2ನೇ ತ್ರೈಮಾಸಿಕದಲ್ಲಿ ಇನ್ಫಿಗೆ ನಿವ್ವಳ ಲಾಭ
ಮುಂಬೈ,
ಅ. 16 : ಇನ್ಫೋಸಿಸ್ ಟೆಕ್ನಾಲಜೀಸ್ ಕಳೆದ ಸೆಪ್ಟೆಂಬರ್‌ಗೆ ಅಂತ್ಯವಾದ 2ನೇ ತ್ರೈಮಾಸಿಕ ಫಲಿತಾಂಶವನ್ನು ಪ್ರಕಟಿಸಿದ್ದು, ನಿವ್ವಳ ಲಾಭ ಗಳಿಕೆಯಲ್ಲಿ ಶೇ.13.1ರಷ್ಟು ಪ್ರಗತಿ ದಾಖಲಿಸಿದೆ. ಈ ಅವಧಿ ಯಲ್ಲಿ 1,732 ಕೋಟಿ ರೂ. ನಿವ್ವಳ ಲಾಭ ಗಳಿಸಿರುವ ಕಂಪನಿ, 30ನೇ ವಾರ್ಷಿಕ ದಿನಾಚರಣೆಯ ಪ್ರಯುಕ್ತ ಪ್ರತಿ ಷೇರಿಗೆ 30 ರೂ.ಗಳ ವಿಶೇಷ ಡಿವಿಡೆಂಡ್ ಘೋಷಿಸಿದೆ. id="toptextpromo">ಉದ್ದೇಶಿತ
10 ರೂ.ಗಳ ಮಧ್ಯಂತರ ಡಿವಿಡೆಂಡ್ ಹೊರತಾಗಿ ಇದು ಸಿಗಲಿದೆ. ಗ್ರಾಹಕರೊಂದಿಗಿನ ಉತ್ತಮ ಬಾಂಧವ್ಯ ಹಾಗೂ ಹೊಸ ಹೂಡಿಕೆಗಳ ಪರಿಣಾಮ ಇನ್ಫೋಸಿಸ್ ಲಾಭ ಗಳಿಕೆಯಲ್ಲಿ ಮುನ್ನಡೆ ಕಾಯ್ದುಕೊಂಡಿದೆ. 'ಆರ್ಥಿಕ ಪರಿಸ್ಥಿತಿ ಸವಾಲಿನಿಂದ ಕೂಡಿದ್ದರೂ, ನಾವು ಗ್ರಾಹಕರೊಂದಿಗಿನ ಬಾಂಧವ್ಯವನ್ನು ಉತ್ತಮಪಡಿಸಿಕೊಂಡಿದ್ದೇವೆ. id='are-slot-1' class='oiad oi-axt oiadv'> id='top-searched-articles'>ಹೊಸ
ಹೂಡಿಕೆಯಲ್ಲಿ ಯಶಸ್ವಿಯಾಗಿದ್ದೇವೆ. ಆದ್ದರಿಂದ ಈ ತ್ರೈಮಾಸಿಕದಲ್ಲಿ ಮತ್ತಷ್ಟು ಮುಂದುವರಿಯಲು ಸಾಧ್ಯವಾಗಿದೆ ಎಂದು ಕಂಪನಿಯ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಎಸ್. ಗೋಪಾಲಕೃಷ್ಣನ್ ತಿಳಿಸಿದ್ದಾರೆ. ಅಂತಾರಾಷ್ಟ್ರೀಯ ಹಣಕಾಸು ವರದಿಗಳ ದರ್ಜೆಯ ಪ್ರಕಾರ 2009-10ರ ಸಾಲಿನ ಸೆಪ್ಟೆಂಬರ್ ತ್ರೈ ಮಾಸಿಕದಲ್ಲಿ ಕಂಪನಿಯ ನಿವ್ವಳ ಲಾಭ 1,535 ಕೋಟಿ ರೂ.ಗಳಾಗಿವೆ ಎಂದು ಇನ್ಫೋಸಿಸ್ ಮುಂಬಯಿ ಷೇರು ವಿನಿಮಯ ಕೇಂದ್ರಕ್ಕೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ.











Click it and Unblock the Notifications