಸಬಹುದಾಗಿದೆ.
* ಡಬ್ಬಲ್ ಡೆಕರ್ ನಲ್ಲಿ ಮೇಲೆ 54, ಕೆಳಗೆ 54 ಕುಳಿತುಕೊಳ್ಳುವ ಸಾಮರ್ಥ್ಯವಿದೆ.
* 8 ಬೋಗಿಗಳಲ್ಲಿ ಒಟ್ಟಾರೆ 1024 ಜನ ಕುಳಿತುಕೊಂಡು ಪ್ರಯಾಣಿಸಬಹುದು.
* ರಾಜಧಾನಿ ಮತ್ತು ಶತಾಬ್ದಿ ರೈಲುಗಳಲ್ಲಿ ನೀಡಿರುವ ಎಲ್ಲ ಸೌಕರ್ಯಗಳೂ ಇವೆ.
* ಸ್ಲೀಪರ್ ವ್ಯವಸ್ಥೆ ಸದ್ಯಕ್ಕೆ ನೀಡಲಾಗಿಲ್ಲ. ಪ್ರಯಾಣ ದರ ಇನ್ನೂ ಘೋಷಿಸಬೇಕಿದೆ.
* 500 ಕಿ.ಮೀ. ವ್ಯಾಪ್ತಿಯೊಳಗೆ ಸಂಚರಿಸುವುದಕ್ಕೆ ಮಿತಿ ಮಾಡಲಾಗಿದೆ.
* ಇದರ ಸಾಮಾನ್ಯ ವೇಗ ಪ್ರತಿ ಗಂಟೆಗೆ 160 ಕಿ.ಮೀ. ಆಗಿದೆ. (ಗರಿಷ್ಠ180 ಕಿ.ಮೀ/ಗಂಟೆ)

ಶತಾಬ್ದಿಗಿಂತ ಹೆಚ್ಚಿನ ವೇಗವನ್ನು ಈ ರೈಲಿಗೆ ನೀಡಲಾಗಿದೆಯಾದರೂ ಎಲ್ಲಾ ರೀತಿಯ ಸುರಕ್ಷಿತಾ ಕ್ರಮಗಳನ್ನು ಅಳವಡಿಸಲಾಗಿದೆ. ಅಪಘಾತ ಸಂದರ್ಭದಲ್ಲಿ ಹೆಚ್ಚಿನ ತೊಂದರೆ ಉಂಟಾಗದಂತೆ ರೈಲನ್ನು ವಿನ್ಯಾಸ ಮಾಡಲಾಗಿದೆ ಎಂದು ಪ್ರದೀಪ್ ಹೇಳಿದ್ದಾರೆ.

ಟ್ವಿಟ್ಟರಲ್ಲಿ ನಮ್ಮನ್ನು ಹಿಂಬಾಲಿಸಿ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X