ಇಂಟರ್ ನೆಟ್ ಇದ್ದರಷ್ಟೇ ವ್ಯಾಪಾರಕ್ಕೆ ವ್ಯಾಪಕ ಲಾಭ

ಸಣ್ಣ ಪ್ರಮಾಣದ ಉದ್ದಿಮೆಯಿಂದ ಹಿಡಿದು, ಮಧ್ಯಮ, ಭಾರಿ ಗಾತ್ರದ ಕೈಗಾರಿಕೆಗಳಿಗೂ ಕೂಡಾ ಇಂಟರ್ ನೆಟ್ ಸಹಾಯಕವಾಗಬಲ್ಲದು. 'ಇಂಟರ್ ನೆಟ್ ಎಂಬುದು ಸಾಫ್ಟ್ ವೇರ್ ಕಂಪೆನಿಗಳ ಅಗತ್ಯತೆ, ಇತರೆ ಕಂಪೆನಿಗಳಿಗೆ ಅದರ ಅವಶ್ಯಕತೆ ಇಲ್ಲ' ಎಂಬ ಅಘೋಷಿತ ಮಾತು ಉದ್ದಿಮೆ ರಂಗಗಳಲ್ಲಿ ಚಾಲ್ತಿಯಲ್ಲಿದೆ. ಇದು ಸತ್ಯಕ್ಕೆ ದೂರವಾದ ಮಾತು.
ನಿಮ್ಮ ವ್ಯಾಪಾರ ವಹಿವಾಟು ವರ್ಲ್ಡ್ ವೈಡ್ ವೆಬ್ ಗೆ ಒಮ್ಮೆ ಸೇರಿದರೆ ಸಾಕು ಹಲವಾರು ಅವಕಾಶಗಳು ನಿಮ್ಮ ಕಂಪೆನಿ ಬಾಗಿಲು ತಟ್ಟಲಾರಂಭಿಸುತ್ತದೆ. ಮಾರ್ಕೆಟಿಂಗ್, ಜಾಹೀರಾತು, ಕಂಪೆನಿಯ ವರ್ಚಸ್ಸು ಹೆಚ್ಚಿಸುವುದಕ್ಕೆ, ಸಂವಹನ ಸಂಪರ್ಕ ಸಾಧಿಸುವುದಕ್ಕೆ, ಗ್ರಾಹಕರೊಡನೆ ಸದಾ ನೇರ ಸಂಪರ್ಕ ಹೊಂದುವುದಕ್ಕೆ ಹಾಗೂ ಕಡಿಮೆ ಅವಧಿಯಲ್ಲಿ ಉತ್ತಮ ಉತ್ಪನ್ನಗಳನ್ನು ಹೊರ ತರುವುದಕ್ಕೆ ಇಂಟರ್ ನೆಟ್ ಸಹಕಾರಿಯಾಗಲಿದೆ.
ಇತ್ತೀಚೆಗೆ ಸಾಕಷ್ಟು ಜನಪ್ರಿಯತೆ ಗಳಿಸಿರುವ ಬ್ಲಾಗ್ ಗಳನ್ನು ಹೊಂದಿದರೆ, ವೆಬ್ ಪ್ರಪಂಚದಲ್ಲಿ ಕಾಲಿರಿಸಿದಂತೆ ಎಂಬ ಭ್ರಮೆ ಇದ್ದರೆ ಈಗಲೇ ಬದಲಾಯಿಸಿಕೊಳ್ಳಿ. ಬ್ಲಾಗ್ ಗಳು ಸರಳವಾಗಿ ಆಕರ್ಷಕವಾಗಿ ಕಂಡರೂ ಅದು ಬಾಡಿಗೆ ಮನೆ ಇದ್ದಂತೆ, ಸ್ವಂತ ವೆಬ್ ತಾಣ ಹೊಂದಿ, ಸ್ವಂತ ಮನೆಯಲ್ಲಿ ಇರುವ ಸುಖ ಪಡೆಯುವ ಹಂಬಲ ನಿಮ್ಮದಾಗಬೇಕು.
ಬ್ಲಾಗ್ ನಲ್ಲಿರುವ ವಿಷಯಗಳು ನಿಮ್ಮದಾದರೂ ಅದರ ಒಡೆತನ ಗೂಗಲ್ ಅಥವಾ ಇನ್ಯಾವುದೋ ಸಂಸ್ಥೆಗೆ ಸೇರಿರುತ್ತದೆ. ಗೂಗಲ್ ನ ನಿಯಮಾವಳಿಗೆ ತಕ್ಕಂತೆ ನಿಮ್ಮ ಲೇಖನಗಳು, ಚಿತ್ರಗಳು ಹಾಗೂ ಪೂರ್ತಿ ಬ್ಲಾಗ್ ಕುಣಿಯಬೇಕಾಗುತ್ತದೆ. ಅಲ್ಲದೆ, ನಿಯಮ ಮುರಿದರೆ ಇದ್ದಕ್ಕಿದ್ದಂತೆ ನಿಮ್ಮ ಬ್ಲಾಗ್ ಅನ್ನು ಶಾಶ್ವತವಾಗಿ ಕಳೆದುಕೊಳ್ಳುವ ಭಯ ಕೂಡ ಇರುತ್ತದೆ. ಇದಲ್ಲದೆ, ನಿಮ್ಮ ಅಗತ್ಯಕ್ಕೆ ಬ್ಲಾಗ್ ಅನ್ನು ವಿನ್ಯಾಸಗೊಳಿಸಿಕೊಳ್ಳಬೇಕಾದರೆ ಕೊಂಚ ಪರಿಣತಿ ಕೂಡಾ ಬೇಕು. ಇಲ್ಲದಿದ್ದರೆ ಒಂದು ಮಾಡಲು ಹೋಗಿ ಮತ್ತೊಂದು ಮಾಡಿದ ಹಾಗೆ ಆದರೆ ಕಷ್ಟ.
ಆನ್ ಲೈನ್ ನಲ್ಲಿ ನಿಮ್ಮ ಕಂಪೆನಿಗೆ ಆದ ಒಂದು ಪ್ರತ್ಯೇಕ ಸ್ಥಾನ ಸಿಗಬೇಕಾದರೆ ವಿಶಿಷ್ಟವಾದ ವೆಬ್ ತಾಣವನ್ನು ಹೊಂದುವುದು ಮುಖ್ಯ. ನಿಮ್ಮ ಸಂಸ್ಥೆಯ ಉತ್ಪನ್ನ ಹಾಗೂ ಸೇವೆಗಳ ಬಗ್ಗೆ ವೆಬ್ ಮೂಲಕ ನಿಮ್ಮ ಗ್ರಾಹಕರು, ಸ್ನೇಹಿತರು, ಕುಟುಂಬ ವರ್ಗ ಹಾಗೂ ಇನ್ನಿತರ ಸಾರ್ವಜನಿಕರು ಸುಲಭವಾಗಿ ತಿಳಿದುಕೊಳ್ಳಬಹುದು.
ವೆಬ್ ತಾಣಕ್ಕೊಂದು ಸೂಕ್ತ ಹೆಸರು:ಮೊದಲೇ ಹೇಳಿದಂತೆ ಬ್ಲಾಗ್ ನಲ್ಲಿ ಈ ಸೌಲಭ್ಯಗಳು ಸಿಗುವುದಿಲ್ಲ. ಪರಿಣತಿ ಇಲ್ಲದಿದ್ದರೆ ನಿಮ್ಮ ಬ್ಲಾಗ್ ಅನ್ನು ಉಪಯೋಗಿಸಿ ಪರಿಪೂರ್ಣ ಲಾಭ ಗಳಿಸಲು ಸಾಧ್ಯವಿಲ್ಲ. ವೆಬ್ ತಾಣಗಳಲ್ಲಿ .in, .edu, .org, .net ಹೀಗೆ ಆಯ್ಕೆಗಳಿದ್ದರೂ ಉದ್ದಿಮೆಗಳಿಗೆ .com ಬಳಸುವುದು ಉತ್ತಮ.
ವೆಬ್ ತಾಣ ರೂಪಿಸುವ ಮೊದಲು ವೆಬ್ ತಾಣಕ್ಕೊಂದು ಸೂಕ್ತ ಹೆಸರು ಪಡೆಯಬೇಕು. ನಿಮ್ಮ ಸಂಸ್ಥೆ ಅಥವಾ ಬ್ರ್ಯಾಂಡ್ ನೇಮ್ ಹೆಸರನ್ನು ಬಳಸಿ ನೋಂದಣಿ ಮಾಡಿಕೊಳ್ಳಬಹುದು.
ನೀವು ನೋಂದಣಿ ಮಾಡಿಕೊಳ್ಳುವ ಹೆಸರು ಸರ್ಚ್ ಇಂಜಿನ್ ಗೆ ಸಿಗುವ ರೀತಿಯಲ್ಲಿದ್ದರೆ ಸೂಕ್ತ. ಹಾಗೂ ಡೊಮೈನ್ ನೇಮ್ ಆನ್ನು ಎಷ್ಟು ಕಾಲಕ್ಕಾಗಿ ಖರೀದಿಸಿದ್ದೀರಾ ಎಂಬುದು ಮುಖ್ಯ. ಕಡಿಮೆ ಅವಧಿಯ ತಾತ್ಕಾಲಿಕ ಡೊಮೆನ್ ನೇಮ್ ಪಡೆದು ಆಮೇಲೆ ಕಷ್ಟ ಪಡುವ ಬದಲು ದೀರ್ಘಾವಧಿ ಅವಧಿಗೆ ಡೊಮೈನ್ ಪಡೆಯುವುದು ಜಾಣತನ.
ಡೊಮೈ ನ್ ನೇಮ್ ನೋಂದಣಿ ಆದ ಮೇಲೆ, ಅಗತ್ಯಕ್ಕೆ ತಕ್ಕ ಹಾಗೆ ಇಮೇಲ್ ವಿಳಾಸಗಳನ್ನು ರೂಪಿಸುವುದು ಮುಖ್ಯ. ಏಕೆಂದರೆ, ನಿಮ್ಮ ಗ್ರಾಹಕರೊಡನೆ ಸಂಪರ್ಕ ವಿಳಾಸ ಇದೇ ಇ ಮೇಲ್ ಗಳ ಮೂಲಕ ಆಗುವುದು ಜಾಸ್ತಿ.
ಇದಲ್ಲದೆ, ಸ್ವಂತದ ವೆಬ್ ತಾಣದ ಹೆಸರು ಹೊಂದಿದ ಮೇಲೆ ನಿಮಗೆ ಅಗತ್ಯ ವಿರುವಷ್ಟು ಡೊಮೈನ್ ಸ್ಪೇಸ್ ಖರೀದಿಸಬೇಕು. ನಂತರ ಸುಲಭ ರೀತಿಯಲ್ಲಿ ಅದನ್ನು ನಿಮ್ಮ ಅಗತ್ಯಕ್ಕೆ ತಕ್ಕಂತೆ ಪಳಗಿಸಿಕೊಳ್ಳಬೇಕು. ಸರಳವಾದ HTML ಪೇಜುಗಳಿಂದ ಹಿಡಿದು, ವರ್ಲ್ಡ್ ಪ್ರೆಸ್ ಮಾದರಿ CMS ಬಳಕೆಗೆ ಕೂಡಾ ಅವಕಾಶವಿರಬೇಕು.
ಒಟ್ಟಿನಲ್ಲಿ ಡೊಮೈನ್ ಹೋಸ್ಟಿಂಗ್ ಮೂಲಕ ನಿಮ್ಮ ಸಂಸ್ಥೆಯ ಪ್ರಭೆಯನ್ನು ಎಲ್ಲೆಡೆ ಹರಡಬಹುದು. ಆಗಿದ್ದ್ದರೆ ಇನ್ನೇಕೆ ತಡ ಈಗಲೇ ನೋಂದಾಯಿಸಿ ಹಾಗೂ ನಿಮ್ಮ ವ್ಯಾಪಾರ ವೃದ್ಧಿಸುವ ಹೊಸ ವಿಧಾನವನ್ನು ಕಂಡುಕೊಳ್ಳಿ
ನಿಮ್ಮದೇ ಆದ ವೆಬ್ ತಾಣ ಹೊಂದಬೇಕೆ ಹೆಚ್ಚಿನ ಮಾಹಿತಿಗೆ ಕ್ಲಿಕ್ಕಿಸಿ
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications