ರಾಣಿಯೊಂದಿಗೆ ಲೈಂಗಿಕ ಸಂಬಂಧ ಸಚಿವ ಔಟ್!

ಬಹುಪತ್ನಿತ್ವವನ್ನು ನಿಷ್ಠೆಯಿಂದ ಪಾಲಿಸುತ್ತಿರುವ ಸ್ವಾಝೀಲ್ಯಾಂಡ್ ದೊರೆ ಯಮ್ಸವಾಟಿ (King Mswati III) ತನ್ನ ಪತ್ನಿಯೊಬ್ಬಳೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಕಾನೂನು ಮಂತ್ರಿಯನ್ನು ಸಂಪುಟದಿಂದ ವಜಾಗೊಳಿಸಿದ್ದಾರೆ. ಡುಮಿಸೊ ಮಾಂಬಾ ವಜಾಗೊಂಡ ಸಚಿವ. ದೊರೆ 12ನೇ ಪತ್ನಿ ನೊತಾಂಡಾ ದುಬೆಯೊಂದಿಗೆ ಕಾನೂನು ಸಚಿವ ರತಿಕ್ರೀಡೆಯಲ್ಲಿ ತೊಡಗಿರುವ ಛಾಯಾಚಿತ್ರಗಳನ್ನು ಪೊಲೀಸರು ದೊರೆಗೆ ತೋರಿಸಿದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ.
ರಾಷ್ಟ್ರದ ಆಡಳಿತಾತ್ಮಕ ರಾಜಧಾನಿಯ ಎಂಬಾನೆಯ ರಾಯಲ್ ವಿಲ್ಲಾಸ್ ಹೋಟೆಲ್ ನ ಮೇಲೆ ಪೊಲೀಸರು ದಾಳಿ ನಡೆಸಿದಾಗ ಕಾನೂನು ಸಚಿವ ಮತ್ತು ದೊರೆ 12ನೇ ಪತ್ನಿ ಸಿಕ್ಕಿಬಿದ್ದಿದ್ದರು. 22 ಹರೆಯದ ದುಬೆ ಸ್ವಾಝೀಲ್ಯಾಂಡ್ ನ ಸುಂದರಿ ಪಟ್ಟವನ್ನೂ ಧರಿಸಿದ್ದರು. ಇದೀಗ ದುಬೆಯನ್ನು ಗೃಹ ಬಂಧನದಲ್ಲಿರಿಸಲಾಗಿದೆ. ವಜಾಗೊಂಡ ಸಚಿವ ಮಾಂಬಾಗೆ ದೀರ್ಘ ಕಾಲದ ಸೆರೆವಾಸ ವಿಧಿಸುವ ಸಾಧ್ಯತೆ ಇದೆ.42 ವರ್ಷ ವಯಸ್ಸಿನ ದೊರೆ 14 ಪತ್ನಿಯರಿಂದ, 23 ಮಕ್ಕಳನ್ನು ಹೊಂದಿದ್ದಾರೆ.
ಸೆಲ್ ಫೋನಿನಲ್ಲಿ ದಟ್ಸ್ ಕನ್ನಡ ಓದುವ ಸಂಭ್ರಮ












Click it and Unblock the Notifications