ಮುಸ್ಲಿಂ ಹುಡುಗಿ ಮತ್ತು ಹಿಂದೂ ಹುಡುಗನ ಮೇಲೆ ಹಲ್ಲೆ

ಪ್ರತ್ಯಕ್ಷದರ್ಶಿಗಳ ಪ್ರಕಾರ, ಮುವ್ವತ್ತಕ್ಕೂ ಹೆಚ್ಚು ಮಂದಿಯಿದ್ದ ಗುಂಪು ಹಂಪನಕಟ್ಟೆಯಲ್ಲಿನ ಐಸ್ ಕ್ರೀಮ್ ಪಾರ್ಲರ್ ನುಗ್ಗಿತು. ಈ ಗುಂಪನ್ನು ತಡೆಯಲು ಬಂದ ಐಸ್ ಕ್ರೀಮ್ ಪಾರ್ಲರ್ ಸಿಬ್ಬಂದಿಯನ್ನು ಗುಂಪು ಥಳಿಸಿತು. ಅವರ ಮುಖ್ಯ ಗುರಿ ಮುಸ್ಲಿಂ ಹುಡುಗಿಯಾಗಿದ್ದಳು ಎಂದಿದ್ದಾರೆ.
ಸರಿ ಸುಮಾರು ಇಪ್ಪತ್ತು ಮಂದಿ ಹುಡುಗಿಯನ್ನು ಹಿಡಿದು ಮನಬಂದಂತೆ ಥಳಿಸಿದರು. ಹುಡುಗನ ಮೇಲೂ ದೈಹಿಕವಾಗಿ ಹಲ್ಲೆ ನಡೆಸಲಾಗಿದೆ ಎಂದು ಘಟನಾ ಸ್ಥಳದಲ್ಲಿದ್ದ ವಿದ್ಯಾರ್ಥಿ ಮೊಹಮ್ಮದ್ ನಜೀರ್ ಎಂಬುವವರು ತಿಳಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಮಂಗಳೂರು (ಉತ್ತರ) ಪೊಲೀಸರು ಐದು ಮಂದಿಯನ್ನು ಬಂಧಿಸಿದ್ದಾರೆ.
ಘಟನೆಯಲ್ಲಿ ಯಾವುದೇ ಸಂಘಟನೆಯ ಕೈವಾಡ ಇರುವ ಬಗ್ಗೆ ನಮಗೆ ಮಾಹಿತಿಯಿಲ್ಲ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಸೀಮಂತ್ ಸಿಂಗ್ ತಿಳಿಸಿದ್ದಾರೆ. ಘಟನೆಯಲ್ಲಿ ಭಾಗಿಯಾಗಿರುವ ಎಲ್ಲರನ್ನೂ ಬಂಧಿಸುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.












Click it and Unblock the Notifications