ಸುಪ್ರೀಂಕೋರ್ಟ್ ಗೆ ಬಾಬ್ರಿ ಸಮಿತಿ ಮೇಲ್ಮನವಿ

ಪ್ರಸ್ತುತ ರಾಮಲಲ್ಲಾ ಇರುವ ಸ್ಥಳ ರಾಮಮಂದಿರ ನಿರ್ಮಾಣಕ್ಕೆ ಬಿಡಬೇಕು ಮತ್ತು ಅದರ ಹೊರಗಿನ ಜಾಗ ಬಾಬ್ರಿ ಮಸೀದಿ ಕ್ರಿಯಾ ಸಮಿತಿಗೆ ಸೇರಬೇಕು ಮತ್ತು ಉಳಿದ ಮೂರನೇ ಒಂದು ಭಾಗವನ್ನು ಇನ್ನೊಂದು ಹಿಂದೂ ಸಂಥಟನೆ ನಿರ್ಮೋಹಿ ಅಖಾಡಕ್ಕೆ ನೀಡಬೇಕು ಎಂದು ಹೇಳಿದೆ.
ನ್ಯಾಯಮೂರ್ತಿಗಳಾದ ಸಿಬಘತ್ ಉಲ್ಲಾ ಖಾನ್, ನ್ಯಾ. ಧರಂ ವೀರ್ ಶರ್ಮಾ ಮತ್ತು ನ್ಯಾ. ಸುಧೀರ್ ಅಗರವಾಲ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಈ ಐತಿಹಾಸಿಕ ತೀರ್ಪನ್ನು ಲಖನೌ ಪೀಠದ 21ನೇ ಕೋಣೆಯಿಂದ ನೀಡಿದೆ. ಅಕ್ಟೋಬರ್ 1ರಂದು ನಿವೃತ್ತರಾಗಿ ನಿರ್ಗಮಿಸುತ್ತಿರುವ ನ್ಯಾ. ಶರ್ಮಾ ಅವರು ತೀರ್ಪನ್ನು ಸರಿಯಾಗಿ 3.30ಕ್ಕೆ ಮೊದಲು ಓದಲು ಪ್ರಾರಂಭಿಸಿದರು. ಮೂರೂ ನ್ಯಾಯಮೂರ್ತಿಗಳು ಪ್ರತ್ಯೇಕವಾಗಿ ತೀರ್ಪನ್ನು ನೀಡಿದ್ದಾರೆ.
ಸೆಲ್ ಫೋನಿನಲ್ಲಿ ಕನ್ನಡ ಓದುವ ಸಂಭ್ರಮ | ದಟ್ಸ್ ಕನ್ನಡ ಹೂವಿನಂಗಡಿ 24/7 | ಕನ್ನಡ ಸಿನಿಮಾ SMS | ಕನ್ನಡ ಸುದ್ದಿಗಳ SMS












Click it and Unblock the Notifications