ಐಫೆಲ್ ಗೋಪುರದ ಮೇಲೆ ಉಗ್ರರ ಕಣ್ಣು

ಪ್ಯಾರೀಸ್ ನ ಐಫೆಲ್ ಟವರ್, ಕ್ಯಾಥೆಡ್ರೆಲ್ ಹಾಗೂ ಬರ್ಲಿನ್ ನ ಕೇಂದ್ರಿಯ ನಿಲ್ದಾಣಗಳನ್ನು ಮುಂಬೈ ಮಾದರಿ ದಾಳಿ ನಡೆಸಿ ನಾಶ ಪಡಿಸಲು ಉಗ್ರರು ತಯಾರಿ ನಡೆಸಿದ್ದಾರೆ ಎಂಡು ಅಮೆರಿಕ ಗುಪ್ತಚರ ಸಂಸ್ಥೆ ಹೇಳಿದೆ.
ಆದರೆ, ದಾಳಿಯ ರೂಪುರೇಷೆ, ದಿನಾಂಕ, ಯಾವ ಉಗ್ರಗಾಮಿ ಸಂಘಟನೆ ಎಂಬಮಾಹಿತಿ ಇನ್ನೂ ಲಭ್ಯವಾಗಿಲ್ಲ. ಆದರೆ, ಯುರೋಪ್ ಗೆ ತೆರಳುವ ಅಮೆರಿಕದ ನಾಗರೀಕರಿಗೆ ಉಗ್ರರ ದಾಳಿ ಸಾಧ್ಯತೆ ಬಗ್ಗೆ ಎಚ್ಚರವಹಿಸುವಂತೆ ಸೂಚಿಸಲಾಗಿದೆ.
ಬರ್ಲಿನ್ ನ ಅಲೆಕ್ಸಾಂಡರ್ ಪ್ಲಾಟ್ಜ್ ಟಿವಿ ಟವರ್, ಬ್ರಂಡೆನ್ ಬರ್ಗ್ ಗೇಟ್, ಹೋಟೆಲ್ ಅಡ್ಲೊನ್ ಕೂಡಾ ಉಗ್ರರ ಹಿಟ್ ಲಿಸ್ಟ್ ನಲ್ಲಿ ಸೇರಿದೆ. ಐಫೆಲ್ ಟವರ್ ಸೇರಿದಂತೆ ಎಲ್ಲಾ ಐತಿಹಾಸಿಕ ಸ್ಥಳಗಳಲ್ಲಿ ಬಿಗಿ ಭದ್ರತೆಯನ್ನು ಒದಗಿಸಲಾಗಿದೆ.












Click it and Unblock the Notifications